ಸಾರಾಂಶ
ಜೇವರ್ಗಿ ತಾಲೂಕಿನಲ್ಲಿ ಬರುವ ರಂಜಣಗಿ, ಹುಲ್ಲೂರ್, ಇಟಗಾ, ಅಂಕಲಗಾ ಸೇರಿದಂತೆ ಅನೇಕ ಪಂಚಾಯ್ತಿಗಳಲ್ಲಿ ಸರಣಿ ಸಭೆಗಳನ್ನು ನಡೆಸಿದ ಶಾಸಕ, ಕೆಕೆಆರ್‌ಡಿಬಿ ಅಧ್ಯಕ್ಷರಾದ ಡಾ. ಅಜಯ್ ಸಿಂಗ್ ಕಾಂಗ್ರೆಸ್ ಪರ ಮತ ಯಾಚಿಸಿದರು.
ಕನ್ನಡಪ್ರಭ ವಾರ್ತೆ ಕಲಬುರಗಿ
ಜೇವರ್ಗಿ ತಾಲೂಕಿನಲ್ಲಿ ಬರುವ ರಂಜಣಗಿ, ಹುಲ್ಲೂರ್, ಇಟಗಾ, ಅಂಕಲಗಾ ಸೇರಿದಂತೆ ಅನೇಕ ಪಂಚಾಯ್ತಿಗಳಲ್ಲಿ ಸರಣಿ ಸಭೆಗಳನ್ನು ನಡೆಸಿದ ಶಾಸಕ, ಕೆಕೆಆರ್‌ಡಿಬಿ ಅಧ್ಯಕ್ಷರಾದ ಡಾ. ಅಜಯ್ ಸಿಂಗ್ ಕಾಂಗ್ರೆಸ್ ಪರ ಮತ ಯಾಚಿಸಿದರು.ರಂಜಣಗಿ ಪಂಚಾಯ್ತಿ ವ್ಯಾಪ್ತಿಯ ದೇಸಣಗಿ, ಬದನಿಹಾಳ, ಹುಲ್ಲೂರ ಗ್ರಾಪಂ ವ್ಯಾಪ್ತಿಯ ಹುಲ್ಲೂರ, ಹರನಾಳ ಕೆ., ನಾರಾಯಣಪುರ, ಅಂಕಲಗಾ ಗ್ರಾಮ ಪಂಚಾಯ್ತಿ ಹಂತದಲ್ಲಿರುವ ಹಂಚಿನಾಳ ಎಸ್ಎನ್, ಮೂಗನ ಇಟಗಾ ಪಂಚಾಯ್ತಿ ಅಡಿಯಲ್ಲಿರುವ ಗ್ರಾಮಗಳ ಮುಖಂಡರು, ಕಾರ್ಯಕರ್ತರ ಸಬೆ ನಡೆಸಿ ಕಾಂಗ್ರೆಸ್‌ನ ಅಭ್ಯರ್ಥಿ ರಾಧಾಕೃಷ್ಣ ದೊಡ್ಮನಿ ಪರವಾಗಿ ಮತ ಯಾಚಿಸಿದರು.
ಈ ಪಂಚಾಯ್ತಿ ಹಂತದಲ್ಲಿ ನಡೆದ ಸಭೆಗಳಲ್ಲೇ ಅನೇಕ ಮುಖಂಡರು ಬಿಜೆಪಿ, ಜೆಡಿಎಸ್, ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಶರಣಬಸಪ್ಪ ಜೋಗುರ್,ವಿಜಯ್ ಕೇದಾರಲಿಂಗಯ್ಯ, ಖಾಜಾ ಪಟೇಲ್ ರಂಜಣಗಿ, ಪಂಡಿತ್ ಪವಾರ್ ರಂಜಣಗಿ, ದತ್ತಪ್ಪ ರಂಜಣಗಿ, ನಬಿ ಸಾಬ್ ದೇಸಣಗಿ, ಭೀಮಾಶಂಕರ್ ವಿಭೂತಿ, ಬೈಲಪ್ಪ ನೆಲೊಗಿ,ಅಪ್ಪಸಾಬ ಹೊಸಮನಿ , ಸಂಗಣ್ಣ ಇಟಗಾ ,ಶರಣಬಸಪ್ಪ ಜೋಗುರ್, ಶಿವ ಸಾಹು ಬಾಸಗಿ , ಚಂದ್ರಶೇಖರ್ ಮಲ್ಲಾಬಾದ್, ಶಿವ ಸಾಹು ಬಾಸಗಿ , ಚಂದ್ರಶೇಖರ್ ಮಲ್ಲಾಬಾದ್ ಸೇರಿದಂತೆ ಅನೇಕ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಯುವ ಕಾರ್ಯಕರ್ತರು ಉಪಸ್ಥಿತರಿದ್ದರು.