ಚನ್ನಪಟ್ಟಣ: ನಗರದಲ್ಲಿ ವಾಸಿಸುವ ಅರ್ಹ ಫಲಾನುಭವಿಗಳನ್ನು ಮಾತ್ರ ಗುರುತಿಸಿ ಅವರಿಗೆ ನಿವೇಶನ ನೀಡಲು ಪ್ರತಿಯೊಬ್ಬರು ಪ್ರಾಮಾಣಿಕ ಕೆಲಸ ನಿರ್ವಹಿಸಬೇಕು ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.

ಚನ್ನಪಟ್ಟಣ: ನಗರದಲ್ಲಿ ವಾಸಿಸುವ ಅರ್ಹ ಫಲಾನುಭವಿಗಳನ್ನು ಮಾತ್ರ ಗುರುತಿಸಿ ಅವರಿಗೆ ನಿವೇಶನ ನೀಡಲು ಪ್ರತಿಯೊಬ್ಬರು ಪ್ರಾಮಾಣಿಕ ಕೆಲಸ ನಿರ್ವಹಿಸಬೇಕು ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.

ನಗರಸಭೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಆಶ್ರಯ ಸಮಿತಿ ಅಧಿಕಾರಿಗಳು ಹಾಗೂ ನಗರಸಭಾ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕು ಆಡಳಿತ ಹಾಗೂ ನಗರಸಭೆ ತಮ್ಮ ವ್ಯಾಪ್ತಿಯಲ್ಲಿ ಇರುವ ಸರ್ಕಾರಿ ಭೂಮಿಯನ್ನು ಗುರುತಿಸಬೇಕು. ಒಂದು ವೇಳೆ ನಗರಸಭೆ ವ್ಯಾಪ್ತಿಯಲ್ಲಿ ಸೂಕ್ತ ಜಾಗ ಲಭ್ಯವಿಲ್ಲದಿದ್ದರೆ ಗ್ರಾಮೀಣ ಪ್ರದೇಶದಲ್ಲಿಯಾದರೂ ಸರ್ಕಾರಿ ಭೂಮಿಯನ್ನು ಗುರುತಿಸಿ ಅರ್ಹರಿಗೆ ಹಂಚಬೇಕು ಎಂದರು.

ನಗರದಲ್ಲಿ ಮುಖ್ಯವಾಗಿ ಪೌರಕಾರ್ಮಿಕರು ನಿವೇಶನ ಸಮಸ್ಯೆ ಅನುಭವಿಸುತ್ತಿದ್ದು, ಮೊದಲು ಅವರಿಗೆ ಹಂಚಬೇಕು. ಜೊತೆಗೆ ಕೂಲಿ ಹಾಗೂ ಮನೆ ಕೆಲಸಗಳಿಗೆ ಹೋಗುವ ನಿವೇಶನ ರಹಿತ ಫಲಾನುಭವಿಗಳನ್ನು ಗುರುತಿಸಿಬೇಕು. ತಾಲೂಕಿನ ಕೆಲವಡೆ ಆಶ್ರಯ ನಿವೇಶನ ಪತ್ರಗಳನ್ನು ನೀಡುವ ಸಂದರ್ಭದಲ್ಲಿ ಗ್ರಾಪಂ ಸದಸ್ಯರಿಗೆ ಹಕ್ಕುಪತ್ರಗಳು ತಲುಪಿವೆ ಎಂಬ ಮಾಹಿತಿ ಲಭ್ಯವಾಗಿದೆ. ಈ ರೀತಿ ಅಕ್ರಮವಾಗಿ ವಿತರಣೆಯಾಗಿರುವ ಆಶ್ರಯ ಹಕ್ಕುಪತ್ರಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಿವೇಶನಗಳನ್ನು ನೀಡುವ ವಿಚಾರದಲ್ಲಿ ಲಾಟರಿ ಪದ್ದತಿ ತೆರವು ಮಾಡಬೇಕು. ನಗರಸಭೆಯಾಗಲಿ, ಗ್ರಾಮೀಣ ಪ್ರದೇಶದಲ್ಲಾಗಲಿ ನಿವೇಶನಗಳನ್ನು ಹಂಚುವಾಗ ಪ್ರತಿಯೊಬ್ಬ ಫಲಾನುಭವಿಗಳ ಬಡತನದ ಮಾನದಂಡವನ್ನು ಪರಿಗಣಿಸಿ, ಆಶ್ರಯ ನಿವೇಶನಗಳ ಹಕ್ಕುಪತ್ರಗಳನ್ನು ನೀಡಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ನಗರಸಭೆ ಅಧ್ಯಕ್ಷ ವಾಸಿಲ್ ಆಲಿಖಾನ್, ಪೌರಾಯುಕ್ತ ಮಹೇಂದ್ರ ಹಾಗೂ ಆಶ್ರಯ ಸಮಿತಿಯ ಸದಸ್ಯರಾದ ವೆಂಕಟೇಶ್, ನಗರಸಭೆ ಮಾಜಿ ಸದಸ್ಯೆ ಗೌರಮ್ಮ, ಟಿ.ಬಾಲುಕುಮಾರ್, ಇಬ್ರಾಯಿಂಖಾನ್ ಹಾಜರಿದ್ದರು.

ಪೋಟೊ೩೧ಸಿಪಿಟಿ1: ಚನ್ನಪಟ್ಟಣದ ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಆಶ್ರಯ ಸಮಿತಿ ಸಭೆಯಲ್ಲಿ ಶಾಸಕ ಸಿ.ಪಿ.ಯೋಗೇಶ್ವರ್ ಮಾತನಾಡಿದರು.