ಕನ್ನಡ ಪರ ಹೋರಾಟಗಳಿಗೆ ಎಲ್ಲರೂ ಕೈ ಜೋಡಿಸಿ: ಕರವೇ ಜಿಲ್ಲಾ ಉಪಾಧ್ಯಕ್ಷ ವೈ.ಕೆ.ಮೋಳೆ ನಾಗರಾಜು

| Published : Sep 21 2024, 02:04 AM IST

ಕನ್ನಡ ಪರ ಹೋರಾಟಗಳಿಗೆ ಎಲ್ಲರೂ ಕೈ ಜೋಡಿಸಿ: ಕರವೇ ಜಿಲ್ಲಾ ಉಪಾಧ್ಯಕ್ಷ ವೈ.ಕೆ.ಮೋಳೆ ನಾಗರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲಾ ಹೋರಾಟಗಾರರನ್ನು ಬೆಂಬಲಿಸಲು ಎಲ್ಲಾ ಕನ್ನಡ ಮನಸ್ಸುಗಳು ಕೈ ಜೋಡಿಸಬೇಕು ಎಂದು ಕರವೇ ಜಿಲ್ಲಾ ಉಪಾಧ್ಯಕ್ಷ ವೈ.ಕೆ.ಮೋಳೆ ನಾಗರಾಜು ಕರೆ ನೀಡಿದರು. ಯಳಂದೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣ್‌ಕುಮರ್ ಶೆಟ್ಟಿ ಹುಟ್ಟು ಹಬ್ಬದಂದು ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಯಳಂದೂರು

ಕನ್ನಡ ಪರ ಹೋರಾಟಗಾರರು ನಮ್ಮ ನಾಡು, ನುಡಿ, ಸಂಸ್ಕೃತಿಯನ್ನು ಉಳಿಸುವ ಪೋಷಕರಾಗಿದ್ದಾರೆ. ಇಂತಹವರಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣ್‌ಕುಮಾರ್ ಶೆಟ್ಟಿ ಕೂಡ ಒಬ್ಬರಾಗಿದ್ದಾರೆ. ಇಂತಹ ಎಲ್ಲಾ ಹೋರಾಟಗಾರರನ್ನು ಬೆಂಬಲಿಸಲು ಎಲ್ಲಾ ಕನ್ನಡ ಮನಸ್ಸುಗಳು ಕೈ ಜೋಡಿಸಬೇಕು ಎಂದು ಕರವೇ ಜಿಲ್ಲಾ ಉಪಾಧ್ಯಕ್ಷ ವೈ.ಕೆ.ಮೋಳೆ ನಾಗರಾಜು ಕರೆ ನೀಡಿದರು. ಶುಕ್ರವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆ, ಎಸ್‌ಬಿಐ ವೃತ್ತ ಸೇರಿದಂತೆ ಹಲವೆಡೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣ್‌ಕುಮರ್ ಶೆಟ್ಟಿ ಹುಟ್ಟು ಹಬ್ಬದಂದು ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿ ಮಾತನಾಡಿದರು. ನಮ್ಮ ನಾಡಿನ ಪರಂಪರೆಗೆ ಸಾವಿರಾರು ವರ್ಷಗಳ ಐತಿಹ್ಯವಿದೆ. ನಮ್ಮ ನುಡಿಗೆ ಅನ್ಯ ಭಾಷಿಕರಿಂದ ದಿನೇ ದಿನೇ ಅಪಾಯ ಹೆಚ್ಚುತ್ತಿದೆ. ಇಲ್ಲಿರುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಕನ್ನಡ ಕಲಿಯಬೇಕು, ಕನ್ನಡದಲ್ಲೇ ವ್ಯವಹರಿಸಬೇಕು, ಕನ್ನಡ ಭಾಷೆಯನ್ನೇ ಬಳಸಬೇಕು ಇದಕ್ಕೆ ಎಲ್ಲರೂ ಕೈ ಜೋಡಿಸಬೇಕು. ಪ್ರವೀಣ್‌ಕುಮಾರ್‌ಶೆಟ್ಟಿ ಪ್ರತಿ ವರ್ಷ ತಮ್ಮ ಹುಟ್ಟುಹಬ್ಬದಂದು ಒಂದೊಂದು ಹೋರಾಟದಲ್ಲಿ ಭಾಗವಹಿಸುವ ವಾಡಿಕೆ ಇಟ್ಟುಕೊಂಡಿದ್ದಾರ. ಈ ವರ್ಷ ಕಳಸಾ-ಬಂಡೂರಿ ಯೋಜನೆಯ ಅನುಷ್ಠಾನದ ಹೋರಾಟದಲ್ಲಿ ಅವರು ಭಾಗವಹಿಸಿದ್ದಾರೆ. ಇವರ ಹುಟ್ಟುಹಬ್ಬದಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲೂ ಇಂತಹ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ಪಪಂ ನಾಮ ನಿರ್ದೇಶಿತ ಸದಸ್ಯ ಲಿಂಗರಾಜಮೂರ್ತಿ, ಗೌಡಹಳ್ಳಿ ರವಿ, ವೆಂಕಟೇಶ್, ಸ್ವಾಮಿ, ವಿಜಯ್, ನಾಗರಾಜು, ಪುಟ್ಟರಾಜು, ಕಿಶೋರ್, ಹರೀಶ್, ಅಮ್ಜದ್, ಕುಮಾರ್, ಮಹದೇವ್‌ಸಿಂಗ್, ಪ್ರಭು, ಸಿದ್ದರಾಜು, ಗೋವಿಂದ, ಅಂಬಳೆ ಕುಮಾರ್ ವೈದ್ಯಾಧಿಕಾರಿ ಡಾ. ಶ್ರೀಧರ್, ಡಾ. ನಾಗೇಂದ್ರಮೂರ್ತಿ, ಡಾ. ನಾಗೇಶ್, ಡಾ. ಶಶಿರೇಖಾ ಸೇರಿದಂತೆ ಅನೇಕರು ಇದ್ದರು. ಯರಿಯೂರು ಗ್ರಾಪಂ ಉಪಾಧ್ಯಕ್ಷರಾಗಿ

ಆರ್. ನಾರಾಯಣಸ್ವಾಮಿ ಆಯ್ಕೆ

ಕನ್ನಡಪ್ರಭ ವಾರ್ತೆ ಯಳಂದೂರುಯರಿಯೂರು ಗ್ರಾಪಂ ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಯರಿಯೂರು ಗ್ರಾಮದ ೨ನೇ ವಾರ್ಡ್ ಸದಸ್ಯ ಆರ್. ನಾರಾಯಣಸ್ವಾಮಿ ಅವಿರೋಧವಾಗಿ ಆಯ್ಕೆಯಾದರು.ಸಾಮಾನ್ಯ ಸ್ಥಾನಕ್ಕೆ ಮೀಸಲಿದ್ದ ಈ ಸ್ಥಾನದಲ್ಲಿ ಈ ಹಿಂದೆ ಇದ್ದ ೧ನೇ ವಾರ್ಡಿನ ಸದಸ್ಯ ಮಹೇಶ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಈ ಸ್ಥಾನ ಖಾಲಿಯಾಗಿತ್ತು. ಇದಕ್ಕೆ ಚುನಾವಣೆ ನಿಗದಿಯಾಗಿತ್ತು. ಚುನಾವಣಾಧಿಕಾರಿಯಾಗಿದ್ದ ಕೃಷಿ ಇಲಾಖೆಯ ಅಮೃತೇಶ್ವರ್ ಈ ಸ್ಥಾನಕ್ಕೆ ಆರ್. ನಾರಾಯಣಸ್ವಾಮಿ ಮಾತ್ರ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ನೂತನ ಉಪಾಧ್ಯಕ್ಷ ಆರ್.ನಾರಾಯಣಸ್ವಾಮಿ ಮಾತನಾಡಿ, ನಮ್ಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಯರಿಯೂರು, ಗಣಿಗನೂರು, ಚಾಮಲಾಪುರ ಗ್ರಾಮಗಳ ಮೂಲ ಸಮಸ್ಯೆಗಳನ್ನು ನಿವಾರಿಸುವಲ್ಲಿ ಗ್ರಾಮಗಳನ್ನು ಶುಚಿಯಾಗಿಟ್ಟುಕೊಳ್ಳುವಲ್ಲಿ ನಾನು ಪ್ರಮಾಣಿಕವಾಗಿ ಕೆಲಸ ಮಾಡುತ್ತೇನೆ. ಅಲ್ಲದೆ ಪಂಚಾಯಿತಿಗೆ ಬರುವ ಸರ್ಕಾರದ ಅನುದಾನಗಳನ್ನು ಸಮಪರ್ಕವಾಗಿ ಬಳಸಿಕೊಂಡು ಇದನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಸೂಕ್ತ ಕ್ರಮವನ್ನು ವಹಿಸುತ್ತೇನೆ ಎಂದು ನುಡಿದರು.ಅಧ್ಯಕ್ಷೆ ದೊಡ್ಡಮ್ಮ ಸದಸ್ಯರಾದ ಶೈಲಜಾ, ಲಾವಣ್ಯ, ಮಹದೇವಯ್ಯ, ಲಕ್ಷ್ಮಿ, ವೈ.ಎಂ. ಪ್ರವೀಣ್‌ಕುಮಾರ್, ಕಪ್ಪಣ್ಣ, ಎನ್. ಆಶಾ, ಚಿನ್ನಸ್ವಾಮಿ, ಪಿ. ಮಹದೇಶ, ಪದ್ಮ, ಸಿ. ರಮೇಶ್, ಜಿ.ಸಿ. ರಾಜೇಶ, ಕೆಂಪಮ್ಮ, ರತ್ನಮ್ಮ, ಶಾಂತಿ, ಚಂದ್ರಮ್ಮ ಪಿಡಿಒ ಶಿವಕುಮಾರ್ ಸೇರಿದಂತೆ ಅನೇಕರು ಇದ್ದರು.