ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಹಿಂದು ಸಂಘಟನೆ ಹಾಗೂ ತಂದೆ-ತಾಯಿಯ ಹೋರಾಟದ ಹೊರತೂ ಗಡಿನಾಡು ಕಾಸರಗೋಡಿನ ಹಿಂದು ಯುವತಿ ನಟೋರಿಯಸ್ ಕ್ರಿಮಿನಲ್ ಮುಸ್ಲಿಂ ಯುವಕನೊಂದಿಗೆ ಮದುವೆಯಾಗಿದ್ದಾಳೆ. ಆಕೆಯನ್ನು ಯುವಕ ಇಸ್ಲಾಂಗೆ ಮತಾಂತರಿಸಿ ವಿವಾಹವಾದ ಬಗ್ಗೆ ವಿಶ್ವಹಿಂದು ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು, ಆಕೆಯ ತಂದೆಯನ್ನುದ್ದೇಶಿಸಿ, ‘ಕ್ಷಮಿಸಿ, ನಿಮ್ಮ ಮಗಳನ್ನು ಉಳಿಸಿಕೊಳ್ಳಲು ಆಗಲಿಲ್ಲ’ ಎಂದು ಖೇದ ವ್ಯಕ್ತಪಡಿಸಿ ಬರೆಯಲಾಗಿದೆ.ಕೇರಳದ ಕಾಸರಗೋಡಿನ ವಿದ್ಯಾನಗರ ನಿವಾಸಿ ವಿಸ್ಮಯ ಎಂಬಾಕೆಯನ್ನು ಅಲ್ಲಿನ ಹೈಕೋರ್ಟ್ ಆದೇಶದಂತೆ ಕೇರಳದ ಮೊಹಮ್ಮದ್ ಅಶ್ಫಾಕ್ ಮದುವೆಯಾಗಿದ್ದಾನೆ.ಇದು 2ನೇ ಮದುವೆ: ಮೊಹಮ್ಮದ್ ಅಶ್ಫಾಕ್‌ಗೆ ಈಗಾಗಲೇ ಒಂದು ಮದುವೆಯಾಗಿದ್ದು, ಆತನಿಗೆ ಇದು ಎರಡನೇ ಮದುವೆ. ಈತನ ವಿರುದ್ಧ ಕಾಸರಗೋಡು ವಿದ್ಯಾನಗರ ಠಾಣೆಯಲ್ಲಿ 8 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಮೊಹಮ್ಮದ್ ಅಶ್ಫಾಕ್ ವಿದ್ಯಾನಗರ ನಿವಾಸಿ ವಿಸ್ಮಯಳನ್ನು ಪ್ರೀತಿ ಬಲೆಗೆ ಬೀಳಿಸಿದ್ದನು.ಈ ಬಗ್ಗೆ ವಿಚಾರ ತಿಳಿದ ವಿಸ್ಮಯ ತಂದೆ ವಿನೋದ್ ಅವರು ವಿಸ್ಮಯಳನ್ನು ಮಂಗಳೂರಿನ ಉಳ್ಳಾಲದ ಅತ್ತೆ ಮನೆಯಲ್ಲಿ ಇರಿಸಿ ಬಿಸಿಎ ಶಿಕ್ಷಣ ಕೊಡಿಸುತ್ತಿದ್ದರು. ಆದರೆ ಇಲ್ಲಿಯೂ ಆಕೆಯನ್ನು ಬಿಡದ ಆಶ್ಫಕ್, ಯುವತಿಯನ್ನು ಪ್ರೀತಿಯ ಮೋಹಕ್ಕೆ ಬೀಳಿಸಿ ಕಳೆದ ಜೂನ್ 6 ರಂದು ಉಳ್ಳಾಲದಿಂದ ಕರೆದುಕೊಂಡು ಹೋಗಿದ್ದನು. ಈ ಬಗ್ಗೆ ಪೋಷಕರ ದೂರಿನ ಮೇರೆಗೆ ಪೊಲೀಸರು ಪತ್ತೆ ಹಚ್ಚಿ ವಿಸ್ಮಯಳನ್ನು ಮನೆಯವರ ಜೊತೆ ಕಳುಹಿಸಿದ್ದರು.
ಜೂನ್ 30ರಂದು ಆಶ್ಫಕ್ ಉಳ್ಳಾಲದಿಂದ ವಿಸ್ಮಯಳನ್ನು ಅಪಹರಿಸಿ ಕೊಚ್ಚಿಗೆ ಕರೆದುಕೊಂಡು ಹೋಗಿದ್ದನು. ಈ ವೇಳೆ ಆಕೆಯ ಪೋಷಕರು ಮಂಗಳೂರಿನಲ್ಲಿ ಹಿಂದು ಸಂಘಟನೆ ಮುಖಂಡರನ್ನು ಭೇಟಿಯಾಗಿ, ಕ್ರಿಮಿನಲ್ ಕೇಸ್ ಹೊಂದಿರುವ ಅಶ್ಫಾಕ್ ಎರಡು ತಿಂಗಳ ಪರಿಚಯದಲ್ಲೇ ವಿಸ್ಮಯಳನ್ನು ಮೈಂಡ್ ವಾಶ್ ಮಾಡಿದ್ದಾನೆ. ಕೇರಳದಲ್ಲಿ ವಿಸ್ಮಯಳನ್ನು ಮತಾಂತರಿಸಲು ಯತ್ನಿಸಿದ್ದಾನೆ. ನನ್ನ ಮಗಳನ್ನ ಉಳಿಸಿಕೊಡಿ ಎಂದು ಕಣ್ಣೀರು ಹಾಕಿದ್ದರು.ಈ ನಡುವೆ ಅಶ್ಫಾಕ್ ಕೇರಳ ಹೈಕೋರ್ಟ್ಗೆ ಹೆಬಿಯಾಸ್ ಕಾರ್ಪಸ್ ಅರ್ಜಿ ಹಾಕಿದ್ದನು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ವಾದ-ವಿವಾದ ನಡೆದಿದೆ. ಕೊನೆಗೆ ನ್ಯಾಯಾಲಯದ ಆದೇಶ ಆಶ್ಫಕ್ ಪರವಾಗಿ ಬಂದಿದೆ. ಕಾನೂನು ಹೋರಾಟದಲ್ಲೂ ಎರಡನೇ ಮದುವೆಗೆ ಕೇರಳ ಹೈಕೋರ್ಟ್ ಅವಕಾಶ ನೀಡಿದೆ. ಇದೀಗ ಆಶ್ಫಕ್ ವಿಸ್ಮಯಳನ್ನು ಇಸ್ಲಾಂಗೆ ಮತಾಂತರಿಸಿ ವಿವಾಹವಾಗಿದ್ದಾನೆ. ತಂದೆ-ತಾಯಿ, ಹಿಂದೂ ಸಂಘಟನೆಗಳ ಹೋರಾಟದ ಬಳಿಕವೂ ವಿಸ್ಮಯ, ಆಶ್ಫಕನನ್ನು ವರಸಿದ್ದಾಳೆ.