ಅಲ್‌ ಮದೀನ ಹೆಣ್ಣು ಮಕ್ಕಳ ಪಿಯು ಕಾಲೇಜು: ವಿವಿಧ ಕ್ಲಬ್‌ ಉದ್ಘಾಟನೆ

| Published : Jul 10 2025, 01:45 AM IST

ಅಲ್‌ ಮದೀನ ಹೆಣ್ಣು ಮಕ್ಕಳ ಪಿಯು ಕಾಲೇಜು: ವಿವಿಧ ಕ್ಲಬ್‌ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಉಳ್ಳಾಲ ತಾಲೂಕು ಮಂಜನಾಡಿಯ ಅಲ್ ಮದೀನಾ ಹೆಣ್ಮಕ್ಕಳ ಪಿಯು ಕಾಲೇಜಿನ 2025-26ನೇ ಸಾಲಿನ ವಿವಿಧ ಕ್ಲಬ್ ಗಳ ಚಟುವಟಿಕೆ ಉದ್ಘಾಟನೆ ಇತ್ತೀಚೆಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಉಳ್ಳಾಲ

ಮಂಜನಾಡಿಯ ಅಲ್ ಮದೀನಾ ಹೆಣ್ಮಕ್ಕಳ ಪಿಯು ಕಾಲೇಜು 2025-26ನೇ ಸಾಲಿನ ವಿದ್ಯಾರ್ಥಿನಿಯರ ಪಠ್ಯೇತರ ಚಟುವಟಿಕೆಗಳಿಗಾಗಿ ವಿವಿಧ ಕ್ಲಬ್ ಗಳಿಗೆ ಇತ್ತೀಚೆಗೆ ಚಾಲನೆ ನೀಡಲಾಯಿತು.

ಅಲ್ ಮದೀನಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದಿರ್ ಸಖಾಫಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ದಿಕ್ಸೂಚಿ ಭಾಷಣ ಮಾಡಿದರು. ಅಲ್ ಮದೀನಾ ಕಾರ್ಯನಿರ್ವಾಹಕ ನಿರ್ದೇಶಕ ಮುಹಮ್ಮದ್ ಕುಂಞಿ ಅಮ್ಜದಿ ಉದ್ಘಾಟಿಸಿದರು.

ಶೈಕ್ಷಣಿಕ ನಿರ್ದೇಶಕ ಅಬೂಸ್ವಾಲಿಹ್ ಅಝ್ಹರಿ, ಬರಹಗಾರ ಅಬ್ದುರ್ ರಝಾಕ್‌ ನಾವೂರು , ಉಪನ್ಯಾಸಕರಾದ ಮುನೀರ್ ಸಖಾಫಿ ಅಲ್ ಕಾಮಿಲ್ ಮುಂತಾದವರು ಮಾತನಾಡಿದರು.

ಅಲ್ ಮದೀನಾ ಇಂಗ್ಲೀಷ್ ಮೀಡಿಯಂ ಮುಖ್ಯೋಪಾಧ್ಯಾಯ ಮನ್ಸೂರು ಹಿಮಮಿ, ಷರೀಅತ್ ಉಪನ್ಯಾಸಕ ಹಾಫಿಳ್ ಶಮ್ಸುದ್ದೀನ್ ನ‌ಈಮಿ ಉಪಸ್ಥಿತರಿದ್ದರು. ಬಳಿಕ ನಡೆದ ಕ್ಲಬ್ ಹೆಸರು ಹಾಗೂ ಲೋಗೋ ಅನಾವರಣ ಸಭೆಯಲ್ಲಿ ಪ್ರಾಂಶುಪಾಲ ಸಂಗೀತಾ, ಉಪನ್ಯಾಸಕಿಯರಾದ ಚೇತನಾ, ಶುಷ್ಮಾ, ಅಕ್ಷತಾ, ದಿವ್ಯಾ, ಮೋಕ್ಷಿತಾ, ದಿಲ್ಶಾನ ಬಾನು ಉಪಸ್ಥಿತರಿದ್ದರು. ಇಕೋ ಕ್ಲಬ್ ನ ಪ್ರಧಾನ ಕಾರ್ಯದರ್ಶಿಯಾಗಿ ಖದೀಜಾ ನಿಹಾ, ಜೊತೆ ಕಾರ್ಯದರ್ಶಿಯಾಗಿ ಮಿ‌‌ಸ್ರಿಯಾ, ಸ್ಪೋರ್ಟ್ ಕ್ಲಬ್ ಪ್ರಧಾನ ಕಾರ್ಯದರ್ಶಿಯಾಗಿ ಆಯಿಶಾ ಸಹ್ಲಾ‌ ಹಾಗೂ ಫಾಯಿಝಾ, ಸಾಯನ್ಸ್ ಪ್ರಧಾನ ಕಾರ್ಯದರ್ಶಿಯಾಗಿ ಸಫಿಯ್ಯಾ ಹಾಗೂ ಸಹ ಕಾರ್ಯದರ್ಶಿಯಾಗಿ ಫಾತಿಮಾ ಇಪ್ತಿಶಾಮಾ ಹಾಗೂ ಫಾತಿಮಾ ನಿಹಾ, ಫೈನ್ ಆರ್ಟ್ ಮತ್ತು ಲಿಟರೇಚರ್ ಕ್ಲಬ್ ಪ್ರಧಾನ ಕಾರ್ಯದರ್ಶಿಯಾಗಿ ಶೈಮಾ ಹಾಗೂ ಸಹ ಕಾರ್ಯದರ್ಶಿಯಾಗಿ ಹನೂ‌ನ ಆಯ್ಕೆಯಾದರು. ವಿದ್ಯಾರ್ಥಿನಿ ನಫೀಸತ್ ಸನಾ ಪ್ರಾರ್ಥನೆ ನೆರವೇರಿಸಿದರು. ಖದೀಜಾ ನಿಹಾ ಸ್ವಾಗತಿಸಿದರು. ವಿದ್ಯಾರ್ಥಿ‌ ನಾಯಕಿ ಫಾತಿಮತ್ ಮುನೀಝಾ ಕಾರ್ಯಕ್ರಮ ನಿರೂಪಿಸಿದರು. ಫಾತಿಮತ್ ಶಮೀಮಾ ವಂದಿಸಿದರು.