ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ರೈತರ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸುವುದು ಚಳವಳಿಗಳ ಮೂಲ ಉದ್ದೇಶ. ರೈತಸಂಘಟನೆಗಳು ಒಗ್ಗಟ್ಟಾಗಿ ಹೋರಾಡಿದಾಗ ಮಾತ್ರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.ನಗರದ ಹಳೇ ತಾಲ್ಲೂಕು ಕಚೇರಿಯಲ್ಲಿರುವ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಕಚೇರಿ ಆವರಣದಲ್ಲಿ ವಿಶ್ವ ರೈತ ದಿನಾಚರಣೆ ಹಾಗೂ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರ ೭೫ನೇ ವರ್ಷದ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈತರು ಬೆಳೆ ಪದ್ಧತಿಯಲ್ಲಿ ಬದಲಾವಣೆ ತಂದುಕೊಳ್ಳಬೇಕು. ಇಲ್ಲದಿದ್ದರೆ ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗುವುದಿಲ್ಲ. ಹವಾಮಾನ ಬದಲಾವಣೆ ಆಗುತ್ತಿದೆ. ಹಾಗಾಗಿ ರೈತರು ಬೆಳೆ ಬೆಳೆಯುವ ವಿಧಾನಗಳನ್ನು ಬದಲಾಯಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಸರ್ಕಾರಗಳಿಂದ ಆಗದಿರುವ ಕೆಲಸಗಳನ್ನು ರೈತಸಂಘಟನೆಗಳು ಮಾಡಬಹುದು. ಪ್ರತಿ ಹಳ್ಳಿಯಲ್ಲಿ ರೈತರು ಇದ್ದಾರೆ ರೈತ ಶಕ್ತಿಯನ್ನು ಉಪಯೋಗಿಸಿ ರೈತ ಸಂಘಟನೆಗಳನ್ನು ಒಗ್ಗಟ್ಟಾಗಿ ಮುನ್ನಡೆಸುವುದು ನಮ್ಮ ಉದ್ದೇಶವಾಗಿದೆ ಎಂದು ನುಡಿದರು.
ರೈತ ಮುಖಂಡರಾದ ಶಂಭೂನಹಳ್ಳಿ ಸುರೇಶ್, ಮಂಜೇಗೌಡ, ಇಂಡುವಾಳು ಚಂದ್ರಶೇಖರ್, ಸೊ.ಸಿ.ಪ್ರಕಾಶ್, ಮರಿಚನ್ನೇಗೌಡ, ಅಣ್ಣೂರು ಮಹೇಂದ್ರ, ಶಿವಳ್ಳಿ ಚಂದ್ರು, ಸಿದ್ದೇಗೌಡ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಮಕ್ಕಳಾದ ವಚನ್ ಪುಟ್ಟಣ್ಣಯ್ಯ, ನಿಧಿ ಪುಟ್ಟಣ್ಣಯ್ಯ ಇತರರಿದ್ದರು.ನಾಳೆ ರಾಜ್ಯ ಮಟ್ಟದ ಜಾನಪದ ಉತ್ಸವ
ಮಳವಳ್ಳಿ: ತಾಲೂಕಿನ ಪೂರಿಗಾಲಿ ಗ್ರಾಮದಲ್ಲಿ ಡಿ.25ರಂದು ನಾಗಮಲೆ ಮಹದೇಶ್ವರ ಸಾಂಸ್ಕೃತಿಕ ಕಲಾ ಟ್ರಸ್ಟ್‌ನಿಂದ ಡಿ.25ರಂದು ರಾಜ್ಯ ಮಟ್ಟದ ಜಾನಪದ ಉತ್ಸವ ಆಯೋಜಿಸಲಾಗಿದೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬೆಳಗ್ಗೆ 11ಗಂಟೆಗೆ ಆರಂಭವಾಗುವ ಉತ್ಸವವನ್ನು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಉದ್ಘಾಟಿಸುವವರು. ಜಿಲ್ಲಾ ಪರಿಷತ್ ಮಾಜಿ ಸದಸ್ಯ ಎಂ.ಎನ್.ಜಯರಾಜು ಅಧ್ಯಕ್ಷತೆ ವಹಿಸಲಿದ್ದಾರೆ. ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಾದ ನೀಲಗಾರ ಪದಗಳು, ಗೀತಾ ಗಾಯನ, ಕಂಸಾಳೆ ತಂಡ, ಸೋಬಾನೆ ತಂಡ, ವಾದ್ಯ ವೃಂದ ಗಳು ತಮ್ಮ ಕಲಾ ಪ್ರದರ್ಶನ ನೀಡಲಿವೆ ಎಂದು ನಾಗಮಲೆ ಮಹದೇಶ್ವರ ಸಾಂಸ್ಕೃತಿಕ ಕಲಾ ಟ್ರಸ್ಟ್ ಅಧ್ಯಕ್ಷ ಪಿ.ಎಂ.ರಾಜು ತಿಳಿಸಿದ್ದಾರೆ.ರಾಷ್ಟ್ರಮಟ್ಟದ ಕರಾಟೆಯಲ್ಲಿ ಪ್ರಶಸ್ತಿ
ಮಳವಳ್ಳಿ:ಮೈಸೂರಿನಲ್ಲಿ ನಡೆದ 2ನೇ ರಾಷ್ಟ್ರಮಟ್ಟದ ಕರಾಟೆ ಟೂರ್ನಿಯಲ್ಲಿ ಪಟ್ಟಣದ ರೋಟರಿ ಶಾಲೆ ವಿದ್ಯಾರ್ಥಿಗಳಾದ ಎನ್.ಆರ್.ವಿನುತಾ, ಯಶಸ್, ಹೇಮಾಶ್ರೀ, ಭುವನ, ಅಜಿತ್, ಅನನ್ಯ, ಸಂಜಯ್, ಯಶಸ್, ಮನೀಶ್ ಚಂದನ್, ವಿಜಯ್ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳನ್ನು ರೋಟರಿ ಶಾಲೆ ಅಧ್ಯಕ್ಷ ಮಹಮ್ಮದ್ ಹಬೀಬ್, ಮುಖ್ಯಶಿಕ್ಷಕ ಎಸ್.ಲಕ್ಷ್ಮಿಕಾಂತ್, ಕರಾಟೆ ತರಬೇತಿದಾರ ಕರಾಟೆ ಶಿವು ಅಭಿನಂದಿಸಿದ್ದಾರೆ.