ಕ್ರೈಸ್ಟ್ ಸೇರಿ ಎಲ್ಲಾ ಹಾಸ್ಟೆಲ್ ದುರಸ್ತಿ ಮಾಡಲಾಗುವುದು, ಕ್ರೈಸ್ಟ್ ವಸತಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬರುತ್ತಿದೆ, ಎಲ್ಲಾ ಮಕ್ಕಳಿಗೂ ಕ್ವಾಲಿಟಿ ಎಜುಕೇಷನ್ ಕೊಡಬೇಕಿದೆ.
ಕ್ರೈಸ್ಟ್ ಸೇರಿ ಎಲ್ಲಾ ಹಾಸ್ಟೆಲ್ ದುರಸ್ತಿ । ಎಲ್ಲಾ ಮಕ್ಕಳಿಗೂ ಕ್ವಾಲಿಟಿ ಎಜುಕೇಷನ್ ಸಚಿವ ಕೆ.ಎಚ್.ಮುನಿಯಪ್ಪ
ಕನ್ನಡಪ್ರಭ ವಾರ್ತೆ ಕೋಲಾರರಾಜ್ಯದಲ್ಲಿ ೮೭೪ ವಸತಿ ಶಾಲೆಗಳಿವೆ. ೬೭೪ ಕ್ಕೆ ಸ್ವಂತ ಕಟ್ಟಡ ಇದೆ. ಇನ್ನೂಳಿದ ೨೦೦ ವಸತಿ ಶಾಲೆಗಳಿಗೆ ಕಟ್ಟಡ ಇಲ್ಲ, ೧೦೦ ವಸತಿ ಶಾಲೆಗಳ ಕೆಲಸ ಆರಂಭವಾಗಿದೆ. ಹೋಬಳಿಗೊಂದರಂತೆ ಎಲ್ಲಾ ವಸತಿ ಶಾಲೆಗಳಿಗೆ ಸ್ವಂತ ಕಟ್ಟಡ ಪೂರ್ಣ ಮಾಡಲಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಹಳ ಹಳೆಯದಿದ್ದರೆ ಕೆಡವಿ ಹೊಸ ಹಾಸ್ಟೆಲ್‌ಗಳನ್ನ ಮಾಡಲು ತೀರ್ಮಾನವಾಗಿದೆ, ೩೧ ಜಿಲ್ಲಾಧಿಕಾರಿಯಿಂದ ವರದಿ ತರಿಸಿಕೊಂಡಿದ್ದೇನೆ, ಈಗ ಚಿಕ್ಕಬಳ್ಳಾಪುರ ಡಿಸಿ ವರದಿ ಕೊಟ್ಟಿದ್ದಾರೆ, ಅಲ್ಲಿ ೩೬ ಹಾಸ್ಟೆಲ್ ದುರಸ್ಥಿ ಮಾಬೇಕಿದೆ, ಸೋಮವಾರದಿಂದ ಎಲ್ಲಾ ಡಿಸಿಗಳಿಂದ ವರದಿ ತರಿಸಿಕೊಳ್ಳುವೆ ಎಂದರು.ಕ್ರೈಸ್ಟ್ ಸೇರಿ ಎಲ್ಲಾ ಹಾಸ್ಟೆಲ್ ದುರಸ್ತಿ ಮಾಡಲಾಗುವುದು, ಕ್ರೈಸ್ಟ್ ವಸತಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬರುತ್ತಿದೆ, ಎಲ್ಲಾ ಮಕ್ಕಳಿಗೂ ಕ್ವಾಲಿಟಿ ಎಜುಕೇಷನ್ ಕೊಡಬೇಕಿದೆ, ಸೋಮವಾರ ಮಂಗಳವಾರ ಅಧಿಕಾರಿಗಳ ಸಭೆ ಮಾಡಿ ಬಳಿಕ ಸಿಎಂ ಸಭೆ ಮಾಡುತ್ತೇನೆ. ಹೊಸ ಹಾಗೂ ಗುಣಮಟ್ಟದ ಶಿಕ್ಷಣ ಕೊಡುವ ಕೆಲಸ ಮಾಡಲಾಗುವುದು, ನನಗೆ ಕೊಟ್ಟಿರುವ ಜವಾಬ್ದಾರಿಯಲ್ಲಿ ಒಂದೋಂದೆ ಹಾಸ್ಟೆಲ್ ಸರಿ ಮಾಡುತ್ತೇನೆ ಎಂದು ಹೇಳಿದರು.
೨೦೨೭-೨೮ ರ ವೇಳೆಗೆ ಪ್ರತಿ ಹೋಬಳಿಯಲ್ಲಿ ಒಂದು ವಸತಿ ಶಾಲೆ ಪೂರ್ಣಗೊಳಿಸುವ ಉದ್ದೇಶ ಇದೆ, ಈಗಾಗಲೇ ಶೇ.೯೦ ರಷ್ಟು ಇದ್ದಾವೆ, ಆದರೆ ಸ್ವಂತ ಕಟ್ಟಡ ಇಲ್ಲ, ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ, ಇನ್ನುಳಿದ ೬೦ ರಿಂದ ೭೦ ಕಟ್ಟಡಗಳಾದರೆ ಎಲ್ಲವೂ ಪೂರ್ಣವಾದಂತೆ. ಎಲ್ಲಾ ೩೫ ಇಲಾಖೆಯ ಕಾರ್ಯದರ್ಶಿಗಳ ಸಭೆ ಮಾಡಿ ವರದಿ ಪಡೆಯುವೆ, ಎಲ್ಲಾ ಇಲಾಖೆಗಳಿಗೂ ಸಮಾಜ ಕಲ್ಯಾಣ ಇಲಾಖೆಯಿಂದ ಹಣ ನೀಡುತ್ತೇವೆ, ಮುಂದಿನ ಆಕ್ಷನ್ ಪ್ಲಾನ್‌ಗಾಗಿ ವರದಿ ತಯಾರಿ ಮಾಡುವೆ. ಇನ್ನೂ ಸಮಾಜ ಕಲ್ಯಾಣ ಇಲಾಖೆಯಿಂದ ಜಮೀನು ಇರುವವರಿಗೆ ಗಂಗಾ ಕಲ್ಯಾಣ ದ ಮೂಲಕ ಕೊಳವೆ ಬಾವಿ ನೀಡುತ್ತೇವೆ, ಕಾರು ಕೊಡುವುದರಿಂದ ಕಡಿಮೆ ಅನುಕೂಲ, ಆದರೆ ರೈತರಿಗೆ ಕೊಳವೆ ಬಾವಿ ಕೊಟ್ಟಾಗ ಕುಟುಂಬಕ್ಕೆ ಅನುಕೂಲವಾಗಲಿದೆ ಎಂದರು.ಕೋಟ್ಯಂತರ ರುಪಾಯಿ ವೆಚ್ಚದ ಅಂಬೇಡ್ಕರ್ ಭವನ ಖಾಲಿಯಾಗಿವೆ, ಅವನ್ನ ಬಳಕೆ ಮಾಡಿಕೊಳ್ಳುವ ಚಿಂತನೆ ನಡೆಯುತ್ತಿದೆ. ಡಿಜಿಟಲ್ ಲೈಬ್ರರಿ ಯಂತಹ, ಕೋಚಿಂಗ್ ಸೆಂಟರ್ ಮಾಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶ ಇದೆ ಎಂದರು.
ಕೆಪಿಎಸ್‌ಸಿ ಅಕ್ರಮ ವಿಚಾರಣೆ ನಡೆಯುತ್ತಿದೆ, ಅದರ ಬಗ್ಗೆ ನಾನು ಈಗ ಮಾತನಾಡಲ್ಲ, ಅದರ ಬಗ್ಗೆ ವಿಚಾರಣೆ ನಡೆಯುತ್ತಿದೆ. ಹಂತ ಹಂತವಾಗಿ ಕ್ರಮ ಆಗುತ್ತಿದೆ, ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಸೋಮಶೇಖರ್ ಅಧ್ಯಕ್ಷರಾಗಿದ್ದರು, ಅದರ ತೀರ್ಪು ನಾನು ಈಗಲೆ ಕೊಡಲು ಆಗಲ್ಲ ಎಂದರು.ಬಿಜೆಪಿ ಕೈಗೊಂಡಿರುವ ಬಳ್ಳಾರಿ ಚಲೋದಲ್ಲಿ ಕಾಂಗ್ರೆಸ್ ವಿರುದ್ದ ವಿಜಯೇಂದ್ರ ಒಂದು ವಿಕೇಟ್ ಬಿದ್ದಿದೆ ಇನ್ನೊಂದು ವಿಕೇಟ್ ಬೀಳಲಿದೆ ಎಂದು ವಾಗ್ದಾಳಿ ವಿಚಾರ, ಯಾವುದೆ ವಿಕೇಟ್ ಬೀಳಲ್ಲ, ಅವರು ಕನಸು ಕಾಣುತಿದ್ದಾರೆ ಎಂದು ವ್ಯಂಗ್ಯವಾಡಿದರು.
ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಪಕ್ಷದ ವಿಚಾರ ಬರಲ್ಲ, ಸಹಕಾರ ಸಂಸ್ಥೆಗಳು ಪಕ್ಷದಡಿಯಲ್ಲಿ ಬರಲ್ಲ. ಸಹಕಾರ ರಂಗ ಆಗಿರುವುದರಿಂದ ಇದರಲ್ಲಿ ಪಕ್ಷದ ಕೈವಾಡ ಇರಲ್ಲ ಯಾರೆ ಅಧ್ಯಕ್ಷರಾದರೂ ಸ್ವಾಗತ ಎಂದರು.