ಪಿಎಸ್‌ಐ ವರ್ಗಾವಣೆಗೆ 30 ಲಕ್ಷ ರು.ಗಳ ಲಂಚ ಕೇಳಿದ ಆರೋಪ

| Published : Aug 04 2024, 01:20 AM IST

ಸಾರಾಂಶ

ಯಾದಗಿರಿ ಮೆಡಿಕಲ್‌ ಕಾಲೇಜು ಎದುರಿನ ಮುಖ್ಯರಸ್ತೆ, ರಾ.ಹೆ. 150 ರಲ್ಲಿ ಪ್ರತಿಭಟನೆ ನಡೆಸಿದ ಪರಶುರಾಮ ತಂದೆ, ಪತ್ನಿ ಹಾಗೂ ಕುಟುಂಬಸ್ಥರು.

*ಯಾದಗಿರಿ ಶಾಸಕ ಚೆನ್ನಾರೆಡ್ಡಿ ತುನ್ನೂರು, ಪುತ್ರ ಸನ್ನೀಗೌಡ ವಿರುದ್ಧ ದೂರು ದಾಖಲು

- ನಗರ ಠಾಣೆಯ ಪಿಎಸ್‌ಐ ಪರಶುರಾಮ್‌ ಅನುಮಾನಾಸ್ಪದ ಸಾವಿನ ಪ್ರಕರಣ

- ಮೃತ ಪಿಎಸೈ ಪರಶುರಾಮ್‌ ಪತ್ನಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು

ಕನ್ನಡಪ್ರಭ ವಾರ್ತೆ ಯಾದಗಿರಿ

ರಾಜ್ಯ ಸರ್ಕಾರದಲ್ಲಿ ವರ್ಗಾವಣೆ ದಂಧೆ ಜೋರಾಗಿದೆ ಎಂಬ ದೂರುಗಳ ಮಧ್ಯೆಯೇ, ಪಿಎಸ್‌ಐ ವರ್ಗಾವಣೆಗೆ 30 ಲಕ್ಷ ರು. ಲಂಚ ಕೇಳಿದ ಆರೋಪದಡಿ, ಯಾದಗಿರಿ ಮತಕ್ಷೇತ್ರದ ಶಾಸಕ, ಕಾಂಗ್ರೆಸ್‌ ಪಕ್ಷದ ಚೆನ್ನಾರೆಡ್ಡಿ ಪಾಟೀಲ್‌ ತುನ್ನೂರು ಹಾಗೂ ಅವರ ಪುತ್ರ ಪಂಪನಗೌಡ (ಸನ್ನೀಗೌಡ) ವಿರುದ್ಧ ನಗರ ಠಾಣೆಯಲ್ಲಿ ಶನಿವಾರ ಮಧ್ಯಾಹ್ನ ದೂರು ದಾಖಲಿಸಲಾಗಿದೆ.

ಶುಕ್ರವಾರ ನಗರ ಪೊಲೀಸ್‌ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪಿಎಸ್‌ಐ ಪರಶುರಾಮ್‌ ಅನುಮಾನಾಸ್ಪದ ಸಾವಿನ ನಂತರ, ಪತ್ನಿ ಶ್ವೇತಾ ಅವರು ನೀಡಿದ ದೂರಿನನ್ವಯ ನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. (0105/2024) ಏಳು ತಿಂಗಳಲ್ಲೇ ನಗರ ಠಾಣೆಯಿಂದ ಪರಶುರಾಮ್‌ ಅವರನ್ನು ಸೆನ್‌ (ಸೈಬರ್‌ಕ್ರೈಂ) ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಇದು ಅವಧಿಪೂರ್ವ ವರ್ಗಾವಣೆಯಾಗಿದ್ದು ಮುಂದುವರೆಸುವಂತೆ ಪತಿ ಕೇಳಿಕೊಂಡಿದ್ದರು. ಆದರೆ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದಲ್ಲಿ ಮುಂದುವರೆಯಲು ತಮ್ಮ ಪತಿ ಪರಶುರಾಮ್‌ ಅವರಿಗೆ ಯಾದಗಿರಿ ಶಾಸಕ ಚೆನ್ನಾರೆಡ್ಡಿ ತುನ್ನೂರು ಹಾಗೂ ಪುತ್ರ ಸನ್ನೀಗೌಡ 30 ಲಕ್ಷ ರು.ಬೇಡಿಕೆ ಇಟ್ಟಿದ್ದರಿಂದ, ಮಾನಸಿಕವಾಗಿ ತೀವ್ರ ಖಿನ್ನತೆಗೊಳಗಾಗಿ ಪರಶುರಾಮ್‌ ಮೃತಪಟ್ಟಿದ್ದಾರೆ ಎಂದು ಪತ್ನಿ ಶ್ವೇತಾ ದೂರಿನಲ್ಲಿ ತಿಳಿಸಿದ್ದಾರೆ.

ಪಿಎಸ್‌ಐ ಪರಶುರಾಮ್‌ ಅವರು ಇಲ್ಲಿನ ಪೊಲೀಸ್‌ ವಸತಿ ಗೃಹದ ತಮ್ಮ ನಿವಾಸದಲ್ಲಿ ಶುಕ್ರವಾರ (ಆ.2) ಸಂಜೆ ಮೃತಪಟ್ಟಿದ್ದರು. ವರ್ಗಾವಣೆಯಿಂದಾಗಿ ತೀವ್ರ ಒತ್ತಡದಲ್ಲಿದ್ದ ಅವರ ಸಾವಿನ ತನಿಖೆ ನಡೆಸಬೇಕು, ಶಾಸಕ ಹಾಗೂ ಪುತ್ರ ವಿರುದ್ಧ ದೂರು ದಾಖಲಿಸಬೇಕು ಎಂದು ಆಗ್ರಹಿಸಿ, ತಂದೆ ಜನಕಮುನಿ, 8 ತಿಂಗಳ ಗರ್ಭಿಣಿ ಪತ್ನಿ ಶ್ವೇತಾ ಹಾಗೂ ಕುಟುಂಬಸ್ಥರು ಸೇರಿದಂತೆ ಸ್ಥಳೀಯ ಅವರ ಅಭಿಮಾನಿಗಳು, ಸಂಘಟನೆಗಳು ತಡರಾತ್ರಿ 2.30ರವರೆಗೆ ಪ್ರತಿಭಟನೆ ನಡೆಸಿದ್ದರು.

7 ತಾಸು ರಾಷ್ಟ್ರೀಯ ಹೆದ್ದಾರಿ ತಡೆ: ಎಫ್‌ಐಆರ್‌ ದಾಖಲಿಸಲಾಗುವುದು ಎಂಬ ಭರವಸೆ ಮೇರೆಗೆ ಖಾಸಗಿ ಆಸ್ಪತ್ರೆಯಿಂದ ಅವರ ಮೃತ ದೇಹವನ್ನು ಇಲ್ಲಿನ ಹೊಸ ಜಿಲ್ಲಾಸ್ಪತ್ರೆ (ಮೆಡಿಕಲ್‌ ಕಾಲೇಜು ಆವರಣ)ಗೆ ತರಲಾಗಿತ್ತು. ಆದರೆ, ಶನಿವಾರ ಬೆಳಗ್ಗೆ 6 ಗಂಟೆಯಾದರೂ ಎಫ್‌ಐಆರ್ ದಾಖಲಿಸಲು ಖಾಕಿಪಡೆ ಹಿಂದೇಟು ಹಾಕುತ್ತಿದ್ದನ್ನು ಕಂಡು ರೊಚ್ಚಿಗೆದ್ದ ದಲಿತ ಸಂಘಟನೆಗಳು ಹಾಗೂ ಕುಟುಂಬಸ್ಥರು, ಯಾದಗಿರಿ-ವಾಡಿ-ಕಲಬುರಗಿ ಮಾರ್ಗದ ರಾಷ್ಟ್ರೀಯ ಹೆದ್ದಾರಿ-150 ತಡೆಗಟ್ಟಿ ಪ್ರತಿಭಟನೆಗಿಳಿದಿದ್ದರು.

ಎಫ್‌ಐಆರ್‌ ದಾಖಲಿಸುವವರೆಗೂ ಅಲ್ಲಿಂದ ಕದಲುವುದಿಲ್ಲ ಎಂಬ ಪಟ್ಟು ಹಿಡಿದಿದ್ದರಿಂದ, ಪರಿಸ್ಥಿತಿ ಸೂಕ್ಷ್ಮತೆ ಅರಿತ ಇಲಾಖೆಯ ಹಿರಿಯ ಅಧಿಕಾರಿಗಳು, ಯಾದಗಿರಿ ಜಿಲ್ಲೆ ಸೇರಿದಂತೆ ಕಲಬುರಗಿ, ಬೀದರ್‌ ಹಾಗೂ ರಾಯಚೂರು ಜಿಲ್ಲೆಗಳಿಂದ ಡಿವೈಎಸ್ಪಿ, ಸಿಪಿಐ, ಪಿಎಸ್‌ಐ ಅಧಿಕಾರಿಗಳನ್ನು ಕರೆಸಿಕೊಂಡು, ಪರಿಸ್ಥಿತಿ ನಿಯಂತ್ರಣಕ್ಕೆ ಮುಂದಾದರು.

ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೂ, ಎಫ್‌ಐಆರ್‌ ಪ್ರತಿ ನೋಡುವವರೆಗೂ ಪ್ರತಿಭಟನೆ ನಡೆದಿತ್ತು. ಪ್ರತಿಭಟನೆ ಹಿನ್ನೆಲೆ ನೂರಾರು ವಾಹನಗಳು ಎರಡ್ಮೂರು ಕಿಲೋ ಮೀಟರ್‌ದಷ್ಟು ಸಾಲುಗಟ್ಟಿ ನಿಂತಿದ್ದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು.

ಮರಣೋತ್ತರ ಪರೀಕ್ಷೆ ನಡೆಸಿದ ನಂತರ, ಪರಶುರಾಮ್‌ ಅವರ ಸ್ವಗ್ರಾಮ ಕೊಪ್ಪಳ ಜಿಲ್ಲೆ ಗಂಗಾವತಿ ಸಮೀಪದ ಸೋಮನಾಳ ಗ್ರಾಮಕ್ಕೆ ಮೃತದೇಹ ಕೊಂಡೊಯ್ಯಲಾಗಿದೆ. ಈ ವೇಳೆ, ಕುಟುಂಬಸ್ಥರು ಹಾಗೂ ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿತ್ತು. ಇಲಾಖೆಯ ಹಲವು ಸಹೋದ್ಯೋಗಿಗಳು, ಸಿಬ್ಬಂದಿಗಳು ಕಣ್ಣೀರು ಹಾಕಿದರು.