ಕೆಜಿಎಫ್: ಶಾಂತಿಯುತ ಲೋಕಸಭಾ ಚುನಾವಣೆಗೆ ಸಕಲ ಸಿದ್ಧತೆ

| Published : Apr 02 2024, 01:10 AM IST / Updated: Apr 02 2024, 08:33 AM IST

ಸಾರಾಂಶ

ಕೋಲಾರ ಜಿಲ್ಲೆಯ ಲೋಕಸಭಾ ಚುನಾವಣೆಗೆ ನಿಯೋಜನೆ ಗೊಂಡಿರುವ ಮತಗಟ್ಟೆ ಅಧಿಕಾರಿಗಳು ಚುನಾವಣೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದು ವ್ಯವಸ್ಥಿತವಾಗಿ ನಿಷ್ಪಕ್ಷಪಾತ ಮತ್ತು ಶಾಂತಿಯುತ ಮತದಾನ ಕೈಗೊಳ್ಳುವತ್ತ ಗಮನಹರಿಸಬೇಕು

 ಕೆಜಿಎಫ್ :    ಲೋಕಸಭೆ ಚುನಾವಣೆಯಲ್ಲಿ ನಿಷ್ಪಕ್ಷಪಾತ ಹಾಗೂ ಶಾಂತಿಯುತ ಮತದಾನಕ್ಕೆ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಕೆಜಿಎಫ್ ತಾಲೂಕಿನ ಸಹಾಯಕ ಚುನಾವಣಾಧಿಕಾರಿ ವೈ.ಸೋಮಶೇಖರ್ ತಿಳಿಸಿದರು.ನಗರದ ಶ್ರೀ ಭಗವನ್ ಮಹಾವೀರ್ ಜೈನ್ ಕಾಲೇಜಿನಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ನಡೆದ ಚುನಾವಣಾ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೋಲಾರ ಜಿಲ್ಲೆಯ ಲೋಕಸಭಾ ಚುನಾವಣೆಗೆ ನಿಯೋಜನೆ ಗೊಂಡಿರುವ ಮತಗಟ್ಟೆ ಅಧಿಕಾರಿಗಳು ಚುನಾವಣೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದು ವ್ಯವಸ್ಥಿತವಾಗಿ ನಿಷ್ಪಕ್ಷಪಾತ ಮತ್ತು ಶಾಂತಿಯುತ ಮತದಾನ ಕೈಗೊಳ್ಳುವತ್ತ ಗಮನಹರಿಸಬೇಕು ಎಂದು ಸೂಚನೆ ನೀಡಿದರು.

ಒಟ್ಟು 19,82,70 ಮತದಾರರು

ಏ.26  ರಂದು ಬೆಳಿಗ್ಗೆ 7  ರಿಂದ ಸಂಜೆ 6 ಗಂಟೆ ತನಕ ಮತದಾನ ನಡೆಯಲಿದ್ದು, ಕೆಜಿಎಫ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ98290 ಪುರುಷರು, 100165 ಮಹಿಳೆಯರು, ತೃತಿಯ ಲಿಂಗ 42 ಒಟ್ಟು 198270 ಮಂದಿ ಮತದಾರರಿದ್ದಾರೆ, ಕೆಜಿಎಫ್ ತಾಲೂಕಿನಲ್ಲಿ ಒಟ್ಟು 221  ಮತಗಟ್ಟೆಗಳಿದ್ದು, ನಗರ ಪ್ರದೇಶದಲ್ಲಿ ೧೦೬ ಮತಗಟ್ಟೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ 115  ಮಟಗಟ್ಟೆಗಳು ಒಳಪಟ್ಟಿದೆ ಎಂದು ಹೇಳಿದರು.ಆಯೋಗದ ಸೂಚನೆ ಪಾಲಿಸಿ

ಲೋಕಸಭಾ ಚುನಾವಣೆ ನಡೆಯುವ ಸಂದರ್ಭದಲ್ಲಿ ಚುನಾವಣಾ ಆಯೋಗದ ಸೂಚನೆಗಳು ಹಾಗೂ ನಿರ್ದೇಶನಗಳನ್ನು ಚಾಚೂ ತಪ್ಪದೇ ಪಾಲಿಸುವುದು, ಹಾಗೆಯೇ ಚುನಾವಣೆ ಸಂಬಂಧಿಸಿದ ಕಾನೂನು ಹಾಗೂ ಕಾರ್ಯವಿಧಾನ ಅರಿತು ಸುಗಮ ರೀತಿಯಲ್ಲಿ ಮತದಾನ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದರು.ಚುನಾವಣೆ ನಡೆಯುವ ಮುನ್ನ ದಿನ ಮತಗಟ್ಟೆ ಅಧಿಕಾರಿಗಳು ಸ್ಥಳಕ್ಕೆ ನಿಗದಿತ ಸಮಯಕ್ಕೂ ಮೊದಲು ಹಾಜರಾಗುವುದು ಹಾಗೂ ನೀಡುವ ಚೆಕ್ ಲಿಸ್ಟ್ ಪ್ರಕಾರ ಎಲ್ಲಾ ಮತ ಸಾಮಗ್ರಿಗಳನ್ನು ಪರೀಕ್ಷಿಸಿಕೊಳ್ಳಬೇಕೆಂದು ತರಬೇತಿ ಅಧಿಕಾರಿಗಳಿಗೆ ತಿಳಿಸಿ, ತರಬೇತಿಯಲ್ಲಿ ಮತಪೆಟ್ಟಿಗೆಗಳನ್ನು ಬಳಸುವ ರೀತಿ ಮತ್ತು ವಿಧಾನಗಳನ್ನು ಓದಿಕೊಳ್ಳುವುದು, ಜತೆಗೆ ಅದರಂತೆ ಕಾರ್ಯನಿರ್ವಸುವುದು, ಪಿಆರ್‌ಒ ಹಾಗೂ ಎಪಿಆರ್‌ಒಗಳು ಯಾವುದೇ ಸಂದೇಹಗಳು ಇದ್ದಲ್ಲಿ ಚುನಾವಣಾಧಿಕಾರಿ ಗಮನಕ್ಕೆ ತಂದು ಸಲಹೆ, ಮಾರ್ಗದರ್ಶನ ಪಡೆದುಕೊಳ್ಳುವಂತೆ ಸೂಚಿಸಿದರು.ಮೊಬೈಲ್ ಪೋನ್ ನಿಷೇಧ:

ಮತಗಟ್ಟೆ ಕೇಂದ್ರಗಳಲ್ಲಿ ಮೊಬೈಲ್ ಪೋನ್ ಬಳಸದಂತೆ ಎಚ್ಚರಿಕೆ ವಸಿಬೇಕು, ಚುನಾವಣೆಗೆ ಸ್ಪರ್ದಿಸುವ ಉಮೇದುದಾರರ ಪಟ್ಟಿಯ ಪ್ರತಿಯನ್ನು ಎದ್ದುಕಾಣುವಂತೆ ಮತಗಟ್ಟೆಗಳಲ್ಲಿ ಅಳವಡಿಸುವುದು, ಮತಗಟ್ಟೆ ಸಿಬ್ಬಂದಿ ಮತ್ತು ಉಮೇದಾರರ ಪೊಲೀಸ್ ಏಜೇಂಟರುಗಳು ಕುಳಿತುಕೊಳ್ಳುವ ಸ್ಥಳವನ್ನು ಮತ್ತು ವೋಟಿಂಗ್ ಕಂಪಾರ್ಟ್‌ಮೆಂಟ್ ಇಡುವ ಸ್ಥಳವನ್ನು ಪರೀಕ್ಷಿಸಿಕೊಳ್ಳುವಂತೆ ತಿಳಿಸಿದರು.ಈ ಸಂದರ್ಭದಲ್ಲಿ ಸಿ.ರಾಮಲಕ್ಷ್ಮಯ್ಯ, ಆರ್.ಆರ್. ಶಿರಸ್ತೇದಾರ್ ಮಂಜುನಾಥ್, ಬಿಇಒ ಮುನಿವೆಂಕಟರಮಣಚಾರಿ ಇದ್ದರು.