ನೇಹಾ ಹಿರೇಮಠ ಕೊಲೆಗೆ ಸಿಡಿದೆದ್ದ ಆಳಂದ ವಿದ್ಯಾರ್ಥಿ ಸಮೂಹ

| Published : Apr 23 2024, 12:51 AM IST

ಸಾರಾಂಶ

ಶಾಲಾ ಕಾಲೇಜುಗಳು ಜ್ಞಾನದ ದೇಗುಲಗಳು ಇಂತಹ ದೇಗುಲದಲ್ಲಿ ಹಾಡು ಹಗಲೇ ವಿದ್ಯಾರ್ಥಿನಿ ನೇಹಾ ಹಿರೇಮಠಳನ್ನು ಭೀಕರ ಹತ್ಯೆಯನ್ನು ಮಾಡಿರುವ ಘಟನೆ ನಿಜಕ್ಕೂ ವಿದ್ಯಾರ್ಥಿ ಸಮುದಾಯದಲ್ಲಿ ಭಯದ ವಾತಾವರಣ ಮೂಡಿಸಿದಂತಾಗಿದೆ.

ಕನ್ನಡಪ್ರಭ ವಾರ್ತೆ ಆಳಂದ

ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಘಟನೆ ರಾಜ್ಯ ಸರ್ಕಾರದ ವೈಫಲ್ಯವಾಗಿದೆ ಎಂದು ಆಳಂದ ಮಾಜಿ ಶಾಸಕ ಸುಭಾಷ್ ಆರ್. ಗುತ್ತೇದಾರ ಹೇಳಿದರು.

ಸೋಮವಾರ ಆಳಂದ ಪಟ್ಟಣದ ಬಸ್ ನಿಲ್ದಾಣದ ಎದುರು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತು ಹಾಗೂ ಆಳಂದ ನಾಗರಿಕರ ಹಿತರಕ್ಷಣಾ ವೇದಿಕೆಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಶಾಲಾ ಕಾಲೇಜುಗಳು ಜ್ಞಾನದ ದೇಗುಲಗಳು ಇಂತಹ ದೇಗುಲದಲ್ಲಿ ಹಾಡು ಹಗಲೇ ವಿದ್ಯಾರ್ಥಿನಿ ನೇಹಾ ಹಿರೇಮಠಳನ್ನು ಭೀಕರ ಹತ್ಯೆಯನ್ನು ಮಾಡಿರುವ ಘಟನೆ ನಿಜಕ್ಕೂ ವಿದ್ಯಾರ್ಥಿ ಸಮುದಾಯದಲ್ಲಿ ಭಯದ ವಾತಾವರಣ ಮೂಡಿಸಿದಂತಾಗಿದೆ ಅಲ್ಲದೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದರು.

ಜೆಡಿಎಸ್ ಮುಖಂಡೆ ಮಹೇಶ್ವರಿ ವಾಲಿ ಮಾತನಾಡಿ, ಈ ಘಟನೆಯಿಂದ ರಾಜ್ಯದ ವಿದ್ಯಾರ್ಥಿ ಸಮುದಾಯ ಭಯಭೀತ ಗೊಂಡಿದೆ. ಪೊಲೀಸರು ಕೂಡಲೇ ಸೂಕ್ತ ತನಿಖೆಯನ್ನು ಕೈಗೊಂಡು, ಅಪರಾಧಿಗೆ ಉಗ್ರ ಶಿಕ್ಷೆ ಆಗುವ ಹಾಗೆ ಮಾಡಿ ವಿದ್ಯಾರ್ಥಿನಿಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕಾಗಿದೆ ಎಂದರು.

ಬಸವರಾಜ ಬಿರಾದಾರ, ಸುನೀತಾ ಪೂಜಾರಿ, ವಿದ್ಯಾರ್ಥಿನಿ ಸುಷ್ಮಾ, ಐಶ್ವರ್ಯ ಹಾಗೂ ಗೌಡಪ್ಪ ಪಾಟೀಲ ಮಾತನಾಡಿ, ರಾಜ್ಯ ಸರ್ಕಾರ ದಿನದಿಂದ ದಿನಕ್ಕೆ ಹದಗೆಡುತ್ತಿರುವ ಕಾನೂನು ಸುವ್ಯವಸ್ಥೆಯ ಬಗ್ಗೆ ಸರಕಾರ ಗಮನ ಹರಿಸಲಿ ಎಂದರು.

ಆಳಂದ ಮಂಡಲ ಬಿಜೆಪಿ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ, ಮುಖಂಡರಾದ ವಿಠ್ಠಲರಾವ ಪಾಟೀಲ, ಮಲ್ಲಣ್ಣಾ ನಾಗೂರೆ, ಅಮೃತ ಬಿಬ್ರಾಣಿ, ಆನಂದರಾಯ ಗಾಯಕವಾಡ, ಪ್ರಕಾಶ ತೋಳೆ, ಲಕ್ಷ್ಮಣ ಬೀಳಗಿ, ಬೀರಣ್ಣಾ ವಗ್ಗಿ, ಯುವ ಮೋರ್ಚಾ ಅಧ್ಯಕ್ಷ ಸಚಿನ್ ಬಿರಾದಾರ, ಕರವೇ ಅಧ್ಯಕ್ಷ ಈರಣ್ಣಾ ಧಂಗಾಪೂರ, ಶ್ರೀರಾಮ ಸೇನೆಯ ಅಧ್ಯಕ್ಷ ಈರಣ್ಣ ಹತ್ತರಕಿ, ರೈತ ಮೋರ್ಚಾ ಅಧ್ಯಕ್ಷ ನಾಗರಾಜ ಶೇಗಜಿ, ನಗರ ಅಧ್ಯಕ್ಷ ಬಸವರಾಜ ಹತ್ತರಕಿ, ಮಹೇಶ ಸೂರೆ, ಅಣ್ಣಪ್ಪ ತಳಕೇರಿ, ಗಣೇಶ ಓನಮಶೆಟ್ಟಿ, ಕಿಟ್ಟಿ ಸಾಲೇಗಾಂವ, ಸಿದ್ದು ಹಿರೋಳಿ, ಅಶೋಕ ಘಾಣೂರೆ, ಷಣ್ಮುಖಯ್ಯ ಸ್ವಾಮಿ, ಸಿದ್ದು ಪಾಟೀಲ, ಶರಣಗೌಡ ಪಾಟೀಲ, ಮಹಾಂತೇಶ ಪೂಜಾರಿ, ಪುರಸಭೆ ಸದಸ್ಯರಾದ ಶಿವಪುತ್ರ ನಡಗೇರಿ, ಸೋಮಶೇಖರ ಹತ್ತರಕಿ, ಶ್ರೀಶೈಲ ಖಜೂರಿ, ಸಿದ್ದು ಪೂಜಾರಿ, ಬಿಜೆಪಿ ಪ್ರ. ಕಾರ್ಯದರ್ಶಿಗಳಾದ ಪ್ರಕಾಶ ಮಾನೆ, ಸೀತಾರಾಮ ಜಮಾದಾರ, ಎಬಿವಿಪಿಯ ಗಂಗಾಧರ ಹಂಜಗಿ, ಹಣಮಂತ ಬಗಲಿ, ರಾಹುಲ ಆರೆ, ತಾಯಪ್ಪ, ಶಾಂತಕುಮಾರ ಮೂಲಗೆ ಸೇರಿದಂತೆ ಆಳಂದ ಪಟ್ಟಣದ ನಾಗರಿಕರು ಹಾಗೂ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಶ್ರೀರಾಮ ಸೇನೆ ಹಾಗೂ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತು ವತಿಯಿಂದ ತಹಸೀಲದಾರರ ಮೂಲಕ ರಾಜ್ಯಪಾಲರಿಗೆ ಹಾಗೂ ಗೃಹ ಸಚಿವರಿಗೆ ಬರೆದ ಪ್ರತ್ಯೇಕ ಮನವಿ ಪತ್ರವನ್ನು ಸಲ್ಲಿಸಲಾಯಿತು. ಪೊಲೀಸ್ ಇಲಾಖೆಯ ಸಿಬ್ಬಂದಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.