ಮುಖಂಡರಾದ ನಾಗರಾಜ ಲಕ್ಕುಂಡಿ, ಮುತ್ತು ಭಾವಿಮನಿ ಮಾತನಾಡಿ, ದೇಶದ ಸಂವಿಧಾನ ರಚಿಸಿ ಸರ್ವರಿಗೂ ಸಮಾನ ಹಕ್ಕು ನೀಡಿದ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಅವಮಾನವಾಗುವ ರೀತಿಯಲ್ಲಿ ಹೋರಾಟಗಾರರು ನಡೆದುಕೊಂಡಿದ್ದು, ಎಲ್ಲರ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಶಿರಹಟ್ಟಿ: ಲಕ್ಷ್ಮೇಶ್ವರದ ಶಿಗ್ಲಿ ನಾಕಾದಲ್ಲಿ ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಿಸುವುದಕ್ಕಾಗಿ ಸಮಗ್ರ ರೈತ ಹೋರಾಟ ವೇದಿಕೆ, ವಿವಿಧ ರೈತಪರ ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿದ್ದ ಹೋರಾಟದ ವೇದಿಕೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರದ ಮುಖದ ಕಡೆ ಕಾಲು ಮಾಡಿ ತೋರಿಸಿ ಕುಳಿತುಕೊಂಡು ಅವಮಾನ ಮಾಡಿದ ಜ್ಞಾನದೇವ ಬೋಮಲೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.ಬುಧವಾರ ತಹಸೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಶಿರಸ್ತೇದಾರ ಗಿರಿಜಾ ಪೂಜಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಮುಖಂಡರಾದ ನಾಗರಾಜ ಲಕ್ಕುಂಡಿ, ಮುತ್ತು ಭಾವಿಮನಿ ಮಾತನಾಡಿ, ದೇಶದ ಸಂವಿಧಾನ ರಚಿಸಿ ಸರ್ವರಿಗೂ ಸಮಾನ ಹಕ್ಕು ನೀಡಿದ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಅವಮಾನವಾಗುವ ರೀತಿಯಲ್ಲಿ ಹೋರಾಟಗಾರರು ನಡೆದುಕೊಂಡಿದ್ದು, ಎಲ್ಲರ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಮುಖಂಡರಾದ ಜಾನು ಲಮಾಣಿ, ದಲಿತ ಸಂಘರ್ಷ ಸಮಿತಿ ಸಂಘಟನೆಯ ತಾಲೂಕು ಸಂಚಾಲಕ ರವಿ ಡಿ. ಗುಡಿಮನಿ, ಜಿಲ್ಲಾ ಸಂಚಾಲಕ ದುರಗಪ್ಪ ಎಲ್.ಎಚ್., ಶಿವು ಲಮಾಣಿ, ಪುಂಡಲಿಕ ಲಮಾಣಿ, ತಿಪ್ಪಣ್ಣ ಲಮಾಣಿ, ಈರಣ್ಣ ಚವ್ಹಾಣ, ರುದ್ರೇಶ ಲಮಾಣಿ ಸೇರಿದಂತೆ ಅನೇಕರು ಮನವಿ ನೀಡುವ ವೇಳೆ ಇದ್ದರು.ಹಾಸ್ಟೆಲಿಗೆ ಬೇಕಿದೆ ಬಾಡಿಗೆ ಕಟ್ಟಡ

ಗಜೇಂದ್ರಗಡ: ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರ ವೃತ್ತಿಪರ ಬಾಲಕರ ವಸತಿನಿಲಯಕ್ಕೆ ಸೂಕ್ತ ಕಟ್ಟಡವನ್ನು ಪಟ್ಟಣದಲ್ಲಿ ಬಾಡಿಗೆ ರೂಪದಲ್ಲಿ ಪೂರೈಸಲು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.ಈ ಕುರಿತು ಗಜೇಂದ್ರಗಡ ತಹಸೀಲ್ದಾರ್, ತಾಪಂ ಇಒ ಹಾಗೂ ಜಿಲ್ಲಾ ವಾರ್ತಾ ಮತ್ತು ಪ್ರಚಾರ ಇಲಾಖೆಗಳಿಗೆ ಪ್ರಕಟಣೆಯ ಪ್ರತಿಯನ್ನು ನೀಡಿರುವ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು, ಕಟ್ಟಡವು ಪಟ್ಟಣದ ವ್ಯಾಪ್ತಿಯಲ್ಲಿರಬೇಕು. ವಸತಿನಿಲಯವು ೧೦೦ ಮಕ್ಕಳ ಮಂಜೂರಾತಿ ಸಂಖ್ಯಾಬಲ ಹೊಂದಿದ್ದು, ಕಟ್ಟಡವು ಬೋರ್ವೆಲ್ ಹಾಗೂ ಆರ್‌ಸಿಸಿ ನೀರಿನ ಸಂಪು ಹೊಂದಿರುಬೇಕು. ತಾಲೂಕು ಮಟ್ಟದ ಸಮಿತಿಯಲ್ಲಿ ಅನುಮೋದನೆಗೊಂಡ ನಂತರ ಕಟ್ಟಡವನ್ನು ಬಾಡಿಗೆ ರೂಪದಲ್ಲಿ ಪಡೆದುಕೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.