ಮದ್ಯವ್ಯಸನದಿಂದ ಆರೋಗ್ಯ ಹಾಳು: ಮರುಳ ಶಂಕರ ಸ್ವಾಮೀಜಿ

| Published : May 19 2025, 12:13 AM IST

ಸಾರಾಂಶ

ಮದ್ಯಮುಕ್ತ ಸಮಾಜ ನಿರ್ಮಾಣದಿಂದ ರಾಷ್ಟ್ರವು ಸುಭದ್ರಗೊಳ್ಳುತ್ತದೆ. ಯುವಶಕ್ತಿಯು ಸ್ವಾಭಿಮಾನದ ಸ್ವಾವಲಂಬಿಯಾಗುತ್ತಾರೆ.

ರಾಣಿಬೆನ್ನೂರು: ಮದ್ಯ ವ್ಯಸನದಿಂದ ಆರೋಗ್ಯ ಹಾಳಾಗುವುದರ ಜತೆಗೆ ಮದ್ಯವ್ಯಸನಿಯ ಕುಟುಂಬವು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಸಮಾಜದಿಂದ ದೂರ ಉಳಿಯುವಂತಾಗುತ್ತದೆ ಎಂದು ಗಂಗಾಪುರ ಸಿದ್ಧಾರೂಡ ಮಠದ ಮರುಳ ಶಂಕರ ಸ್ವಾಮಿಗಳು ನುಡಿದರು. ತಾಲೂಕಿನ ಗಂಗಾಪುರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಮದ್ಯವರ್ಜನ ಸಮಾಲೋಚನಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಮದ್ಯಮುಕ್ತ ಸಮಾಜ ನಿರ್ಮಾಣದಿಂದ ರಾಷ್ಟ್ರವು ಸುಭದ್ರಗೊಳ್ಳುತ್ತದೆ. ಯುವಶಕ್ತಿಯು ಸ್ವಾಭಿಮಾನದ ಸ್ವಾವಲಂಬಿಯಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಮದ್ಯವ್ಯಸನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಅತ್ಯಂತ ಅಪಾಯಕಾರಿ ಸಂಗತಿ. ಮದ್ಯವ್ಯಸನ ಮುಕ್ತ ಸಮಾಜ ನಿರ್ಮಾಣ ಸಂಕಲ್ಪ ಮಾಡಿರುವ ವೀರೇಂದ್ರ ಹೆಗ್ಗಡೆ ಅವರು ಕಾರ್ಯ ಇಡೀ ನಾಡೇ ಕೊಂಡಾಡುವ ಸಂಗತಿಯಾಗಿದೆ ಎಂದರು.

ಧರ್ಮಸ್ಥಳ ಸಂಘದ ಮುಖಾಂತರ ರಾಜ್ಯದಲ್ಲಿ ಅನೇಕ ಒಕ್ಕೂಟಗಳನ್ನು ಏರ್ಪಡಿಸಿ ದುಶ್ಚಟದ ದಾಸರಾಗಿದ್ದ ಯುವಕರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಈ ಶಿಬಿರದ ಮುಖ್ಯ ಉದ್ದೇಶವಾಗಿದೆ. ಮದ್ಯವ್ಯಸನಿಗಳು ಸ್ವಯಂ ಪ್ರೇರಣೆಯಿಂದ ಏಳು ದಿನಗಳವರೆಗೆ ಈ ಶಿಬಿರದಲ್ಲಿ ಪಾಲ್ಗೊಂಡು ದುಶ್ಚಟದಿಂದ ದೂರವಾಗಬೇಕು ಎಂದರು. ಬಸವರಾಜ ಮೆಡ್ಲೇರಿ, ಸಿವಿರಾಯ್ ಪ್ರಭು, ಭಾಸ್ಕರರಾವ್. ಶೃತಿ ಕುಮಾರ, ಸೋಮಣ್ಣ ಗಂಗಾಪುರ ಹಾಗೂ ವಿವಿಧ ಗ್ರಾಮಗಳ ಸಾರ್ವಜನಿಕರು ಭಾಗವಹಿಸಿದ್ದರು.ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

ಶಿಗ್ಗಾಂವಿ: ೨೦೨೪- ೨೫ನೇ ಸಾಲಿನ ೧೦ನೇ ತರಗತಿಯಲ್ಲಿ ಕುರುಬ ಸಮಾಜ ಆಭಿವೃದ್ಧಿ ಸೇವಾ ಸಂಘದ ವತಿಯಿಂದ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ತಾಲೂಕಿನ ತಡಸ ಗ್ರಾಮದ ಹನುಮಂತ ದೇವರ ದೇವಸ್ಥಾನದಲ್ಲಿ ಜರುಗಿತು.ವಿದ್ಯಾರ್ಥಿನಿಯರಾದ ವೀಣಾ ರಮೇಶ ಗುರಪ್ಪನವರ ಹಾಗೂ ಲಕ್ಷ್ಮೀ ಮಂಜುನಾಥ ಗೋಣೆಪ್ಪನವರ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಫಕ್ಕೀರಪ್ಪ ಬೀ. ಕುರಬರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕ ಎನ್.ಎಂ. ಬಮ್ಮನಕಟ್ಟಿ ಹಾಗೂ ರಮೇಶ ಓಲೇಕಾರ, ಚಂದ್ರಕಾಂತ ಬೆಂಡಿಗೇರಿ, ವೀರಪ್ಪ ಗೋ. ಗೋಣೆಪ್ಪನವರ, ಗುರಪ್ಪ ಗೋಣೆಪ್ಪನವರ, ರಮೇಶ ಗುರಪ್ಪನವರ, ಪರಸಪ್ಪ ಹುಲಸೋಗಿ ಆಗಮಿಸಿದ್ದರು. ಚಂದ್ರಕಾಂತ ಬೆಂಡಿಗೇರಿ, ರಮೇಶ ಓಲೇಕಾರ, ಎನ್.ಎಂ. ಬಮ್ಮನಕಟ್ಟಿ ಮಾತನಾಡಿದರು. ಈರಣ್ಣ ಭ ಗೋಣೆಪ್ಪನವರ ಸ್ವಾಗತಿಸಿದರು.