ಸಾರಾಂಶ
ಕೆಲವು ವಿದ್ಯಾವಂತ ಯುವಜನತೆ ಇಂದಿನ ಕಾಲಘಟ್ಟದಲ್ಲಿ ದಿಕ್ಕುತಪ್ಪಿದ ನಿರ್ಧಾರಗಳ ಮೂಲಕ ದೇಶಕ್ಕೆ ಅಪಾಯ ಉಂಟು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಏಕತಾ ತತ್ವಗಳನ್ನು ಅಳವಡಿಸಿಕೊಂಡು ವಿಕಸಿತ ಭಾರತ ನಿರ್ಮಾಣಕ್ಕೆ ಯುವ ಜನತೆ ಪಣತೊಡುವ ಅವಶ್ಯಕತೆ ಇದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಶಿವಮೊಗ್ಗ: ಕೆಲವು ವಿದ್ಯಾವಂತ ಯುವಜನತೆ ಇಂದಿನ ಕಾಲಘಟ್ಟದಲ್ಲಿ ದಿಕ್ಕುತಪ್ಪಿದ ನಿರ್ಧಾರಗಳ ಮೂಲಕ ದೇಶಕ್ಕೆ ಅಪಾಯ ಉಂಟು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಏಕತಾ ತತ್ವಗಳನ್ನು ಅಳವಡಿಸಿಕೊಂಡು ವಿಕಸಿತ ಭಾರತ ನಿರ್ಮಾಣಕ್ಕೆ ಯುವ ಜನತೆ ಪಣತೊಡುವ ಅವಶ್ಯಕತೆ ಇದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಗುರುವಾರ ಪಟ್ಟಣದ ಕುಶಾವತಿ ಪಾರ್ಕ್‍ನಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 150ನೇ ಜನ್ಮ ವಾರ್ಷಿಕೋತ್ಸವ ಅಂಗವಾಗಿ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ , ತಾಲೂಕು ಆಡಳಿತ, ಪಪಂ, ಮೇರಾ ಭಾರತ್ ಶಿವಮೊಗ್ಗ, ಕುವೆಂಪು ವಿವಿ ಎನ್‍ಎಸ್‍ಎಸ್ ಘಟಕಗಳು ಚುನಾಯಿತಾ ಪ್ರತಿನಿಧಿಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಏಕತಾ ನಡಿಗೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ದೇಶದ ಭದ್ರತೆಗೆ ಆತಂಕ ಉಂಟು ಮಾಡುವಂತಹ ಕೃತ್ಯದಲ್ಲಿ ಕೆಲವು ವಿದ್ಯಾವಂತರು ತೊಡಗಿದ್ದಾರೆ. ದೆಹಲಿಯಲ್ಲಿ ನಡೆದ ಆತ್ಮಾಹುತಿ ವಿಧ್ವಂಸಕ ಕೃತ್ಯ ದೇಶಕ್ಕೆ ಸವಾಲಾಗಿದೆ. ಈ ಘಟನೆಯಿಂದ ಅನೇಕ ಸತ್ಯಾಂಶಗಳು ಬಹಿರಂಗವಾಗುತ್ತಿದ್ದು, ದೇಶ ರಕ್ಷಣೆಯಲ್ಲಿ ಯುವ ಜನತೆ ಸಕ್ರಿಯವಾಗಬೇಕು ಎಂದು ಹೇಳಿದರು.
ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ದೇಶ ನಿರ್ಮಾಣ ಕಾರ್ಯದಲ್ಲಿ ಸಲ್ಲಿಸಿದ ಸೇವೆ ಅಜರಾಮರವಾಗಿದೆ. ದೃಢನಾಯಕತ್ವದ ಮೂಲಕ ಭಾರತಕ್ಕೆ ಶಕ್ತಿ ಕೊಟ್ಟ ಪಟೇಲ್ ಸಾರ್ವಕಾಲಿಕ ನಾಯಕ. ಇತಿಹಾಸ ತಿಳಿದು ಭವಿಷ್ಯದ ಇತಿಹಾಸ ನಿರ್ಮಾಣಕ್ಕೆ ಪಟೇಲ್ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಯುವ ಜನತೆ ಸಾಗಬೇಕು ಎಂದರು.ಶಾಸಕ ಆರಗ ಜ್ಞಾನೇಂದ್ರ, ಪಪಂ ಅಧ್ಯಕ್ಷ ರಹಮತುಲ್ಲಾ ಅಸಾದಿ ಮಾತನಾಡಿದರು. ವೇದಿಕೆಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಅಶೋಕಮೂರ್ತಿ, ತಾ.ಪಂ. ಮಾಜಿ ಉಪಾಧ್ಯಕ್ಷೆ ಯಶೋಧ, ತಹಸೀಲ್ದಾರ್ ರಂಜಿತ್, ತಾ.ಪಂ.ಇ.ಓ.ಶೈಲಾ, ಪಟ್ಟಣದ ಎಪಿಎಂಸಿಯಿಂದ ಕುಶಾವತಿವರೆಗೆ ನಡೆದ ಏಕತಾ ನಡಿಗೆ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಭಾಗವಹಿಸಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))