ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಅಲಂಗಾರು ಲಯನ್ಸ್ ಕ್ಲಬ್ ವತಿಯಿಂದ ನಡೆದ ವಲಯಾಧ್ಯಕ್ಷರ ಭೇಟಿ ಕಾರ್ಯಕ್ರಮದಲ್ಲಿ ಐದು ಮಂದಿ ಸಮಾಜ ಸೇವಕರನ್ನು ಸನ್ಮಾನಿಸಲಾಯಿತು.ಅನಾಥ ಮಕ್ಕಳಿಗೆ ಆಶ್ರಯದಾತರಾಗಿರುವ ತನುಲಾ ತರುಣ್, ಸಮಾಜ ಸೇವಕ ವಲೇರಿಯನ್ ಪಿಂಟೊ ಹಾಗೂ ಬೈಕ್ ಅಪಘಾತದಲ್ಲಿ ನೆಲಕ್ಕುರುಳಿ ಬಿದ್ದ ಗಾಯಾಳುಗಳನ್ನು ಎತ್ತಿ ಆಸ್ಪತ್ರೆಗೆ ಸಾಗಿಸಿ ಬೈಕ್ ಸವಾರನ ಪ್ರಾಣ ಉಳಿಸುವಲ್ಲಿ ನೆರವಾದ ಆಳ್ವಾಸ್ ವಿದ್ಯಾರ್ಥಿಗಳಾದ ಶೀತಲ್, ಶೈನು ಹಾಗೂ ಜಿನ್ಸು ಅವರನ್ನು ಸನ್ಮಾನಿಸಲಾಯಿತು.ಸೇವಾ ಚಟುವಟಿಕೆಯ ಅಂಗವಾಗಿ ಪಾಲಡ್ಕದ ಕ್ಯಾನ್ಸರ್ ರೋಗಿ ಮಹಿಳೆಗೆ ಹಾಗೂ ಶಿಕ್ಷಣಕ್ಕಾಗಿ ಅಲೀಶಾ ಪ್ರಿಮಲ್ ರೇಗೋ ಅವರಿಗೆ ತಲಾ ಹತ್ತು ಸಾವಿರದಂತೆ ಧನಸಹಾಯ ನೀಡಲಾಯಿತು.ಅಲಂಗಾರು ಲಯನ್ಸ್ ಕ್ಲಬ್ ಅಧ್ಯಕ್ಷ ಅಮಿತ್ ಡಿಸಿಲ್ವ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರಾಂತೀಯ ಅಧ್ಯಕ್ಷ ಜಗದೀಶ್ಚಂದ್ರ ಡಿ.ಕೆ., ವಲಯ ಎರಡರ ಅಧ್ಯಕ್ಷ ಜೊಸ್ಸಿ ಮಿನೇಜಸ್, ಪ್ರಾಂತೀಯ ಎನ್ವೋಯ್ ಪ್ರವೀಣ್ ಚಂದ್ರ, ವಲಯ ಒಂದರ ಅಧ್ಯಕ್ಷ ಮೆಲ್ವಿನ್ ಸಲ್ದಾನ್ಹ, ಪ್ರಾಂತ್ಯ ಹತ್ತರ ಎಲ್ಲ ಅಧ್ಯಕ್ಷರು, ಕಾರ್ಯದರ್ಶಿ ರಿಚರ್ಡ್ ಡಿಸೋಜ, ಕೋಶಾಧಿಕಾರಿ ರೋಕಿ ಮಸ್ಕರೇನಸ್, ಸುಮತಿ ಜಗದೀಶ್ಚಂದ್ರ ಮತ್ತಿತರರು ಭಾಗವಹಿಸಿದ್ದರು.ಲೋಯ್ಡ್ ರೇಗೊ ನಿರೂಪಿಸಿದರು. ರಿಚರ್ಡ್ ಡಿಸೋಜ ವಂದಿಸಿದರು.