ಎಲ್ಲ ಜನಾಂಗಗಳು ಶಿಕ್ಷಣಕ್ಕೆ ಒತ್ತು ನೀಡಬೇಕು

| Published : Jun 20 2024, 01:13 AM IST

ಸಾರಾಂಶ

ಬೆಂಗಳೂರು ನಗರವನ್ನು ಇಡೀ ವಿಶ್ವದ ಜನರು ನೋಡುವಂತೆ ಮಾಡಿದ ಕೀರ್ತಿ ಘನತೆ ಕೆಂಪೇಗೌಡರಿಗೆ ಸಲ್ಲುತ್ತದೆ. ಅಂದೇ ಎಲ್ಲ ಜಾತಿಯ ಜನರಿಗೆ ಆಶ್ರಯ ನೀಡಿರುವುದರ ಫಲವಾಗಿ ಬೆಂಗಳೂರಿನಲ್ಲಿ ಇಂದಿಗೂ ಎಲ್ಲ ವರ್ಗದವರು ಜೀವನ ಸಾಗಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ನಾಡಪ್ರಭು ಕೆಂಪೇಗೌಡ ಅವರು ಕೇವಲ ಬೆಂಗಳೂರು ಕರ್ನಾಟಕಕ್ಕಷ್ಟೇ ಅಲ್ಲದೆ ಇಡೀ ದಕ್ಷಿಣ ಭಾರತದ ಸಾಂಸ್ಕೃತಿಕ ನಾಯಕ ಎಂದು ಶಾಸಕ ಕೆ.ಎಚ್. ಪುಟ್ಟಸ್ವಾಮಿ ಗೌಡರು ಬಣ್ಣಿಸಿದರು.ನಗರದ ಮಾನಸ ಸರ್ಕಲ್ ಬಳಿ ಕೆಂಪೇಗೌಡ ಸಾಂಸ್ಕೃತಿಕ ವೇದಿಕೆಯ ನೂತನ ಕಚೇರಿ ಉದ್ಘಾಟಿ ಮಾತನಾಡಿದ ಅ‍ವರು, ಕೆಂಪೇಗೌಡರು ಬೆಂಗಳೂರನ್ನಷ್ಟೇ ನಿರ್ಮಿಸಿಲ್ಲ. ರಾಜ್ಯದ ಸಾವಿರಾರು ಹಳ್ಳಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು.

ಸಾವಿರಾರು ಕೆರೆಗಳ ನಿರ್ಮಾಣ

ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲೆಂದು ಸಾವಿರಾರು ಕೆರೆಗಳನ್ನು ನಿರ್ಮಿಸಿ ಜನರ ಮನಸ್ಸಿನಲ್ಲಿ ಅಜರಾಮರವಾಗಿದ್ದಾರೆ. ಕೆಂಪೇಗೌಡರ ದೂರದೃಷ್ಟಿ, ನಾಯಕತ್ವ ಗುಣ, ಸಾಮಾಜಿಕ ನ್ಯಾಯದ ಪರಿಕಪ್ಲನೆ ಹಾಗೂ ಅವರ ಪ್ರತಿಪಾದಿಸಿದ ಮೌಲ್ಯಗಳನ್ನು ಜನರಿಗೆ ತಲುಪಿಸುವ ಕೆಲಸವಾಗಬೇಕು ಎಂದರು. ಮಕ್ಕಳಿಗೆ ಶಿಕ್ಷಣ ಕೊಡಿಸಿ

ಶಿಕ್ಷಣವೊಂದೇ ಉತ್ತಮ ಬದುಕನ್ನು ರೂಪಿಸಲು ಇರುವ ಏಕೈಕ ಮಾರ್ಗವಾಗಿದ್ದು ಎಲ್ಲಾ ಸಮುದಾಯದವರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೂಡಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದರು.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎನ್.ಎಂ.ರವಿನಾರಾಯಣ ರೆಡ್ಡಿ ಮಾತನಾಡಿ ಶತಮಾನಗಳ ಹಿಂದೆಯೇ ಸಮುದಾಯಗಳ ಕುಲ, ವೈತ್ತಿಗೆ ಅನುಗುಣವಾಗಿ ಬೆಂಗಳೂರಿನಲ್ಲಿ ಪೇಟೆಗಳನ್ನು ನಿರ್ಮಿಸಿಕೊಟ್ಟು ಬೆಂಗಳೂರು ನಗರವನ್ನು ಇಡೀ ವಿಶ್ವದ ಜನರು ನೋಡುವಂತೆ ಮಾಡಿದ ಕೀರ್ತಿ ಘನತೆ ಕೆಂಪೇಗೌಡರಿಗೆ ಸಲ್ಲುತ್ತದೆ. ಅಂದೇ ಎಲ್ಲ ಜಾತಿಯ ಜನರಿಗೆ ಆಶ್ರಯ ನೀಡಿರುವುದರ ಫಲವಾಗಿ ಬೆಂಗಳೂರಿನಲ್ಲಿ ಇಂದಿಗೂ ಎಲ್ಲ ವರ್ಗದವರು ಜೀವನ ಸಾಗಿಸುತ್ತಿದ್ದಾರೆ. ಎಂದರು. ಮಾಜಿ ಸಚಿವ ಎನ್.ಹೆಚ್.ಶಿವಶಂಕರರೆಡ್ಡಿ, ಮತ್ತಿತರರು ಉಪಸ್ಥಿತರಿದ್ದರು.