ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದ ಸಿ.ಎಂ.ಮನೀಶ್ ನನ್ನು ಕರ್ತವ್ಯದಿಂದ ವಜಾ ಗೊಳಿಸಿರುವ ಪುರಸಭೆ ಆಡಳಿತ ಮಂಡಳಿ ವಿರುದ್ಧ ದಲಿತ ಸಂಘಟನೆಗಳ ಸಮನ್ವಯ ಸಮಿತಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಎರಡನೇ ದಿನಕ್ಕೆ ಮುಂದುವರೆದಿದೆ.ಪುರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಥಳಕ್ಕೆ ಧಾವಿಸಿ ಅಹವಾಲು ಆಲಿಸದ ಹಿನ್ನೆಲೆಯಲ್ಲಿ ಧರಣಿ ನಿರತರು ತಮಟೆ ಚಳವಳಿ ನಡೆಸಿದರು. ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಎದುರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ರಾಜ್ಯ ಮತ್ತು ಜಿಲ್ಲಾಮಟ್ಟದ ವಿವಿಧ ದಲಿತಪರ ಸಂಘಟನೆ ಗಳ ಮುಖಂಡರು ಬೆಂಬಲ ಸೂಚಿಸುವ ಮೂಲಕ ಧರಣಿಯಲ್ಲಿ ಪಾಲ್ಗೊಂಡಿದ್ದರು. ರಾಜ್ಯ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಸಂಚಾಲಕ ಕೃಷ್ಣ, ಸಮಾನಮನಸ್ಕರ ವೇದಿಕೆ ಮುಖಂಡ ಚೀರನಹಳ್ಳಿ ಹಳ್ಳಿ ಲಕ್ಷ್ಮಣ ಸೇರಿದಂತೆ ಹಲವು ಮುಖಂಡರುಗಳು ನೌಕರ ಮನೀಶ್ ನನ್ನು ಕೆಲಸದಿಂದ ವಜಾ ಗೊಳಿಸಿರುವುದನ್ನು ಖಂಡಿಸಿದರು.
ಧರಣಿಯಲ್ಲಿ ಮುಖಂಡರಾದ ಅಂದಾನಿ ಸೋಮನಹಳ್ಳಿ , ಚಿಕ್ಕರಸಿನಕೆರೆ ಮೂರ್ತಿ, ಎಂ. ಶಿವು, ಅಂಬರೀಶ ಮತ್ತಿತರರು ಭಾಗವಹಿಸಿದ್ದರು.ರೈತರನ್ನು ಅಭಿವೃದ್ಧಿ ಪಡಿಸಿ ಉಳಿಸಲು ಭೂಮಿಪುತ್ರ ಫೌಂಡೇಷನ್ ಅಸ್ತಿತ್ವಕ್ಕೆ: ಆರ್ಯ ಲೋಕೇಶ್
ಮಂಡ್ಯ:ರೈತರು ವ್ಯವಸಾಯ ಬಿಟ್ಟು ಪಟ್ಟಣಗಳ ಕಡೆ ಮುಖ ಮಾಡುತ್ತಿದ್ದಾರೆ. ರೈತರನ್ನು ಹಳ್ಳಿಗಳಲ್ಲೆ ಉಳಿಸಿ ಅಭಿವೃದ್ಧಿ ಪಡಿಸುವ ದೃಷ್ಠಿಯಿಂದ ಭೂಮಿ ಪುತ್ರ ಫೌಂಡೇಶನ್ ಅನ್ನು ರಾಜ್ಯಾದ್ಯಂತ ಅಸ್ಥಿತ್ವಕ್ಕೆ ತರಲಾಗುತ್ತಿದೆ ಎಂದು ಫೌಂಡೇಶನ್‌ನ ಸಂಸ್ಥಾಪಕ ರಾಜ್ಯಾಧ್ಯಕ್ಷ ಆರ್ಯ ಲೋಕೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ ವ್ಯವಸಾಯದ ಬಗ್ಗೆ, ವ್ಯವಸಾಯವನ್ನು ಲಾಭದಾಯಕವಾಗಿ ರೂಪಿಸಿಕೊಳ್ಳುವ ಸಲುವಾಗಿ ಹಾಗೂ ರೈತರಿಗೆ ದೊರೆಯುವ ಸರ್ಕಾರಿ ಯೋಜನೆಗಳನ್ನು ದೊರೆಕಿಸುವುದು ನಮ್ಮ ಸಂಘಟನೆ ಉದ್ದೇಶವಾಗಿದೆ ಎಂದರು.ನಮ್ಮ ಸಂಘಟನೆಯು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ, ತಾಲೂಕು, ಹಳ್ಳಿಗಳಲ್ಲಿ ಆಸಕ್ತ ಸದಸ್ಯರನ್ನು ಹೊಂದಿದೆ. ಪ್ರತಿ ರೈತನ ಮನೆಗೆ ಸರ್ಕಾರಿ ಸವಲತ್ತು, ಯೋಜನೆಗನ್ನು ತಲುಪಿಸಲು ಹಾಗೂ ಅಧಿಕಾರಿಗಳು ಮತ್ತು ರೈತರ ನಡುವಿನ ಉತ್ತಮ ಸಂಬಂಧ ಬೆಳೆಸುವ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದರು.
ಅಲ್ಲದೇ ರೈತರಿಗಾಗಿ ರಾಜ್ಯದಲ್ಲಿ ರೈತ ರಕ್ಷಣಾ ಅಭಿಯಾನ, ರಾಸಾಯನಿಕ ಮುಕ್ತ ಅಭಿಯಾನ, ಅಧಿಕ ಇಳುವರಿ ಪೋಷಕಾಂಶ ಕೊರತೆ ಚರ್ಚೆ, ರೈತ ಜಾಗೃತಿ ಅಭಿಯಾನ ಮರಳಿ ಗೂಡಿಗೆ ಅಭಿಯಾನ, ಅನ್ನದ ಋಣ ಅಭಿಯಾನ, ನಿರಾಳ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಫೌಂಡೇಶನ್ ವತಿಯಿಂದ ನಡೆಸಲಾಗುತರ್‍ತಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಪ್ರಣವ್, ಶಂಕರಲಿಂಗೇಗೌಡ, ಸಚಿನ್, ಮಂಜುನಾಥ್ ಇದ್ದರು.