ಐಗಳಿ: ವಿವಿಧೆಡೆ ಕನಕದಾಸರ ಜಯಂತಿ ಆಚರಣೆ

| Published : Nov 19 2024, 12:46 AM IST

ಸಾರಾಂಶ

ಐಗಳಿ ಗ್ರಾಮ ಪಂಚಾಯತಿ ಸಭಾಭವನದಲ್ಲಿ ಕನಕದಾಸರ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಗ್ರಾಪಂ ಅಧ್ಯಕ್ಷೆ ಶಕುಂತಲಾ ಪಾಟೀಲ ಮತ್ತು ಸದಸ್ಯ ಸೋಮು ಬಂಡರಬಟ್ಟಿ ಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಐಗಳಿ

ಸ್ಥಳೀಯ ಗ್ರಾಮ ಪಂಚಾಯತಿ ಸಭಾಭವನದಲ್ಲಿ ಕನಕದಾಸರ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಗ್ರಾಪಂ ಅಧ್ಯಕ್ಷೆ ಶಕುಂತಲಾ ಪಾಟೀಲ ಮತ್ತು ಸದಸ್ಯ ಸೋಮು ಬಂಡರಬಟ್ಟಿ ಪೂಜೆ ನೆರವೇರಿಸಿದರು.

ಬಳಿಕ ಕನಕ ವೃತ್ತದಲ್ಲಿ ಕನಕದಾಸರ ಮೂರ್ತಿಗೆ ಸಿ.ಎಸ್. ನೇಮಗೌಡ ಹಾಗೂ ಓಂಕಾರಯ್ಯ ಮಠಪತಿ, ಶಿವಾನಂದ ಸಿಂಧೂರ, ಅಪ್ಪಸಾಬ ಪಾಟೀಲ ಪೂಜೆ ನೆರವೇರಿಸಿದರು. ಕಾಳಿದಾಸ ಸಭಾಭವನದಲ್ಲಿ ಗ್ರಾಪಂ ಸದಸ್ಯ ಬಸವರಾಜ ಬಿರಾದಾರ ಪೂಜೆ ನೆರವೇರಿಸಿದರು.

ಕೆಎಎಸ್ ಅಧಿಕಾರಿ ಮಲಗೌಡ ಝರೆ, ಧುರೀಣರಾದ ಸಿ.ಎಸ್. ನೇಮಗೌಡ, ಶಿವಾನಂದ ಸಿಂಧೂರ, ಗಿರೀಶ ಕುಲಕರ್ಣಿ, ಗ್ರಾಪಂ ಸದಸ್ಯ ಬಸವರಾಜ ಬಿರಾದಾರ, ರಾಜಕುಮಾರ ದಳವಾಯಿ ಮಾತನಾಡಿದರು. ಅಪ್ಪಾಸಾಬ ಪಾಟೀಲ, ಕೃಷ್ಣಾ ಶುಗರ್ ನಿರ್ದೇಶಕ ಪ್ರಲ್ಹಾದ ಪಾಟೀಲ, ಪಿಡಿಒ ರಾಜೇಂದ್ರ ಪಾಠಕ, ಮಲ್ಲಪ್ಪ ಬೇವಿನಗಿಡದ, ಡಾ.ಎಸ್.ಎಸ್. ಸನದಿ, ಗ್ರಾಪಂ ಸದಸ್ಯರಾದ ರವೀಂದ್ರ ಹಾಲಳ್ಳಿ, ಶ್ರೀಶೈಲ ಮಿರ್ಜಿ, ಶಿವನಿಂಗ ಅರಟಾಳ, ಸುರೇಶ ಬಿಜ್ಜರಗಿ, ಸೋಮನಿಂಗ ಝರೆ, ರಮೇಶ ಹುಣಶಿಕಟ್ಟಿ, ಪರಶು ಹುಣಶಿಕಟ್ಟಿ, ಪರಶು ಸನದಿ, ನಾಗೇಶ ದಳವಾಯಿ, ಶಿವಾನಂದ ಸನದಿ, ಸಾಗರ ಕೋಹಳ್ಳಿ ಸೇರಿದಂತೆ ಇತರರು ಇದ್ದರು.