ಸಾರಾಂಶ
ವಿಜಯಪುರ: ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನ ಹಿನ್ನೆಲೆಯಲ್ಲಿ ಭಾನುವಾರು ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರು ನಗರದ ಅಂಬೇಡ್ಕರ್ ವೃತ್ತದ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಅಂಬೇಡ್ಕರ್ ಅವರ ಕನಸಿನ ದೇಶಕ್ಕಾಗಿ ನಾವೆಲ್ಲ ಶ್ರಮಿಸಬೇಕು. ತಮ್ಮ ಜೀವವನ್ನೇ ತೇಯ್ದು ನಮ್ಮ ಬಾಳು ಬೆಳಗಿಸಿದ ಪುಣ್ಯಾತ್ಮನ ಬಯಕೆಗಳೆಲ್ಲ ಈಡೇರುವಂತೆ ನಾವೆಲ್ಲ ಸಂವಿಧಾನ ಬದ್ಧವಾಗಿ ಬದುಕಬೇಕು.
ವಿಜಯಪುರ: ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನ ಹಿನ್ನೆಲೆಯಲ್ಲಿ ಭಾನುವಾರು ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರು ನಗರದ ಅಂಬೇಡ್ಕರ್ ವೃತ್ತದ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಅಂಬೇಡ್ಕರ್ ಅವರ ಕನಸಿನ ದೇಶಕ್ಕಾಗಿ ನಾವೆಲ್ಲ ಶ್ರಮಿಸಬೇಕು. ತಮ್ಮ ಜೀವವನ್ನೇ ತೇಯ್ದು ನಮ್ಮ ಬಾಳು ಬೆಳಗಿಸಿದ ಪುಣ್ಯಾತ್ಮನ ಬಯಕೆಗಳೆಲ್ಲ ಈಡೇರುವಂತೆ ನಾವೆಲ್ಲ ಸಂವಿಧಾನ ಬದ್ಧವಾಗಿ ಬದುಕಬೇಕು. ಶಿಕ್ಷಣ, ಸಂವೇದನೆ, ಸಾಧನೆಗಳ ಮೂಲಕ ಅವರಿಗೆ ಗೌರವ ಸಲ್ಲಿಸುತ್ತ ಸೌಹಾರ್ದತೆ, ಮನುಷ್ಯ ಸಹಜ ಪ್ರೀತಿ-ಸಂಬಂಧಗಳನ್ನು ಕಾಪಾಡಿಕೊಳ್ಳೋಣ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು. ನಂತರ ಮಾನ್ಯ ಸಚಿವ ಎಂ.ಬಿ.ಪಾಟೀಲರ ಜತೆಗೂ ಪುಷ್ಪ ನಮನ ಸಲ್ಲಿಸಿದರು.