ಬಾಗೇಪಲ್ಲಿಯಲ್ಲಿ ನಡೆಯುತ್ತಿರುವ ಈ ಹೋರಾಟ ಯಾವುದೇ ಒಬ್ಬ ವ್ಯಕ್ತಿಯ ವಿರುದ್ದವಲ್ಲ ಈ ಹೋರಾಟ ಹಗಲು ದರೋಡೆಕೋರರ ಹಾಗೂ ರೈತಾಪಿ ವರ್ಗದವರಿಗೆ ವಂಚನೆ ಮಾಡಿರುವ ವಂಚಕರ ಹಾಗೂ ಭ್ರಷ್ಟಾಚಾರಗಳ ವಿರುದ್ದ ಹೋರಾಟವಾಗಿದೆ.
ಇದು ಕೇವಲ ಟ್ರೈಲರ್ ಮಾತ್ರ ಪಿಚ್ಚರ್ ಅಭೀ ಭಾಕಿ ಹೈ: ಸಂಸ್ । ಬಿಜೆಪಿ, ಜೆಡಿಎಸ್ ಬೃಹತ್ ಪ್ರತಿಭಟನಾ ರ್ಯಾಲಿ
ಕನ್ನಡಪ್ರಭ ವಾರ್ತೆ ಬಾಗೇಪಲ್ಲಿಬಡ ರೈತರಿಗೆ ವಂಚನೆ, ಅನ್ಯಾಯ ಮಾಡುವ, ಬಡ ರೈತರ ಜಮೀನು ಲಪಟಾಯಿಸುವವರನ್ನ ನಾನು ಜೈಲಿಗೆ ಕಳಹಿಸುವ ಕೆಲಸ ಮಾಡುತ್ತೇನೆ. ಇದು ಕೇವಲ ಟ್ರೈಲರ್ ಮಾತ್ರ ಪಿಚ್ಚರ್ ಅಭೀ ಭಾಕಿ ಹೈ, ಮುಂದಿನ ದಿನಗಳಲ್ಲಿ ಸಿನಿಮಾ ತೋರಿಸುತ್ತೇನೆ ಎಂದು ಸಂಸದ ಡಾ.ಕೆ.ಸುಧಾಕರ್ ರೈತರ ಜಮೀನು ಕಬಳಿಸುತ್ತಿರುವ ಜನಪ್ರತಿನಿಧಿಗಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದ ಗಂಟ್ಲಮಲ್ಲಮ್ಮ ಡ್ಯಾಂ ನಿರ್ಮಾಣದ ವಿಚಾರದಲ್ಲಿ ನಡೆಯುತ್ತಿರುವ ಸ್ಥಳೀಯ ಶಾಸಕರ ಭೂ ಆಕ್ರಮಗಳ ವಿರುದ್ದ, ರೈತರ ಉಳಿವಿಗಾಗಿ ಮತ್ತು ಭ್ರಷ್ಟ ರಾಜ್ಯ ಸರ್ಕಾರದ ಆಡಳಿತ ಯಂತ್ರಾಂಗ ಹಾಗೂ ಜನ ವಿರೋಧಿ ಧೋರಣೆಗಳನ್ನು ಖಂಡಿಸಿ ಬಿಜೆಪಿ ಮತ್ತು ಜೆಡಿಎಸ್ನ ಮುಖಂಡ ಹರಿನಾಥರೆಡ್ಡಿ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಬಾಗೇಪಲ್ಲಿಯಲ್ಲಿ ನಡೆಯುತ್ತಿರುವ ಈ ಹೋರಾಟ ಯಾವುದೇ ಒಬ್ಬ ವ್ಯಕ್ತಿಯ ವಿರುದ್ದವಲ್ಲ ಈ ಹೋರಾಟ ಹಗಲು ದರೋಡೆಕೋರರ ಹಾಗೂ ರೈತಾಪಿ ವರ್ಗದವರಿಗೆ ವಂಚನೆ ಮಾಡಿರುವ ವಂಚಕರ ಹಾಗೂ ಭ್ರಷ್ಟಾಚಾರಗಳ ವಿರುದ್ದ ಹೋರಾಟವಾಗಿದೆ ಎಂದರು.ರೈತರಿಗೆ, ಬಡವರಿಗೆ,ಜನಸಾಮಾನ್ಯರ ಕಣ್ಣೀರು ಹೊರೆಸಬೇಕಾಗಿರುವ ಕಂದಾಯ ಇಲಾಖೆ ಜನರಿಗೆ ಕಣ್ಣೀರು ತರಿಸುವಂತಹ ಹಾಗೂ ಲೂಟಿ ಮಾಡುವಂತಹ ಕೆಲಸಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಕೈಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಈ ಜಿಲ್ಲೆ ಬಾಗೇಪಲ್ಲಿಯ ಗಂಟ್ಲಮಲ್ಲಮ್ಮ ಡ್ಯಾಂ ವಿಚಾರದಲ್ಲಿ ನಡೆಯುತ್ತಿರುವ ಆಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ 3 ತಿಂಗಳ ಹಿಂದೆಯೇ ದೂರವಾಣಿ ಮೂಲಕ ತಿಳಿಸಿದ್ದರೂ ಸಹ ಏಕೆ ಯಾವುದೇ ಕ್ರಮಕೈಗೊಂಡಿಲ್ಲ. ಜಿ.ಪ್ರಭು ರವರು ಜಿಲ್ಲಾಧಿಕಾರಿಗಳಾಗಿ ಬಂದ ನಂತರ ಈ ಜಿಲ್ಲೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಜಿಲ್ಲಾಧಿಕಾರಿಗಳ ವಿರುದ್ದ ಕಿಡಿಕಾರಿದ ಅವರು ಬಡ ರೈತರ ಜಮೀನು ಲಪಟಾಯಿಸುವವರ ಪರವಾಗಿ ಕೆಲಸ ಮಾಡಲು ನಿಮಗೆ ನಾಚೀಕೆ ಆಗಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಡವರಿಗೆ, ರೈತರಿಗೆ ಅನ್ಯಾಯ, ಮೋಸ, ವಂಚನೆ ಮಾಡುವ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಏಳೇಏಳು ಜನ್ಮಕ್ಕೂ ಬಡವರ ಶಾಪ ನಿಮ್ಮ ಮತ್ತು ನಿಮ್ಮ ಕುಟುಂಬಕ್ಕೆ ತಟ್ಟುತ್ತೆ ಹುಷಾರಾಗಿರಿ ಎಂದರು.ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸಾವಿರಾರು ಕೋಟಿಗಳ ಒಡೆಯ ಈ ಕ್ಷೇತ್ರದ ಜನತೆಗೆ ನಿಜವಾಗಿಯೂ ಸೇವೆ ಮಾಡುತ್ತಾರೆ ಎಂಬುದಾಗಿ ನಂಬಿದ್ದೆ. ನೀವು ಈ ಭಾಗದ ದಲಿತರ, ರೈತರ, ಬಡವರ,ಹಿಂದುಳಿದ ಅಲ್ಪಸಂಖ್ಯಾತರಗೋಸ್ಕರ ಕೆಲಸ ಮಾಡುತ್ತೇನೆ. ನನಗೆ ಒಂದು ನಯಾಪೈಸೆಯೂ ಬೇಕಾಗಿಲ್ಲ, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯೇ ನನ್ನ ಮುಖ್ಯ ಆಶೆಯವಾಗಿದೆ ಎಂಬುದಾಗಿ ಹೇಳುತ್ತಿದ್ದರು.
ಆದರೆ ನಿಮ್ಮ ಅಧಿಕಾರದ ಅವಧಿಯಲ್ಲಿ ಇಲ್ಲಿ ಇಷ್ಟೊಂದು ಆಕ್ರಮಗಳು, ಭ್ರಷ್ಟಾಚಾರಗಳು ನಡೆಯುತ್ತಿದ್ದರೂ ನೀವು ಏನು ಮಾಡುತ್ತಿದ್ದೀರಿ ನಿಮಗೆ ಆತ್ಮಸಾಕ್ಷಿ ಏನಾಗಿದೆ ಪ್ರಶ್ನಿಸಿದರಲ್ಲದೆ ಈ ಭಾಗದ ಜನರಿಗೆ ನೀವು ಏನು ಕೊಡದೆ ಇದ್ದರೂ ಪರವಾಗಿಲ್ಲ ಆದರೆ ರೈತರಿಗೆ ಅನ್ಯಾಯ ಮಾಡುವಂತಹ ಕೆಲಸ ಮಾಡಬೇಡಿ ಎಂದರು.ನೀರಾವರಿ ಯೋಜನೆ ವಿಚಾರದಲ್ಲಿ ನಮ್ಮದು ಯಾವುದೇ ತಕರಾರು ಇಲ್ಲ ಆದರೆ ಯೋಜನೆ ಅನುಷ್ಠಾನ ವಿಚಾರದಲ್ಲಿ ರೈತರಿಗೆ ತೊಂದರೆ ಮಾಡಿದರೆ ಮಾತ್ರ ನಾನು ಸೇರಿದಂತೆ ಎನ್ಡಿಎ ಸಹಿಸಲ್ಲ ಅದೇ ರೀತಿಯಲ್ಲಿ ಕೈಗಾರಿಕೆ ಪ್ರದೇಶ ಅಭಿವೃದ್ಧಿಯ ವಿಚಾರದಲ್ಲಿಯೂ ಸಹ ಯಾವುದೇ ತಕರಾರಿಲ್ಲ. ಆದರೆ ಕಾನೂನು ರೀತ್ಯ ಜಮೀನು ಕಳೆದುಕೊಳ್ಳುವ ರೈತರಿಗೆ ಪರಿಹಾರ ಧನವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಬೇಕು.
ಅದು ಬಿಟ್ಟು ರೈತರಿಗೆ ಟೋಪಿ ಹಾಕಿ ಜಮೀನು ಇಲ್ಲವೇ ಕೋಟ್ಯಾಂತರ ಹಣ 3 ತಿಂಗಳಲ್ಲಿ ಮಾಡುವ ಕೆಲಸಕ್ಕೆ ಕೈಹಾಕಬೇಡಿ, ರೈತರಿಗೆ ಅನ್ಯಾಯಮಾಡಿದವರಿಗೆ ಮುಂದಿನ ದಿನಗಳಲ್ಲಿ ಜೈಲುವಾಸ ಫಕ್ಕಾ ಎಂಬುದಾಗಿ ಎಚ್ಚರಿಕೆ ನೀಡಿದರಲ್ಲದೆ ಮುಂದಿನ 2028ರ ವಿಧಾನ ಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಎನ್ಡಿಎ ಅಭ್ಯರ್ಥಿ ಗೆಲವು ಸಾಧಿಸುವುದು ಖಚಿತ ಎಂದರು.ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಎನ್ಡಿಎ ಮುಖಂಡ ಹರಿನಾಥರೆಡ್ಡಿ ಮಾತನಾಡಿ, ಸಮಾಜ ಸೇವೆಯ ಹೆಸರಿನಲಿಳೀ ಕ್ಷೇತ್ರವನ್ನ ಮಾದರಿ ಕ್ಷೇತ್ರವನ್ನಾಗಿಸುವುದಾಗಿ ಹೇಳಿಕೊಂಡು ಬಂದ ನೀವು ಶಾಸಕರಾಗಿ 13 ವರ್ಷಗಳು ಕಳೆದರೂ ಸಹ ಈ ಕ್ಷೇತ್ರದ ಅಭಿವೃದ್ದಿಯ ಬದಲಿಗೆ ಮಧ್ಯದಂಗಡಿಗಳನ್ನ ಅಭಿವೃದ್ಧಿಪಡಿಸಿರುವುದೇ ನಿಮ್ಮ ಸಾಧನೆಯಾಗಿದೆ ಎಂದು ಆರೋಪಿಸಿದರು.
ಗಂಟ್ಲಮಲ್ಲಮ್ಮ ಡ್ಯಾಂ ವಿಚಾರದಲ್ಲಿ ಬಡ ರೈತರ ಜಮೀನನ್ನು ಕಡಿಮೆ ಬೆಲೆಗೆ ಖರೀಧಿಸಿ ಬೇನಾಮಿ ಸಂಸ್ಥೆಯ ಹೆಸರಿನಲ್ಲಿ ಖಾತೆ ಮಾಡಿಸಿಕೊಂಡು ಸರ್ಕಾರದಿಂದ ಒಂದು ಎಕರೆಗೆ ಬರುವ 1 ಕೋಟಿ 20 ಲಕ್ಷ ರು.ಗಳನ್ನು ಪಡೆಯುವ ಮೂಲಕ ರೈತರಿಗೆ ಅನ್ಯಾಯ ಮಾಡಿದ್ದಾರೆ, ಅಲ್ಲದೆ ಇದೇ ರೀತಿಯಲ್ಲಿ ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಘಂಟಂವಾರಿಪಲ್ಲಿ, ಹೊಸಹುಡ್ಯ ಇತ್ಯಾಧಿ ಕಡೆಗಳಲ್ಲಿ ರೈತರ ಜಮೀನು ಬೇನಾಮಿ ಹೆಸರಿನಲ್ಲಿ ಖರೀದಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ ರೈತರಿಗೆ ನ್ಯಾಯ ಸಿಗುವವರೆವಿಗೂ ಹೋರಾಟ ಮುಂದುವರೆಸುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ರಾಮಲಿಂಗಪ್ಪ, ಎನ್ಡಿಎ ಮುಖಂಡರಾದ ಕೋನಪರೆಡ್ಡಿ, ಚಂದ್ರಶೇಖರೆಡ್ಡಿ ಮತ್ತಿತರರು ಇದ್ದರು.
11ಬಿಜಿಪಿ-1: ಎನ್ ಡಿ ಎ ಮುಖಂಡ ಹರಿನಾಥರೆಡ್ಡಿ ನೇತೃತ್ವದಲ್ಲಿ ಬಾಗೇಪಲ್ಲಿಯಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಸಂಸದ ಡಾ.ಕೆ.ಸುಧಾಕರ್ ಮಾತನಾಡಿದರು.11ಬಿಜಿಪಿ-1ಎ: ಎನ್ ಡಿ ಎ ಮುಖಂಡ ಹರಿನಾಥರೆಡ್ಡಿ ನೇತೃತ್ವದಲ್ಲಿ ಬಾಗೇಪಲ್ಲಿಯಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಎನ್ ಡಿ ಎ ಕಾರ್ಯಕರ್ತರು ಭಾಗಿಯಾಗಿರುವುದು.