ಸಾರಾಂಶ
ಪ್ರತಿ ತಿಂಗಳು ಗ್ರಾ.ಪಂಗೆ ಸುಮಾರು ೨ ಲಕ್ಷದಷ್ಟು ಕರದ ಮೂಲಕ ಆದಾಯ ಸಂಗ್ರಹವಾಗುತ್ತದೆ. ಆದರೆ, ಕರವಸೂಲಿಗ, ಕಳೆದ ಒಂದು ವರ್ಷದಿಂದ ಸಾರ್ವಜನಿಕರಿಂದ ಸಂಗ್ರಹಿಸಿದ ಕರವನ್ನು ಬ್ಯಾಂಕಿಗೆ ಜಮೆ ಮಾಡದೆ ವಂಚಿಸಿದ್ದಾರೆ. ಕರವಸೂಲಿ ಬಗ್ಗೆ ನಿಗಾ ವಹಿಸಬೇಕಿದ್ದ ಗ್ರಾ.ಪಂ ಕಾರ್ಯದರ್ಶಿ, ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರು ನಿರ್ಲಕ್ಷ್ಯ ವಹಿಸಿದ್ದೆ ಇದಕ್ಕೆಲ್ಲ ಕಾರಣ. ಸದ್ಯ ಅಧ್ಯಕ್ಷರು ಕರವಸೂಲಿಗಾರನ ಬಗ್ಗೆ ಠಾಣೆಗೆ ದೂರು ನೀಡಿದ್ದಾರೆ. ಆದರೆ, ಇವರ ಆಡಳಿತದ ಅವಧಿಯಲ್ಲೆ ಭಾರಿ ಅಕ್ರಮ ನಡೆದಿದ್ದು ಇದರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಸದಸ್ಯರು ಆಗ್ರಹಿಸಿದರು.
ಸಕಲೇಶಪುರ: ತಾಲೂಕಿನ ಬಾಳ್ಳುಪೇಟೆ ಗ್ರಾಮ ಪಂಚಾಯತ್‌ನಲ್ಲಿ ೧೨ ಲಕ್ಷ ರು. ವಂಚನೆ ನಡೆದಿದ್ದು ಇದರ ನೈತಿಕಹೊಣೆ ಹೊತ್ತು ಅಧ್ಯಕ್ಷರು ರಾಜೀನಾಮೆ ನೀಡಬೇಕು ಎಂದು ಉಪಾಧ್ಯಕ್ಷ ಸ್ವಾಮಿ ಒತ್ತಾಯಿಸಿದ್ದಾರೆ.
ಪ್ರತಿ ತಿಂಗಳು ಗ್ರಾ.ಪಂಗೆ ಸುಮಾರು ೨ ಲಕ್ಷದಷ್ಟು ಕರದ ಮೂಲಕ ಆದಾಯ ಸಂಗ್ರಹವಾಗುತ್ತದೆ. ಆದರೆ, ಕರವಸೂಲಿಗ, ಕಳೆದ ಒಂದು ವರ್ಷದಿಂದ ಸಾರ್ವಜನಿಕರಿಂದ ಸಂಗ್ರಹಿಸಿದ ಕರವನ್ನು ಬ್ಯಾಂಕಿಗೆ ಜಮೆ ಮಾಡದೆ ವಂಚಿಸಿದ್ದಾರೆ. ಕರವಸೂಲಿ ಬಗ್ಗೆ ನಿಗಾ ವಹಿಸಬೇಕಿದ್ದ ಗ್ರಾ.ಪಂ ಕಾರ್ಯದರ್ಶಿ, ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರು ನಿರ್ಲಕ್ಷ್ಯ ವಹಿಸಿದ್ದೆ ಇದಕ್ಕೆಲ್ಲ ಕಾರಣ. ಸದ್ಯ ಅಧ್ಯಕ್ಷರು ಕರವಸೂಲಿಗಾರನ ಬಗ್ಗೆ ಠಾಣೆಗೆ ದೂರು ನೀಡಿದ್ದಾರೆ. ಆದರೆ, ಇವರ ಆಡಳಿತದ ಅವಧಿಯಲ್ಲೆ ಭಾರಿ ಅಕ್ರಮ ನಡೆದಿದ್ದು ಇದರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.ಕಳೆದ ವರ್ಷ ಇದೆ ಕರವಸೂಲಿಗಾರ ಒಂದು ಲಕ್ಷ ರು.ಗಳನ್ನು ವಂಚಿಸಿದ್ದ ಈ ಬಗ್ಗೆ ಸಭೆ ನಡೆಸಿ ಮಾನವೀಯತೆಯ ಆಧಾರದ ಮೇಲೆ ಹಣ ಸಂದಾಯಕ್ಕೆ ಸಮಯ ನೀಡಿ ಹಣ ವಾಪಸ್ ಕಟ್ಟಿಸಿಕೊಳ್ಳಲಾಗಿತ್ತು. ಇಂತಹ ನೌಕರನ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಅಧಿಕಾರಿಯ ವಿರುದ್ಧ ಸಹ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು. ಈ ವೇಳೆ ಸದಸ್ಯರಾದ ರತ್ನ, ಶಿಲ್ಪಾ, ಸಂಜು ಮುಂತಾದವರಿದ್ದರು.