10 ಕೋಟಿ ಬಿಜೆಪಿ ಸದಸ್ಯತ್ವ ಮಾಡುವ ಗುರಿ: ಶಂಕರಗೌಡ

| Published : Oct 10 2024, 02:18 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ: ಬಿಜೆಪಿ ಎಂಬುದು ಒಂದು ಪಕ್ಷ ಮಾತ್ರವಲ್ಲ. ಕಾರ್ಯಕರ್ತರಲ್ಲಿ ರಕ್ತಗತವಾಗಿರುವ ಸಿದ್ಧಾಂತವಾಗಿದೆ. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ 10 ಕೋಟಿಗೂ ಅಧಿಕ ಸದಸ್ಯತ್ವ ಮಾಡುವ ಗುರಿ ಹೊಂದಲಾಗಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಂಕರಗೌಡ ಪಾಟೀಲ(ಡೊಮನಾಳ) ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ:ಬಿಜೆಪಿ ಎಂಬುದು ಒಂದು ಪಕ್ಷ ಮಾತ್ರವಲ್ಲ. ಕಾರ್ಯಕರ್ತರಲ್ಲಿ ರಕ್ತಗತವಾಗಿರುವ ಸಿದ್ಧಾಂತವಾಗಿದೆ. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ 10 ಕೋಟಿಗೂ ಅಧಿಕ ಸದಸ್ಯತ್ವ ಮಾಡುವ ಗುರಿ ಹೊಂದಲಾಗಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಂಕರಗೌಡ ಪಾಟೀಲ(ಡೊಮನಾಳ) ಹೇಳಿದರು.

ತಾಲೂಕಿನ ಅಥರ್ಗಾ ಮಹಾಶಕ್ತಿ ಕೇಂದ್ರದ ಹೊರ್ತಿ ಗ್ರಾಮದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲೆ ಹಾಗೂ ಇಂಡಿ ತಾಲೂಕಿನಲ್ಲಿ ಜನರು ಬಿಜೆಪಿ ಸದಸ್ಯತ್ವ ಪಡೆಯಲು ಮುಂದೆ ಬರುತ್ತಿದ್ದಾರೆ. ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ದೇಶಾದ್ಯಂತ ಸದಸ್ಯತ್ವ ನೋಂದಣಿ ಆರಂಭಿಸಿದೆ. ಜಿಲ್ಲೆಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ವಿಶೇಷ ಆದ್ಯತೆ ನೀಡುವ ಸಂಸದರಾದ ರಮೇಶ ಜಿಗಜಿಣಗಿ ಅವರು, ಪದಾಧಿಕಾರಿಗಳು, ಕಾರ್ಯರ್ತರು ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಹೇಳಿದ್ದಾರೆ. ಬಿಜೆಪಿ ಸದಸ್ಯತ್ವ ಅಭಿಯಾನವು ಸದೃಢ ಭಾರತವನ್ನು ಕಟ್ಟಲು ನೆರವಾಗೋಣ, ಪ್ರಧಾನಿ ಮೋದಿ ಅವರ ಕೈ ಬಲಪಡಿಸೊಣ ಎಂದು ಹೇಳಿದರು.ಪ್ರಧಾನಿ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ದೇಶ ಅಭಿವೃದ್ದಿ ಹೊಂದುತ್ತಿದೆ ಎಂದು ಹೇಳಿದರು. ಮಹಾದೇವ ರಜಪೂತ,ಸಿದ್ದಯ್ಯ ಮಠ, ಶಿವಾನಂದ ಪಾಟೀಲ, ಪರಗೊಂಡ ಅಂಕೋಲೆ, ಬಸವರಾಜ ಬೊಳೆಗಾಂವ, ಮಲ್ಲಿಕಾರ್ಜುನ ಸಾಲೋಟಗಿ, ಜಗದೀಶ ಪೂಜಾರಿ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.