ಸಾರಾಂಶ
ಬ್ಯಾಡಗಿ: ಸ್ವಾತಿ ಹತ್ಯೆಯನ್ನು ಖಂಡಿಸಿ ಪಟ್ಟಣದಲ್ಲಿ ಅಖಿಲ ಕರ್ನಾಟಕ ಪಟ್ಟಿಸಾಲೆ ನೇಕಾರ ಸಂಘದ ತಾಲೂಕು ಘಟಕದ ಸದಸ್ಯರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಪ್ಪಿತಸ್ಥರಿಗೆ ಮರಣದಂಡನೆ ವಿಧಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಪುರಸಭೆ ಮಾಜಿ ಸದಸ್ಯೆ ಪ್ರೇಮಾ ಬೆನ್ನೂರ ಮಾತನಾಡಿ, ರಾಜ್ಯದಲ್ಲಿ ಹಿಂದೂ ಯುವತಿಯರ ಹತ್ಯೆ ಪ್ರಕರಣಗಳು ದಿನಕ್ಕೆ ದಿನಕ್ಕೆ ಹೆಚ್ಚುತ್ತಿವೆ. ಇದರ ಹಿಂದೆ ವ್ಯವಸ್ಥಿತವಾದ ಜಾಲವೊಂದು ಕೆಲಸ ಮಾಡುತ್ತಿದೆ. ಬಿಗಿಯಾದ ಕ್ರಮಗಳಿಲ್ಲದೇ ಪ್ರೇಮದ ಜಾಲಕ್ಕೆ ಸಿಕ್ಕಿಕೊಳ್ಳುವಂತೆ ಮಾಡಿ ಬಳಿಕ ಅವರನ್ನು ವ್ಯವಸ್ಥಿತವಾಗಿ ಹತ್ಯೆ ಮಾಡಲಾಗುತ್ತಿದೆ. ಹೀಗಿದ್ದರೂ ಸರ್ಕಾರ ಯಾವುದೇ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.ವಿಷ್ಣುಕಾಂತ ಬೆನ್ನೂರ ಮಾತನಾಡಿ, ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಎಂಬ ಯುವತಿಯನ್ನು ಕಾಲೇಜು ಆವರಣದಲ್ಲಿ ಕೊಲ್ಲಲಾಯಿತು. ಪ್ರಕರಣ ಮಾಸುವ ಮುನ್ನವೇ ಮಾಸೂರಿನ ಸ್ವಾತಿಯನ್ನು ಕೊಲೆ ಮಾಡಲಾಗಿದೆ. ಎಲ್ಲ ಪ್ರಕರಣಗಳಲ್ಲೂ ಮುಸ್ಲಿಂ ಯುವಕರ ಕೈವಾಡವಿದೆ. ಹೀಗಿದ್ದರೂ ಅವರಿಗೆ ಶಿಕ್ಷೆ ಪ್ರಕಟವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತಿ ಕುಲಕರ್ಣಿ ಮಾತನಾಡಿ, ಮಸ್ಲಿಂ ಯುವಕರಲ್ಲಿ ತುಂಬುತ್ತಿರುವ ಧರ್ಮಾಂಧತೆ ಪರಿಣಾಮ ಇದಾಗಿದೆ. ಜಿಲ್ಲೆಯಲ್ಲಿ ಲವ್ ಜಿಹಾದ್ ಸಕ್ರಿಯವಾಗಿದೆ. ಆದರೆ ಹಿರೇಕೆರೂರು ಶಾಸಕ ಯು.ಬಿ. ಬಣಕಾರ ಲವ್ ಜಿಹಾದ್ ಅಲ್ಲ ಎಂಬ ಹೇಳಿಕೆ ನೀಡಿದ್ದು ರಾಜಕೀಯ ಪ್ರೇರಿತ ಎಂದರು.ಗಣೇಶ ಕವಲಿ ಮಾತನಾಡಿ, ಪ್ರಕರಣ ಮುಚ್ಚಿ ಹಾಕಲು ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಆದರೆ ಮೃತರ ತಾಯಿಯ ದಿಟ್ಟ ನಿರ್ಧಾರದಿಂದ ಲವ್ ಜಿಹಾದ್ ಕೃತ್ಯ ಬಯಲಾಗಿದೆ. ಮುಸ್ಲಿಂ ತುಷ್ಟೀಕರಣ ಮಾಡುತ್ತಿರುವ ಆರೋಪಿಗಳನ್ನು ರಕ್ಷಣೆ ಮಾಡಲು ಯಾವುದೇ ಕಾರಣಕ್ಕೂ ಆಸ್ಪದ ಕೊಡುವುದಿಲ್ಲ. ಆದ್ದರಿಂದ ಕೂಡಲೇ ಸ್ವಾತಿ ಹತ್ಯೆ ಪ್ರಕರಣ ಎನ್‌ಐಎ ಒಪ್ಪಿಸಿ ನ್ಯಾಯ ಒದಗಿಸಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ವೇಳೆ ವಿರೂಪಾಕ್ಷಪ್ಪ ಚಿನ್ನಿಕಟ್ಟಿ, ನಾಗರಾಜ ಹಡಗಲಿ, ಮಹೇಶ ಮಾಸೂರ, ರೇಖಾ ಚಿನ್ನಿಕಟ್ಟಿ ಸೇರಿದಂತೆ ಹಲವರು ಭಾಗವಹಿಸಿದ್ದರು.ಸ್ವಾತಿಗೆ ಎಬಿವಿಪಿಯಿಂದ ಶ್ರದ್ಧಾಂಜಲಿಹಿರೇಕೆರೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಪಟ್ಟಣದಲ್ಲಿ ಸೋಮವಾರ ರಾತ್ರಿ ಸ್ವಾತಿ ಬ್ಯಾಡಗಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ವೇಳೆ ಮೌನಚರಣೆ ಮಾಡಲಾಯಿತು ಕಾರ್ಯಕ್ರಮದ ವೇಳೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಅಭಿಷೇಕ್ ದೊಡ್ಡಮನಿ ಮತ್ತು ಹಿರಿಯ ಕಾರ್ಯಕರ್ತರಾದ ರವಿ ಗೌಡ ಖಂಡಿಬಾಗೂರ್ ಮಾತನಾಡಿದರು.ಬಿಜೆಪಿ ಯುವ ಮೋರ್ಚಾ ಅಧ್ಯಕ್ಷೆ ಜಗದೀಶ ದೊಡ್ಡಗೌಡ್ರ, ನ್ಯಾಯವಾದಿಗಳಾದ ದುರಗೇಶ ತಿರಕಪ್ಪನವರ್, ನಾಗರಾಜ ಹುಲ್ಲತ್ತಿ, ಈರಣ್ಣ ಚಿಟ್ಟೂರು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲೂಕು ಸಂಚಾಲಕ ವಿಕಾಸ್ ಎನ್. ಗಿರಿಜಪ್ಪನವರ್ ಮತ್ತು ನಗರ ಕಾರ್ಯದರ್ಶಿ ಪವನ್ ಬೆನ್ನಿ ಮತ್ತು ವಿನಾಯಕ್ ಬಾರ್ಕಿ ಇತರರು ಇದ್ದರು.