ಕ್ಯಾನ್ಸರ್‌ ರೋಗ ಪತ್ತೆಗೆ ಎಐ ಸಹಕಾರಿ

| Published : Jul 07 2024, 01:18 AM IST

ಸಾರಾಂಶ

ವೈದ್ಯವಿಜ್ಞಾನವು ಸಾಕಷ್ಟು ಬದಲಾವಣೆಗೊಳ್ಪಡುತ್ತಿದ್ದು, ಮುಂಬರುವ ವರ್ಷಗಳಲ್ಲಿ ಕೃತಕ ಬುದ್ದಿಮತ್ತೆಯು ಆರೋಗ್ಯ ಕ್ಷೇತ್ರದಲ್ಲಿ ಗಣನೀಯವಾಗಿ ಪ್ರಾಮುಖ್ಯತೆ ಪಡೆಯಲಿದೆ. ಅದರಲ್ಲಿಯೂ ಮುಖ್ಯವಾಗಿ ಕ್ಯಾನ್ಸರ್‌ನ ನಿಖರವಾದ ರೋಗಪತ್ತೆಗೆ ಸಹಕಾರಿಯಾಗಲಿದೆ. ಆದರೆ, ಚಿಕಿತ್ಸೆಯಲ್ಲಿ ಕುರುಡು ನಂಬಿಕೆ ಮತ್ತು ಅವಲಂಬನೆ ಇರಬಾರದು ಎಂದು ಪದ್ಮಶ್ರೀ ಪುರಸ್ಕೃತ, ಹಿರಿಯ ಕ್ಯಾನ್ಸರ್‌ ತಜ್ಞವೈದ್ಯ ದೆಹಲಿ ಕ್ಯಾನ್ಸರ್‌ ಇನ್‌ಸ್ಟಿಟ್ಯೂಟನ ಸಂಸ್ಥಾಪಕ ನಿರ್ದೇಶಕ ಡಾ.ರಾಜೇಶ ಕೆ.ಗ್ರೋವರ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ವೈದ್ಯವಿಜ್ಞಾನವು ಸಾಕಷ್ಟು ಬದಲಾವಣೆಗೊಳ್ಪಡುತ್ತಿದ್ದು, ಮುಂಬರುವ ವರ್ಷಗಳಲ್ಲಿ ಕೃತಕ ಬುದ್ದಿಮತ್ತೆಯು ಆರೋಗ್ಯ ಕ್ಷೇತ್ರದಲ್ಲಿ ಗಣನೀಯವಾಗಿ ಪ್ರಾಮುಖ್ಯತೆ ಪಡೆಯಲಿದೆ. ಅದರಲ್ಲಿಯೂ ಮುಖ್ಯವಾಗಿ ಕ್ಯಾನ್ಸರ್‌ನ ನಿಖರವಾದ ರೋಗಪತ್ತೆಗೆ ಸಹಕಾರಿಯಾಗಲಿದೆ. ಆದರೆ, ಚಿಕಿತ್ಸೆಯಲ್ಲಿ ಕುರುಡು ನಂಬಿಕೆ ಮತ್ತು ಅವಲಂಬನೆ ಇರಬಾರದು ಎಂದು ಪದ್ಮಶ್ರೀ ಪುರಸ್ಕೃತ, ಹಿರಿಯ ಕ್ಯಾನ್ಸರ್‌ ತಜ್ಞವೈದ್ಯ ದೆಹಲಿ ಕ್ಯಾನ್ಸರ್‌ ಇನ್‌ಸ್ಟಿಟ್ಯೂಟನ ಸಂಸ್ಥಾಪಕ ನಿರ್ದೇಶಕ ಡಾ.ರಾಜೇಶ ಕೆ.ಗ್ರೋವರ ಹೇಳಿದರು.ಕಾಹೆರ, ಕೆಎಲ್ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ಹಾಗೂ ಕೆಎಲ್ಇ ಕ್ಯಾನ್ಸರ್‌ ಆಸ್ಪತ್ರೆ ಶನಿವಾರ ಏರ್ಪಡಿಸಿದ್ದ ಪಯೋನಿಯರಿಂಗ್‌ ಕ್ಯಾನ್ಸರ್‌ ಸಿಂಪೊಸಿಯಂ ಉದ್ಘಾಟಿಸಿ ಮಾತನಾಡಿದ ಅವರು, ಎಐ ಕೂಡ ಕೂಡ ಮಾನವನಿಂದ ತಯಾರಿಸಲ್ಪಟ್ಟಿದ್ದು, ಎಐನಲ್ಲಿ ಸಾಕಷ್ಟು ಮಾಹಿತಿ ಇದೆ. ಅದು ನಮಗೆ ಸಹಕಾರಿಯಾಗಲಿದ್ದು, ಎಐಗಿಂತ ಮಾನವನ‌ಮೆದಳು ಸಾಕಷ್ಟು ಪ್ರಬಲವಾಗಿದೆ. ಕೇವಲ ನೆನಪಿನ‌ಶಕ್ತಿಗಾಗಿ ಇದನ್ನು ಬಳಸಬಹುದು. ನಮ್ಮ ಕೌಶಲ್ಯವೂ ಕೂಡ ಇರಬೇಕು. ಪೆಥಾಲಾಜಿ ವರದಿಗನುಗುಣವಾಗಿ ಚಿಕಿತ್ಸೆ ನೀಡಬೇಕು ಎಂದು ಸಲಹೆ ನೀಡಿದರು.ಇಂದಿನ‌ ಮಕ್ಕಳು ಕೂಡ ಎಐಗಿಂತ ಸಾಕಷ್ಟು ಮುಂದೆ ಇದ್ದಾರೆ. ಎಐನಿಂದ ಕಲಿಯಲು ಅವಕಾಶವಿದೆ. ಎಐನಿಂದ ಯಾವುದೇ ಕೆಲಸಗಳನ್ನು ಮಾನವನಿಂದ ಕಸಿದುಕೊಳ್ಳುವುದಿಲ್ಲ. ಈಗಾಗಲೇ ಮಾಧ್ಯಮದಲ್ಲಿ ಸಾಕಷ್ಟು ಎಐ ಅ್ಯಂಕರ್‌ಗಳಿದ್ದಾರೆ. ಎಐ ರೊಬೊಟ್ ಇದೆ. ಅದರಿಂದ ಧನಾತ್ಮಕ ಕಾರ್ಯಗಳನ್ನು ಮಾಡಿಸಲಾಗುತ್ತಿದೆ. ಯಾವುದೇ ತಪ್ಪುಗಳಿಲ್ಲದೇ ಮಾಹಿತಿಗಳನ್ನು ಪಡೆದುಕೊಳ್ಳಬಹುದು. ದೇಶದಲ್ಲಿ ಕಂಡುಬರುವ ಶೇ.40 ರಷ್ಟು ಕ್ಯಾನ್ಸರ್‌ ತಂಬಾಕಿನಿಂದ ಬಂದೆರುಗುತ್ತದೆ. ಕ್ಯಾನ್ಸರ್‌ ಅನ್ನು ಶೀಘ್ರ ಪತ್ತೆ ಮಾಡಿ ಚಿಕಿತ್ಸೆ ನೀಡಿದರೇ ಸುಮಾರು 20ಕ್ಕೂ ಅಧಿಕ ವರ್ಷಗಳವರೆಗೆ ಆತನನ್ನು ಸಾವಿನ ದವಡೆಯಿಂದ ಪಾರು ಮಾಡಬಹುದು. ನಿಮ್ಮ ಬುದ್ದಿಮತ್ತೆ ಮಾತ್ರ ಕೆಲಸ ಮಾಡಬಹುದು ಎಂದು ತಿಳಿಸಿದರು.ಕಾಹೆರ ಉಪಕುಲಪತಿ ಡಾ.ನಿತಿನ ಗಂಗಾಣೆ ಮಾತನಾಡಿ, ಕ್ಯಾನ್ಸರ್‌ ರೋಗಿಗಳಿಗೆ ಚಿಕಿತ್ಸೆ ನೀಡುವುದು ಅತ್ಯಂತ ಕಠಿಣವಾದ ಕಾರ್ಯ. ರೋಗಿಗಳು ಕೂಡ ಚಿಕಿತ್ಸೆ ಪಡೆಯಲು ಹಿಂಜರಿಯುವುದರಿಂದ ಸಾವಿನ ದವಡೆಗೆ ಸಿಲುಕಿಕೊಳ್ಳುತ್ತಾರೆ. ಆದ್ದರಿಂದ ಅವರ ಮನವೊಲಿಸಿ ಚಿಕಿತ್ಸೆ ನೀಡಬೇಕಾಗಿದೆ. ಟಾಟಾ ಮೆಮೊರಿಯಲ್ ಆಸ್ಪತ್ರೆಯಂತೆ ಸಮಾಜಮುಖಿಯಾಗಿ ಸೇವೆ ಸಲ್ಲಿಸಲು ದಾನಿಗಳು ಮುಂದೆ ಬರಬೇಕು. ಸಮಾಜ ಆರೋಗ್ಯವಾಗಿರಲು ಸಹಕರಿಸುವಂತೆ ಎಂದು ತಿಳಿಸಿದರು.

ಕ್ಯಾನ್ಸರ್‌ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ.ಜಾಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಕ್ಯಾನ್ಸರ್‌ ಕುರಿತು ಅರಿವು ಮೂಡಿಸಲು ಅನೇಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ. ಬೋನ್ ಮ್ಯಾರೋ ಕಸಿ ಮಾಡಲು ಸಕಲ ವ್ಯವಸ್ಥೆ ಕಲ್ಪಿಸಲಾಗಿದ್ದು, ಬಹುಬೇಗನೆ ಕಸಿ ಮಾಡಲು ಪ್ರಾರಂಭಿಸಲಾಗುತ್ತದೆ ಎಂದರು. ಬೆಂಗಳೂರಿನ ಕಿದ್ವಾಯಿ ಮೆಮೊರಿಯಲ್ ಇನ್‌ಸ್ಟಿಟ್ಯೂಟ್‌ ಆಫ್ ಅಂಕಾಲಾಜಿಯ ಚಿಕ್ಕಮಕ್ಕಳ ಕ್ಯಾನ್ಸರ್‌ ತಜ್ಞವೈದ್ಯ ಡಾ.ವಸುಂದರಾ ಕೈಲಾಸನಾಥ ಹಾಗೂ ಕೆಎಲ್ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ಚಿಕ್ಕಮಕ್ಕಳ ಕ್ಯಾನ್ಸರ್‌ ತಜ್ಞವೈದ್ಯ ಡಾ.ಅಭಿಲಾಷಾ.ಎಸ್ ಉಪನ್ಯಾಸ ನೀಡಿದರು.ಸಮಾರಂಭದಲ್ಲಿ ಡಾ.ವಿ.ಡಿ.ಪಾಟೀಲ, ನಿರ್ದೇಶಕ ಡಾ.ಆರ್.ಬಿ.ನೇರ್ಲಿ, ಕಾಹೆರನ ಕುಲಸಚಿವ ಡಾ.ಎಂ.ಎಸ್.ಗಣಾಚಾರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.