ಸೈಬರ್ ಸೆಕ್ಯೂರಿಟಿಯಲ್ಲಿ ಎಐ ತಂತ್ರಜ್ಞಾನ ಪ್ರಮುಖ: ಪ್ರಶಾಂತ ಬಡಿಗೇರ

| Published : Feb 13 2024, 12:46 AM IST

ಸೈಬರ್ ಸೆಕ್ಯೂರಿಟಿಯಲ್ಲಿ ಎಐ ತಂತ್ರಜ್ಞಾನ ಪ್ರಮುಖ: ಪ್ರಶಾಂತ ಬಡಿಗೇರ
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆ: ಸೈಬರ್ ಸೆಕ್ಯೂರಿಟಿ ವಿಷಯದಲ್ಲಿ ಯಲ್ಲಿ ಕ್ರತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ತಂತ್ರಜ್ಞಾನದ ಬಳಕೆ ವೇಗವಾಗಿ ಹೆಚ್ಚುತ್ತಿದೆ. ಅನೇಕ ಕಂಪನಿಗಳು ತಮ್ಮ ಸೈಬರ್ ಸೆಕ್ಯೂರಿಟಿ ಕಾರ್ಯತಂತ್ರದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಪ್ರಮುಖ ಸಾಧನವನ್ನಾಗಿ ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಬೆಳಗಾವಿಯ ಐಸೆಕ್ ಸೈಬರ್ ಸೆಕ್ಯೂರಿಟಿ ಸಲ್ಯೂಷನ್ಸ್ ನ ಮುಖ್ಯ ಎಂಜಿನಿಯರ್ ಪ್ರಶಾಂತ ಬಡಿಗೇರ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸೈಬರ್ ಸೆಕ್ಯೂರಿಟಿ ವಿಷಯದಲ್ಲಿ ಯಲ್ಲಿ ಕ್ರತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ತಂತ್ರಜ್ಞಾನದ ಬಳಕೆ ವೇಗವಾಗಿ ಹೆಚ್ಚುತ್ತಿದೆ. ಅನೇಕ ಕಂಪನಿಗಳು ತಮ್ಮ ಸೈಬರ್ ಸೆಕ್ಯೂರಿಟಿ ಕಾರ್ಯತಂತ್ರದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಪ್ರಮುಖ ಸಾಧನವನ್ನಾಗಿ ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಬೆಳಗಾವಿಯ ಐಸೆಕ್ ಸೈಬರ್ ಸೆಕ್ಯೂರಿಟಿ ಸಲ್ಯೂಷನ್ಸ್ ನ ಮುಖ್ಯ ಎಂಜಿನಿಯರ್ ಪ್ರಶಾಂತ ಬಡಿಗೇರ ನುಡಿದರು.

ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಇನಫಾರ್ಮೇಶನ್ ಸೈನ್ಸ್‌ ವಿಭಾಗದಿಂದ ವಿದ್ಯಾರ್ಥಿಗಳಿಗೆ ಎಐ ಇನ್ ಸೈಬರ್ ಸೆಕ್ಯೂರಿಟಿ ವಿಷಯದ ಕುರಿತು ಹಮ್ಮಿಕೊಂಡ ಮೂರು ದಿನಗಳ ಕೌಶಲ್ಯ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಐಟಿ ತಂತ್ರಜ್ಞಾನದ ಮೇಲೆ ಅವಲಂಬಿತವಾಗುತ್ತಿರುವ ಇಂದಿನ ದಿನಗಳಲ್ಲಿ ಸೈಬರ್ ಬೆದರಿಕೆಗಳು ಹೆಚ್ಚಾಗುತ್ತಿವೆ. ತಾಂತ್ರಿಕ ಕ್ಷೇತ್ರವು ಸೈಬರ್ ಭದ್ರತೆಯಲ್ಲಿ ವೃತ್ತಿಪರ ಎಂಜಿನಿಯರುಗಳ ಕೊರತೆ ಎದುರಿಸುತ್ತಿದೆ ಎಂದು ಹೇಳಿದರು. ಐಎಸ್ಸಿ ವಿಭಾಗದ ಮುಖ್ಯಸ್ಥ ಡಾ.ಸಾಧನಾ ಬಂಗಾರಶೆಟ್ಟಿ ಅಧ್ಯಕ್ಷೀಯ ಮಾತುಗಳನ್ನಾಡಿದರು.

ಪ್ರೊ.ಸಂದೀಪ್ ಕೂಗಲಿ ಹಾಗೂ ಪ್ರೊ.ಪಿ.ಕೆ.ದೇಶಪಾಂಡೆ ಕಾರ್ಯಕ್ರಮವನ್ನು ಎಐಸಿಟಿಇ ಐಡಿಯಾ ಲ್ಯಾಬ್ ಸಹಯೋಗದೊಂದಿಗೆ ಸಂಯೋಜನೆ ಮಾಡಿದ್ದರು. ಐಸೆಕ್ ಸೈಬರ್ ಸೆಕ್ಯೂರಿಟಿ ಸೊಲ್ಯೂಷನ್ಸ್ ಬೆಳಗಾವಿಯ ಅನೀಶ್ ವೆರ್ಣೆಕರ್ ಉಪಸ್ಥಿತರಿದ್ದರು.