ಹಿಂದೂಗಳ ಎಲ್ಲಾ ಹಬ್ಬಗಳಲ್ಲೂ ವೈಶಿಷ್ಟತೆ ಇದೆ: ಶ್ರೀನಾಥ್‌

| Published : Aug 29 2024, 12:47 AM IST

ಹಿಂದೂಗಳ ಎಲ್ಲಾ ಹಬ್ಬಗಳಲ್ಲೂ ವೈಶಿಷ್ಟತೆ ಇದೆ: ಶ್ರೀನಾಥ್‌
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದೂ ಧರ್ಮದ ಎಲ್ಲಾ ಹಬ್ಬಗಳೂ ಕೂಡ ವೈಶಿಷ್ಟ್ಯತೆ ಹೊಂದಿವೆ ಎಂದು ಮೆಣಸೂರು ಗ್ರಾಪಂ ಸದಸ್ಯ ಡಿ.ಆರ್.ಶ್ರೀನಾಥ್ ಹೇಳಿದರು.

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಹಿಂದೂ ಧರ್ಮದ ಎಲ್ಲಾ ಹಬ್ಬಗಳೂ ಕೂಡ ವೈಶಿಷ್ಟ್ಯತೆ ಹೊಂದಿವೆ ಎಂದು ಮೆಣಸೂರು ಗ್ರಾಪಂ ಸದಸ್ಯ ಡಿ.ಆರ್.ಶ್ರೀನಾಥ್ ಹೇಳಿದರು.

ಸೋಮವಾರ ತಾಲೂಕಿನ‌ ಕಳ್ಳಿಕೊಪ್ಪದ ಸಮುದಾಯ ಭವನದಲ್ಲಿ ಬಾಲಸ್ನೇಹಿ ಅಂಗನವಾಡಿ, ಸರ್ಕಾರಿ ಶಾಲೆ, ಮೆಣ ಸೂರು ಗ್ರಾಪಂ ಹಾಗೂ ಸ್ಥಳೀಯ ಸ್ತ್ರೀ ಶಕ್ತಿ ಸಂಘಗಳ ಸಂಯುಕ್ತಾಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ಕೃಷ್ಣ ವೇಷ ಸ್ಪರ್ಧೆ ಉದ್ಘಾಟನೆಯಲ್ಲಿ‌ ಮಾತನಾಡಿ, ಶ್ರಾವಣ ಮಾಸ ಬಂತೆಂದರೆ ಹಿಂದೂ ಧರ್ಮದ ಹಬ್ಬಗಳು ಸಾಲು, ಸಾಲಾಗಿ ಬರುತ್ತವೆ. ಒಂದೊಂದು ಹಬ್ಬಗಳೂ ಸಹ ಒಂದೊಂದು ವಿಶೇಷತೆ ಹೊಂದಿದೆ. ಶ್ರೀ ಕೃಷ್ಣ ಜನ್ಮಾಷ್ಟಮಿ ನಾಡಿನಾದ್ಯಂತ ಅತ್ಯಂತ ಅದ್ಧೂರಿ ಹಾಗೂ ಶ್ರದ್ಧಾ ಭಕ್ತಯಿಂದ ಆಚರಿಸಲಾಗುತ್ತದೆ. ಉತ್ತರ ಹಾಗೂ ದಕ್ಷಿಣ ಭಾರತದಲ್ಲಿ ಅತ್ಯಂತ ವಿಶೇಷ ವಾಗಿ ಆಚರಿಸಲಾಗುತ್ತದೆ ಎಂದರು.

ಅತಿಥಿಯಾಗಿದ್ದ ಪಪಂ ಸದಸ್ಯೆ ಜುಬೇದಾ ಮಾತನಾಡಿ, ಕೃಷ್ಣ ಜನ್ಮಾಷ್ಟಮಿ ಜಾತಿ, ಮತ ಬೇಧವಿಲ್ಲದೆ ಎಲ್ಲರೂ ಒಗ್ಗೂಡಿ ಆಚರಿಸುವ ಹಬ್ಬವಾಗಿದೆ. ಪುಟಾಣಿಗಳಿಗೆ ಕೃಷ್ಣ ವೇಷ ಹಾಕಿಸಿ ಎಲ್ಲರೂ ಸಂಭ್ರಮ ಪಡುತ್ತಾರೆ. ಇಂತಹ ಹಬ್ಬಗಳ ಆಚರಣೆ ಯಿಂದಾಗಿ ನಮ್ಮ ದೇಶ ಸರ್ವ ಜನಾಂಗದ ಶಾಂತಿ ತೋಟವಾಗಿದೆ ಎಂದರು.

ಇದೇ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರಿಗೆ ಸೀಮಂತ ನೆರವೇರಿಸಲಾಯಿತು. ಪುಟಾಣಿ‌ ಮಕ್ಕಳಿಗೆ ಶ್ರೀ ಕೃಷ್ಣ ವೇಷ ಸ್ಪರ್ಧೆ ಏರ್ಪಡಿಸಲಾಗಿತ್ತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಸಮಾರಂಭದಲ್ಲಿ ಮೆಣಸೂರು ಗ್ರಾಪಂ ಅಧ್ಯಕ್ಷೆ ಬಿಂದು ಸತೀಶ್, ಉಪಾಧ್ಯಕ್ಷೆ ಪಚ್ಚೆಯಮ್ಮ, ಸದಸ್ಯರಾದ ಎಂ.ಟಿ. ಪ್ರವೀಣ್, ತಾಪಂ.ಮಾಜಿ ಅಧ್ಯಕ್ಷೆ ಸುಮತಿ ಆಚಾರ್, ಪ್ರಮೀಳಾರೆಡ್ಡಿ, ಬೀನಾಮ್ಯಾಥ್ಯೂ, ಸಹ ಶಿಕ್ಷಕಿ ವಿನುತಾ, ವನಿತಾ, ಸಂಧ್ಯಾ, ಸಂತೋಷ್ ಕುಮಾರ್, ತನುಜಾ, ಪವಿತ್ರಾ, ಕವಿತಾ , ಆಶಾ ಕಾರ್ಯಕರ್ತೆಯರು ಸ್ತ್ರೀ ಶಕ್ತಿ ಸಂಘದ ಸದಸ್ಯರು ಉಪಸ್ಥಿತರಿದ್ದರು.