ಜಿನಧರ್ಮ ತತ್ವಗಳ ಪಾಲಕರೆಲ್ಲರೂ ಜೈನರೇ: ವಿಪಿನ್‌ಕುಮಾರ ಜೈನ ಸರಾಫ್

| Published : Sep 17 2025, 01:09 AM IST

ಜಿನಧರ್ಮ ತತ್ವಗಳ ಪಾಲಕರೆಲ್ಲರೂ ಜೈನರೇ: ವಿಪಿನ್‌ಕುಮಾರ ಜೈನ ಸರಾಫ್
Share this Article
  • FB
  • TW
  • Linkdin
  • Email

ಸಾರಾಂಶ

ತೇರದಾಳ: ದಾನಿಗೊಂಡ ಸಮೂಹ ಶಿಕ್ಷಣ ಸಂಸ್ಥೆಗಳ ಡಾ.ಸಿದ್ಧಾಂತ ದಾನಿಗೊಂಡ ಸಭಾಭವನದಲ್ಲಿ ದಿಗಂಬರ ಜೈನ ಮಹಾಸಮಿತಿ ಕರ್ನಾಟಕ ಆಂಚಲ ಸ್ವರ್ಣ ಜಯಂತಿ ವರ್ಷದ ನಿಮಿತ್ತ ಸಂಸ್ಕಾರ ಶಿಕ್ಷಣ ಶಿಬಿರ, ವಿದ್ಯಾರ್ಥಿ ವೇತನ ಹಾಗೂ ಶಿಲಾಯಿ ಯಂತ್ರ ವಿತರಣೆ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)

ಜೈನ ಧರ್ಮದಲ್ಲಿ ಹುಟ್ಟಿದವರು ಮಾತ್ರ ಜೈನರಲ್ಲ, ಜೈನ ಧರ್ಮದ ತತ್ವಗಳನ್ನು ಪಾಲಿಸುವವರೆಲ್ಲರೂ ಜೈನರೇ. ಬೇರೆ ಧರ್ಮದವರು ಸಹ ಜೈನ ತತ್ವಗಳನ್ನು ಅನುಸರಿಸಿ ಮುನಿಗಳಾಗಿರುವ ಸಾಕಷ್ಟು ಉದಾಹರಣೆಗಳಿವೆ ಎಂದು ಉದ್ಘಾಟಕ ಅಖಿಲ ಭಾರತ ದಿಗಂಬರ ಜೈನ ಮಹಾಸಮಿತಿ ಕಾರ್ಯನಿರ್ವಾಹಕ ಅಧ್ಯಕ್ಷ ವಿಪಿನ್‌ಕುಮಾರ ಜೈನ ಸರಾಫ್ ಹೇಳಿದರು.

ದಾನಿಗೊಂಡ ಸಮೂಹ ಶಿಕ್ಷಣ ಸಂಸ್ಥೆಗಳ ಡಾ.ಸಿದ್ಧಾಂತ ದಾನಿಗೊಂಡ ಸಭಾಭವನದಲ್ಲಿ ಏರ್ಪಡಿಸಿದ್ದ ದಿಗಂಬರ ಜೈನ ಮಹಾಸಮಿತಿ ಕರ್ನಾಟಕ ಆಂಚಲ ಸ್ವರ್ಣ ಜಯಂತಿ ವರ್ಷದ ನಿಮಿತ್ತ ಹಮ್ಮಿಕೊಂಡಿದ್ದ ಸಂಸ್ಕಾರ ಶಿಕ್ಷಣ ಶಿಬಿರ, ವಿದ್ಯಾರ್ಥಿ ವೇತನ ಹಾಗೂ ಶಿಲಾಯಿ ಯಂತ್ರ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಜೈನ ಧರ್ಮಿಯರು ಇತರೆ ಸಮುದಾಯಗಳೊಡನೆ ಸಹಕಾರಯುತ ಜೀವನ ನಡೆಸುವ ಮೂಲಕ ಸಹಿಷ್ಣುಗಳಾಗಿದ್ದಾರೆ. ಇತರೇ ಸಮುದಾಯಗಳ ಧಾರ್ಮಿಕ ಕ್ರಿಯೆಗಳಿಗೂ ನೆರವು ನೀಡುವ ಮೂಲಕ ಎಲ್ಲ ಸಮುದಾಯಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ನಮ್ಮ ಸನಾತನ ಸಂಸ್ಕೃತಿಯ ಉಳಿಸುವತ್ತ ನಾವೆಲ್ಲರೂ ಜಾಗೃತರಾಗಿ ಮುಂದಿನ ಜನಾಂಗಕ್ಕೆ ಸರಿ ಮಾರ್ಗ ತೋರಲು ಕಂಕಣಬದ್ಧರಾಗಬೇಕಿದೆ ಎಂದು ಕರೆ ನೀಡಿದರು.

ಸುನಿತಾ ಅಳಗೊಂಡ ಸಂಸ್ಕಾರ ಶಿಕ್ಷಣ ಶಿಬಿರದ ಕುರಿತು ಮಾತನಾಡಿದರು. ಡಾ.ನಿಲಿಮಾ ಕಾಗಿ ಇವತ್ತಿನ ಸಮಾಜದಲ್ಲಿ ಮೊಬೈಲ್ ಬಳಕೆಯಿಂದ ಆಗುತ್ತಿರುವ ಅನಾಹುತಗಳು ಮತ್ತು ಮೊಬೈಲ್‌ಗಳಿಂದ ಮಕ್ಕಳನ್ನು ಹೇಗೆ ದೂರವಿರಿಸಬೇಕು ಎಂದು ವಿವರಿಸದ್ದಲ್ಲದೆ, ನಮ್ಮ ಸನಾತನ ಸಂಸ್ಕೃತಿಗೆ ಪಾಶ್ಚಾತ್ಯ ಪ್ರಭಾವ ದಟ್ಟಗೊಳ್ಳುತ್ತಿರುವುದನ್ನು ಈಗಲೇ ತಡೆಗಟ್ಟಬೇಕೆಂದರು. ಮುಧೋಳದ ಆಯುರ್ವೇದ ತಜ್ಞೆ ಡಾ,ಜೋತ್ಸ್ಯಾ ಸಮಾಜ ಅವರು, ಮನೆಯೇ ಮೊದಲ ಪಾಠಶಾಲೆ ಜನನಿಯೇ ಮೊದಲ ಗುರುವಾದ್ದರಿಂದ ಮಗುವಿನ ಸಂಸ್ಕಾರ ಗರ್ಭದಿಂದಲೇ ಪ್ರಾರಂಭವಾಗಬೇಕು ಅಂದಾಗ ಮಾತ್ರ ಸುಸಂಸ್ಕೃತ ಮತ್ತು ಹೊಣೆಗಾರಿಕೆಯ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಡಾ,ಮಹಾವೀರ ದಾನಿಗೊಂಡ ಹೊಲಿಗೆಯಂತ್ರ ಪಡೆದ ಫಲಾನುಭವಿಗಳಿಗೆ ಉಚಿತವಾಗಿ ನಮ್ಮ ಸಂಸ್ಥೆಯಿಂದ ತರಬೇತಿ ನೀಡಲಾಗುವುದು ಎಲ್ಲರೂ ಅದರ ಸದುಪಯೋಗ ಪಡೆದುಕೊಳ್ಳಬೇಕೆಂದರು.

ದಿಗಂಬರ ಜೈನ ಮಹಾಸಮಿತಿ ಕರ್ನಾಟಕ ಅಧ್ಯಕ್ಷ ಸಂಜಯ ಬಾಬಾಸಾಹೇಬ ನಾಡಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಮರ ಎಂ ದುರ್ಗಣ್ಣವರ ಮಾತನಾಡಿದರು. ಡಾ.ಪುಷ್ಪದಂತ ಎಂ. ದಾನಿಗೊಂಡ, ಡಾ.ಮಧುರಾ ಪಿ. ದಾನಿಗೊಂಡ, ಕಲ್ಲಪ್ಪ ವನಜೋಳ, ಪಿ.ಇ. ಕೊಣ್ಣೂರ, ಪ್ರವೀಣ ನಾಡಗೌಡ, ಜಿನ್ನಪ್ಪ ಸೌದತ್ತಿ, ಅಜೀತ ದೇಸಾಯಿ, ಪ್ರವೀಣ ನಾಶಿ, ಅಶೋಕ ಆಲಗೊಂಡ, ನೇಮಣ್ಣ ಸಪ್ತಸಾಗರ, ಅಜಿತಕುಮಾರ ದೇಸಾಯಿ, ರವಿ ಸಾವಂತನವರ, ರವೀಂದ್ರ ಪಮ್ಮನ್ನವರ, ಡಾ.ಶೀತಲ ಕಾಗಿ ಸೇರಿದಂತೆ ಪ್ರ‍್ರಮುಖರಿದ್ದರು. ಸಿದ್ದು ಹಾವೋಜಿ ಸ್ವಾಗತಿಸಿದರು. ಭರತೇಶ ಘಟನಟ್ಟಿ ನಿರೂಪಿಸಿದರು. ಆಕಾಶ ವನಮೋರೆ ವಂದಿಸಿದರು.