ಸಂಘದಿಂದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ

| Published : Sep 17 2024, 12:45 AM IST

ಸಾರಾಂಶ

ವ್ಯಕ್ತಿ ಸಂಘದಲ್ಲಿ ಇರುವುದರಿಂದ ಅವನ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಬಾದಾಮಿಯ ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಹೊಸಗೌಡ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ವ್ಯಕ್ತಿ ಸಂಘದಲ್ಲಿ ಇರುವುದರಿಂದ ಅವನ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಬಾದಾಮಿಯ ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಹೊಸಗೌಡ್ರ ಹೇಳಿದರು.

ಅವರು ಪಟ್ಟಣದ ಭಾರತ್ ಮಾರ್ಕೆಟ್‌ದಲ್ಲಿ ಗಜಾನನ ಯುವಕ ಸಂಘ ಹಮ್ಮಿಕೊಂಡಿದ್ದ ನೂತನ ಸಂಘ ಉದ್ಘಾಟಿಸಿ ಮಾತನಾಡಿ, ವ್ಯಾಪಾರಸ್ಥರು ತಮ್ಮ ವ್ಯಾಪಾರದ ಅಭಿವೃದ್ಧಿಗೆ ಶಿಕ್ಷಣದ ಅವಶ್ಯಕತೆಯೂ ಇದೆ. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದರೆ ಅವರಿಂದ ವ್ಯಾಪಾರ ವಹಿವಾಟು ಉತ್ತಮ ಮಟ್ಟ ತಲುಪಲು ಸಾಧ್ಯ. ತಮ್ಮ ಮಕ್ಕಳಿಗೆ ಶೈಕ್ಷಣಿಕ ಮಟ್ಟವನ್ನು ಸುಧಾರಿಸಲು ಸಂಘ ಕ್ರಿಯಾಶೀಲವಾಗಲಿ. ಶಿಕ್ಷಣದಿಂದ ಆರ್ಥಿಕ ಮಟ್ಟ ಸುಧಾರಣೆಯಾಗುತ್ತದೆ ಎಂದರು.

ಭಾರತ್ ಮಾರ್ಕೆಟ್ ವರ್ತಕ ಮಹೇಶ್ ಬಿಜಾಪುರ ಅಧ್ಯಕ್ಷತೆವಹಿಸಿ ಮಾತನಾಡಿ, ಸುಮಾರು 20 ವರ್ಷಗಳಿಂದ ಸಂಘ ಅವಿರತವಾಗಿ ಗಣೇಶೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳುತ್ತ ಬಂದಿದೆ. ಅಲ್ಲದೇ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಬಂದಿದೆ. ಈಗ ನೋಂದಣಿಯಾಗಿದ್ದೂ ಮುಂದೆಯೂ ಈ ಕಾರ್ಯ ಮುಂದುವರೆಯಲಿ ಎಂದರು.

ಶ್ರೀ ಕಾಡಸಿದ್ದೇಶ್ವರ ಶ್ರೀಗಳು ಸಾನ್ನಿಧ್ಯವಹಿಸಿ ಮಾತನಾಡಿದರು. ಸಂಘದ ಗೌರವಾಧ್ಯಕ್ಷ ಬಸವರಾಜ ಬೊಂಬಲೇಕರ, ಅಧ್ಯಕ್ಷ ಸಿದ್ದಪ್ಪ ನಿಲೂಗಲ್, ಉಪಾಧ್ಯಕ್ಷ ಮುತ್ತಪ್ಪ ಮಸಳಿ, ಕಾರ್ಯದರ್ಶಿ ಭರಮಪ್ಪ ತಳವಾರ, ಪದಾಧಿಕಾರಿಗಳಾದ ದತ್ತಾತ್ರೇಯ ಅಂಬೋರೆ, ವಿಠ್ಠಲ ಅಂಬೋರೆ, ಲಕ್ಷ್ಮಣ ಮೇದಾರ, ಜಗದೀಶ ನಾಯ್ಕ, ಪವನ ಹಂಚಾಟೆ, ಮಂಜುನಾಥ ಕೆರೂರ, ಹನಮಂತ ಬಂಡಿವಡ್ಡರ, ಮಂಜುನಾಥ ಕಂಬಾರ, ಚಂದ್ರು ಪಟ್ಟಣಶೆಟ್ಟಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ವಸಂತ್ ದೊಂಗಡೆ, ಮಲ್ಲು ಹುನುಗುಂದ, ಸುದರ್ಶನ ಹಂಚಾಟಿ ಸೇರಿದಂತೆ ಸಂಘದ ಪದಾಧಿಕಾರಿಗಳು, ಸುತ್ತಮುತ್ತಲ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಂತರ ಭಕ್ತಾದಿಗಳಿಗೆ ಅನ್ನ ಪ್ರಸಾದದ ವ್ಯವಸ್ಥೆ ಹಮ್ಮಿಕೊಳ್ಳಲಾಗಿತ್ತು.