ಅ.ಭಾ.ಚೆಸ್‌ ಟೂರ್ನಿ: ಇಂದ್ರಜಿತ್‌ ಮುನ್ನಡೆ

| Published : Oct 20 2023, 01:00 AM IST

ಸಾರಾಂಶ

ಚೆಸ್ಸ್‌ ಟೂರ್ನಮೆಂಟ್ಟ್‌- ಇಂದ್ರಜಿತ್ತ್‌ ಮುನ್ನಡೆ
ಮಂಗಳೂರು: ಮಂಗಳೂರಿನ ಮಿನಿ ಪುರಭವನದಲ್ಲಿ ನಡೆಯುತ್ತಿರುವ ಅಖಿಲ ಭಾರತ ಮುಕ್ತ ಫಿಡೆ ರೇಟೆಡ್‌ ಚೆಸ್ ಟೂರ್ನಿಯ ಐದನೇ ಸುತ್ತಿನ ಕೊನೆಗೆ ಗುರುವಾರ ಮಹಾರಾಷ್ಟ್ರದ ಇಂದ್ರಜಿತ್‌ ಮಹೀಂದ್ರೇಕರ್‌ ಅವರು ಮುನ್ನಡೆ ಕಾಯ್ದುಕೊಂಡಿದ್ದಾರೆ. ಇಂದ್ರಜಿತ್‌ ಮಹೀಂದ್ರೇಕರ್‌, ನೀಗೇಶ್‌, ಅನಿಲ್‌ ಕುಮಾರ್‌, ಕೃಪೇಶ್‌ ಮತ್ತು ಆದಿತ್ಯ ಸಾವಲ್ಕರ್‌ ತಲಾ 5 ಅಂಕ ಪಡೆದು ಮುನ್ನಡೆ ಕಾಯ್ದುಕೊಂಡರು. ಇಂದ್ರಜಿತ್‌ ಅವರು ಆಂಧ್ರಪ್ರದೇಶದ ಅಫ್ರಿದಿ ಟಿ.ಖಾನ್‌ ಅವರನ್ನು ಹಿಂದಿಕ್ಕಿ ಮುನ್ನಡೆಗೆ ಬಂದಿದ್ದಾರೆ. ಅದರಂತೆಯೇ ತಮಿಳ್ನಾಡಿನ ನಾಗೇಶ್‌ ಅವರು ಶರ್ಷ ಬೇಕರ್‌ ಅವರನ್ನು, ಕೇರಳದ ಮಾಜಿ ಚಾಂಪಿಯನ್‌ ಅನಿಲ್‌ ಕುಮಾರ್‌ ಅವರು ದ.ಕ.ಜಿಲ್ಲೆಯ ವಾಮನ ಶೆಟ್ಟಿ ಅವರನ್ನು ಮಣಿಸಿದರು.