ಬಜೆಟ್ ನಂತರ ಸಿಎಂ ಬದಲಾಗ್ತಾರಾ, ಮುಂದುವರೆಯುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ ಅವರೇ ಬಜೆಟ್ ಮಂಡಿಸುತ್ತಾರೆ. ಬಜೆಟ್ ತಯಾರಿ ನಡೆದಿದೆ. ಸಿಎಂ ಬದಲಾವಣೆ , ಅರ್ಧ ಅವಧಿ ಬಗ್ಗೆ ನನಗೆ ಗೊತ್ತಿಲ್ಲ ಎಂದು ತಿಳಿಸಿದರು.ಬಾಗಲಕೋಟೆಯಲ್ಲಿ ಹಿಂದೂ ಕಾರ್ಯಕರ್ತರ ಬಂಧನಕ್ಕೆ ಪೊಲೀಸರ ಮೇಲೆ ಸರ್ಕಾರದ ಒತ್ತಡ ಇದೆ ಎಂಬ ಆರೋಪವನ್ನು ತಳ್ಳಿ ಹಾಕಿರುವ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರು ಯಾವ ಅಧಿಕಾರಿಗಳು ಸರ್ಕಾರದ ಕೈಗೊಂಬೆ ಇರೋದಿಲ್ಲ ಎಂದಿದ್ದಾರೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾಗಲಕೋಟೆಯಲ್ಲಿ ಹಿಂದೂ ಕಾರ್ಯಕರ್ತರ ಬಂಧನಕ್ಕೆ ಪೊಲೀಸರ ಮೇಲೆ ಸರ್ಕಾರದ ಒತ್ತಡ ಇದೆ ಎಂಬ ಆರೋಪವನ್ನು ತಳ್ಳಿ ಹಾಕಿರುವ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರು ಯಾವ ಅಧಿಕಾರಿಗಳು ಸರ್ಕಾರದ ಕೈಗೊಂಬೆ ಇರೋದಿಲ್ಲ ಎಂದಿದ್ದಾರೆ.ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸರ್ಕಾರ ಅಧಿಕಾರಿಗಳಿಗೆ ಕೆಲ ಡೈರೆಕ್ಷನ್ ಕೊಡುತ್ತಿರುತ್ತದಷ್ಟೆ. ಸೌಹಾರ್ದತೆಯಿಂದ ಇರಲು ಹೇಳುತ್ತೇವೆ. ಯಾರು ತಪ್ಪು ಮಾಡಿದ್ದಾರೆ ಅವರ ಮೇಲೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ವಿನಾಕಾರಣ ಬಂಧನ ಮಾಡುವ ಅಧಿಕಾರಿಗಳು ನಮ್ಮಲ್ಲಿಲ್ಲ. ಯಾರ್‍ಯಾರು ತಪ್ಪು ಮಾಡಿದಾರೆ ಅಂತ ವಿಡಿಯೋದಲ್ಲಿದೆ. ಆ ಪ್ರಕಾರ ಕ್ರಮ ಕೈಗೊಳ್ಳುತ್ತಾರೆ. ಕಿಲ್ಲಾ ಗಲ್ಲಿಯಲ್ಲಿ ಗಲಾಟೆ ವಿಚಾರದಲ್ಲಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಿ. ಯಾವುದೇ ಜಾತಿ ಧರ್ಮ ನೋಡಬೇಡಿ ಎಂದು ಹೇಳಿದ್ದೇವೆ ಎಂದು ತಿಳಿಸಿದರು.
ಪೊಲೀಸರು ಇಂಟೆಲಿಜೆನ್ಸಿಗೋಸ್ಕರ ಬಿನ್ ಡ್ರೆಸ್ ನಲ್ಲಿ ಓಡಾಡ್ತಾರೆ. ಅದಕ್ಕೆ ಬೇರೆ ಅರ್ಥ ಏನಿಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಹೆಣ್ಣು ಮಕ್ಕಳ ಮೇಲೆ ಪೊಲೀಸರಿಂದ ದೌರ್ಜನ್ಯ ಆಗಿದ್ದರೆ. ಆ ವಿಡಿಯೋ ತರಿಸಿಕೊಂಡು ನೋಡಿ ಕ್ರಮ ಕೈಗೊಳ್ಳಲು ಹೇಳುತ್ತೇನೆ ಎಂದರು.ಈಶ್ವರಪ್ಪ ಸಲಹೆ ನಮಗೆ ಬೇಕಿಲ್ಲ:ಸಿಎಂ ಸ್ಥಾನಕ್ಕಾಗಿ ಕುರ್ಚಿ ಕಚ್ಚಾಟ ನಡೆದಿದೆ. ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಸತ್ತಿದೆ ಎಂಬ ಕೆ.ಎಸ್. ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಸಚಿವರು, ಇವರಿಗೆ ಜನ ಯಾವತ್ತೂ ಮೆಜಾರಿಟಿ ಕೊಟ್ಟಿಲ್ಲ. ಅವರಲ್ಲೇ ಶುದ್ಧತೆ ಇಲ್ಲ. ಯತ್ನಾಳ ಎಲ್ಲಿದ್ದಾರೆ ಈಶ್ವರಪ್ಪ ಎಲ್ಲಿದಾರೆ. ಈಶ್ವರಪ್ಪ ಮಾತು ಸಲಹೆ ನಮಗೆ ಬೇಕಿಲ್ಲ ಎಂದು ತಿರುಗೇಟು ನೀಡಿದರು.