ಸಾರಾಂಶ
ವಿಜಯಪುರ: ಉತ್ತರ ಕರ್ನಾಟಕದ ಜೀವನಾಡಿಯಾಗಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಅಣೆಕಟ್ಟು ಭರ್ತಿಯಾಗಿದ್ದು ಡ್ಯಾಂ ತುಂಬ ನೀರು ತುಂಬಿಕೊಂಡು ಕಂಗೊಳಿಸುತ್ತಿದೆ. ಹೀಗಾಹಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಡಿಸಿಎಂ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಬುಧವಾರ ಕೃಷ್ಣ ನದಿಗೆ ಬಾಗಿನ ಅರ್ಪಣೆಗೆ ಆಗಮಿಸಿದ್ದರು. ಈ ವೇಳೆ ಲಾಲ್ ಬಹದ್ದೂರ್ ಶಾಸ್ತ್ರಿ ಆಣೆಕಟ್ಟಿನ ಮುಖ್ಯ ದ್ವಾರಕ್ಕೆ ಹಾಗೂ ಆಲಮಟ್ಟಿ ಡ್ಯಾಂ ಮೇಲ್ಭಾಗವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.
ವಿಜಯಪುರ: ಉತ್ತರ ಕರ್ನಾಟಕದ ಜೀವನಾಡಿಯಾಗಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಅಣೆಕಟ್ಟು ಭರ್ತಿಯಾಗಿದ್ದು ಡ್ಯಾಂ ತುಂಬ ನೀರು ತುಂಬಿಕೊಂಡು ಕಂಗೊಳಿಸುತ್ತಿದೆ. ಹೀಗಾಹಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಡಿಸಿಎಂ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಬುಧವಾರ ಕೃಷ್ಣ ನದಿಗೆ ಬಾಗಿನ ಅರ್ಪಣೆಗೆ ಆಗಮಿಸಿದ್ದರು. ಈ ವೇಳೆ ಲಾಲ್ ಬಹದ್ದೂರ್ ಶಾಸ್ತ್ರಿ ಆಣೆಕಟ್ಟಿನ ಮುಖ್ಯ ದ್ವಾರಕ್ಕೆ ಹಾಗೂ ಆಲಮಟ್ಟಿ ಡ್ಯಾಂ ಮೇಲ್ಭಾಗವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಡ್ಯಾಂ ಸ್ವಾಗತ ಕಮಾನಿನಿಂದ ಬಾಗಿನ ಅರ್ಪಣೆ ಮಾಡುವ ಸ್ಥಳದವರೆಗೂ ವಿವಿಧ ಹೂಗಳು, ಬಾಳೆದಿಂಡು ಹಾಗೂ ತೆಂಗಿನ ಗರಿಗಳಿಂದ ಸಿಂಗರಿಸಿದ್ದು, ಡ್ಯಾಂ ಆವರಣವೆಲ್ಲ ಮದುವಣಗಿತ್ತಿಯಂತೆ ಕಂಗೊಳಿಸುತ್ತಿತ್ತು.