ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಗ್ರಾಮೀಣ ಪ್ರದೇಶದಲ್ಲಿ ನೆಲೆನಿಂತಿರುವ ಮಾದಾಪುರದ ಶ್ರೀಮತಿ ಡಿ. ಚೆನ್ನಮ್ಮ ಎಜುಕೇಶನ್ ಸೊಸೈಟಿ ಈಗ ವಜ್ರ ಮಹೋತ್ಸವ ಸಂಭ್ರಮದಲ್ಲಿದ್ದು ಇದೇ 27 ಮತ್ತು 28 ರಂದು ಸಂಸ್ಥೆಯ 60 ನೇ ವರ್ಷಾಚರಣೆ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಕರ್ನಲ್ ಬಿ.ಜಿ.ವಿ. ಕುಮಾರ್ ತಿಳಿಸಿದ್ದಾರೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕರ್ನಲ್ ಕುಮಾರ್, ದಾನಿಗಳಾದ ದಿವಂಗತ ಲೆಫ್ಟಿನೆಂಟ್ ಕರ್ನಲ್ ಡಿ ಸಿ ಬಸಪ್ಪ ಅವರ ಪ್ರಯತ್ನದಿಂದಾಗಿ ಅವರ ತಾಯಿ ಡಿ ಚೆನ್ನಮ್ಮ ಸ್ಮರಣಾಥ೯ 1960 ರ ಜುಲೈ 22 ರಂದು ಆರಂಭವಾದ ಪ್ರೌಢಶಾಲೆ 6 ದಶಕಗಳಲ್ಲಿ ಈ ವ್ಯಾಪ್ತಿಯ ಗ್ರಾಮೀಣ ವಿದ್ಯಾಥಿ೯ಗಳಿಗೆ ಜ್ಞಾನದೀವಿಗೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ದಿವಂಗತರಾದ | ಮಚ್ಚಂಡ ಗಣಪತಿ, ಪುಟ್ಟುಸ್ವಾಮಿ ಮುತ್ತಯ್ಯ ಗುಂಡುಕುಟ್ಟಿ ಮಂಜುನಾಥಯ್ಯ, ಎಂ ಎ ಪೊನ್ನಪ್ಪ, ಕೆ.ಡಿ.ಸೋಮಯ್ಯ, ಸಿ.ಎ.ಪೂವಯ್ಯ, ಎಂ ಜಿ ಬೋಪಣ್ಣ ಸೇರಿದಂತೆ ಅನೇಕ ಮಹನೀಯರ ಪರಿಶ್ರಮದಿಂದಾಗಿ ಶಿಕ್ಷಣ ಸಂಸ್ಥೆಯು ಸಾಕಷ್ಟು ಅಭಿವೃದ್ಧಿ ಹೊಂದಿದೆ ಎಂದು ಸ್ಮರಿಸಿಕೊಂಡರು.
1964ರಲ್ಲಿ ಗರಗಂದೂರಿನ ಈಗಿನ ಸುಂದರ ಕಟ್ಟಡಕ್ಕೆ ಶಾಲೆಯನ್ನು ಸ್ಥಳಾಂತರಿಸಲಾಯಿತು ಎಂದು ತಿಳಿಸಿದ ಕುಮಾರ್, ದಿ| ಗುಂಡೂರಾವ್ ಅವರ ಕಾಲದಲ್ಲಿ ಕಾಲೇಜು ಸ್ಥಾಪನೆಯ ಕನಸು 1967ರಲ್ಲಿ ಈಡೇರಿತು ಎಂದು ಹೇಳಿದರು. ಪ್ರೌಢಶಾಲೆಯ ಪ್ರಥಮ ಮುಖ್ಯೋಪಾಧ್ಯಾಯರಾಗಿ ಕೊಡಗಿನ ಇತಿಹಾಸದ ಕೃತಿಕಾರ, ಖ್ಯಾತ ಸಾಹಿತಿ ದಿ. ಡಿ.ಎನ್. ಕೃಷ್ಣಯ್ಯ ಕಾರ್ಯನಿರ್ವಹಿಸಿದ್ದು ಸಂಸ್ಥೆಯ ಪಾಲಿಗೆ ಹೆಮ್ಮೆಯ ವಿಚಾರ ಎಂದೂ ಕುಮಾರ್ ಸ್ಮರಿಸಿದರು.ಪ್ರಸ್ತುತ ಕಾಲೇಜಿನ ವಜ್ರಮಹೋತ್ಸವದ ಅಂಗವಾಗಿ ಡಿ. 27 ರಂದು ಶುಕ್ರವಾರ ಹಳೇ ವಿದ್ಯಾಥಿ೯ಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಆಯೋಜಿತವಾಗಿದ್ದು, ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಳೇ ವಿದ್ಯಾರ್ಥಿಗಳಿಗೆ ವೈವಿಧ್ಯಮಯ ಮನರಂಜನಾ ಕ್ರೀಡಾಸ್ಪಧೆ೯ಗಳು ಆಯೋಜಿಸಲ್ಪಟ್ಟಿದೆ, ಮಧ್ಯಾಹ್ನ 1 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಸಂಸ್ಥೆಯ ಹಳೇ ವಿದ್ಯಾಥಿ೯ ಸಂಘದ ಅಧ್ಯಕ್ಷ ಎಂ.ಜಿ.ಬೋಪಣ್ಣ, ಅಧ್ಯಕ್ಷತೆಯ ಕಾರ್ಯಕ್ರಮವನ್ನು, ಎಂ.ಜಿ. ಬೋಪಣ್ಣ ಉದ್ಘಾಟಿಸಲಿದ್ದಾರೆ, ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಹೆಚ್ಚುವರಿ ಆಯುಕ್ತ ಬಿ.ಎ.ನಾಣಿಯಪ್ಪ, ಕಾಫಿ ಬೆಳೆಗಾರರಾದ ಸಿ.ಪಿ.ಮುದ್ದಪ್ಪ, ಕೆ.ಎಸ್.ಮಂಜುನಾಥ್, ಎಚ್.ಎ.ಎಸ್. ಉತ್ತಯ್ಯ, ಮೈಸೂರು ಆಕಾಶವಾಣಿಯ ಸಹಾಯಕ ನಿರ್ದೇಶಕ ಅಬ್ದುಲ್ ರಶೀದ್, ಅರಣ್ಯ ಇಲಾಖೆಯ ಹಿರಿಯ ಸಹಾಯಕಿ ಬಿ.ಆರ್. ವಿಜಯಲಕ್ಷ್ಮಿ, ಪತ್ರಕರ್ತ ಅನಿಲ್ ಎಚ್. ಟಿ., ವಕೀಲ ಕೆ.ಎಸ್.ರತನ್ ತಮ್ಮಯ್ಯ, ಕನ೯ಲ್ ಪಾಸುರ ಮುತ್ತಪ್ಪ, ಕರ್ನಲ್ ಎಂ.ಜಿ.ತಿಮ್ಮಯ್ಯ, ಸಂಸ್ಥೆಯ ನಿವೃತ್ತ ಹಿರಿಯ ಕಚೇರಿ ಸಹಾಯಕಿ ಎಸ್. ಸಿ. ಮಾಲತಿ, ಲೆಕ್ಕಪರಿಶೋಧಕ ಫ್ರಾನ್ಸಿಸ್ ಪಿ.ಡಬ್ಲ್ಯು, ನಿವೃತ್ತ ಉಪನೋಂದಣಾಧಿಕಾರಿ ಕೆ.ಎಂ.ಭಾನುಮತಿ ಮೈಸೂರಿನ ಉದ್ಯಮಿ ಬಿ.ವಿ.ವೆಂಕಪ್ಪ , ಶಾಲಾ ಸಮಿತಿಯ ಪೋಷಕ ಸದಸ್ಯ ಎಚ್.ಎಸ್ ಗಣೇಶ್, ಸವಿತ ಪಾಲ್ಗೊಳ್ಳಲಿದ್ದಾರೆ. ಅಂದು ಸಂಜೆ 5 ಗಂಟೆಯಿಂದ 7 ಗಂಟೆಯವರೆಗೆ ಮೈಸೂರಿನ ಖ್ಯಾತ ಕಲಾವಿದರಿಂದ ಸಂಗೀತ, ನೃತ್ಯ ಕಾರ್ಯಕ್ರಮ ಆಯೋಜಿತವಾಗಿದೆ ಎಂದು ಸಂಸ್ಥೆಯ ಅಧ್ಕ್ಷಕ್ಷ ಕರ್ನಲ್ ಬಿ.ಜಿ.ವಿ. ಕುಮಾರ್ ತಿಳಿಸಿದರು.
ಡಿಸೆಂಬರ್ 28 ರಂದು ಶನಿವಾರ ಬೆಳಗ್ಗೆ 11 ಗಂಟೆಗೆ 20 ಲಕ್ಷ ರುಪಾಯಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿರುವ ಭೋಜನಾಲಯವನ್ನು ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂಥರ್ ಗೌಡ ಉದ್ಘಾಟಿಸಲಿದ್ದು, ಸಭಾ ಕಾರ್ಯಕ್ರಮವನ್ನು ಶಾಸಕರಾದ ಎ.ಎಸ್. ಪೊನ್ನಣ್ಣ ಮತ್ತು ಸುಜಾಕುಶಾಲಪ್ಪ ಉದ್ಘಾಟಿಸಲಿದ್ದಾರೆ, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲೆಫ್ಪಿನೆಂಟ್ ಕರ್ನಲ್ ಸಿ.ಪಿ. ಕಾರ್ಯಪ್ಪ, ರಾಜ್ಯ ಸರ್ಕಾರದ ಚೀಫ್ ಎಲೆಕ್ಟ್ರಿಕಲ್ ಇನ್ಸ್ ಪೆಕ್ಟರ್ ರೋಷನ್ ಅಪ್ಪಚ್ಚು, ಅರಣ್ಯ ಮಹಾವಿದ್ಯಾಲಯದ ನಿವೃತ್ತ ಡೀನ್ ಸಿ.ಜಿ. ಕುಶಾಲಪ್ಪ, ಮಾಜಿ ಸಚಿವರಾದ ಎಂ. ಪಿ ಅಪ್ಪಚ್ಚು ರಂಜನ್, ಬಿ.ಎ.ಜೀವಿಜಯ, ಪಾಂಡಿಚೇರಿ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ನಿವೃತ್ತ ಕಾರ್ಯದರ್ಶಿ ಬಿ.ಆರ್. ಬಾಬು ಸಂಸ್ಥೆಯ ಮಹಾಪೋಷಕ ಗೌತಮ್ ಬಸಪ್ಪ, ಎಂ.ಜಿ ಬೋಪಣ್ಣ, ಕಾರ್ಯದರ್ಶಿ ಎಂ.ಬಿ. ಬೋಪಣ್ಣ ಜಿ.ಪಂ.ನ ನಿವೃತ್ತ ಮುಖ್ಯ ಲೆಕ್ಕಧಿಕಾರಿ ಬಿ.ಬಿ. ಪುಪ್ಪಾವತಿ, ಪ್ರಾಂಶುಪಾಲ ಸಿ.ಜಿ.ಮಂದಪ್ಪ, ಮುಖ್ಯಶಿಕ್ಷಕಿ ಕೆ.. ಯು . ರೀಟಾ ಪಾಲ್ಗೊಳ್ಳಲಿದ್ದಾರೆ. ವಜ್ರದೀವಿಗೆ ಸ್ಮರಣ ಸಂಚಿಕೆಯನ್ನೂ ಲೋಕಾಪ೯ಣೆ ಮಾಡಲಾಗುತ್ತದೆ. ಸಭಾ ಕಾರ್ಯಕ್ರಮದ ನಂತರ ಸಂಸ್ಥೆಯ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿತವಾಗಿದೆ ಎಂದೂ ಕನ೯ಲ್ ಕುಮಾರ್ ಮಾಹಿತಿ ನೀಡಿದರು..ಸಂಸ್ಥೆಯ ಪ್ರಾಂಶುಪಾಲ ಸಿ.ಜಿ.ಮಂದಪ್ಪ ಮಾತನಾಡಿ, ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ ಕೆಜಿ ಮತ್ತು ಯುಕೆಜಿಯನ್ನು ಇಂಗ್ಲೀಷ್ ಮಾಧ್ಯಮದಲ್ಲಿ ಪ್ರಾರಂಭಿಸಲಾಗುತ್ತದೆ, ಪ್ರಸ್ತುತ ಸಂಸ್ಥೆಯಲ್ಲಿ 300 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಸುಸಜ್ಜಿತವಾದ 40 ಕಂಪ್ಯೂಟರ್ ಹೊಂದಿರುವ ಲ್ಯಾಬ್, 5 ಸಾವಿರ ಪುಸ್ತಕಗಳ ಗ್ರಂಥಾಲಯ, ಪ್ರಯೋಗಾಲಯ, 500 ಜನ ಕೂರಬಹುದಾದ ಸಭಾಂಗಣ, ವಿಶಾಲವಾದ ಆಟದ ಮೈದಾನವನ್ನು ಶಿಕ್ಷಣ ಸಂಸ್ಥೆಯು ವಿದ್ಯಾಥಿ೯ಗಳಿಗಾಗಿ ಹೊಂದಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕರಾದ ಬಿ.ಎ.ನಾಣಿಯಪ್ಪ, ಸಿ.ಪಿ. ಮುದ್ದಪ್ಪ, ಉಪನ್ಯಾಸಕ ಮೋಹನ್ ಹೆಗ್ಗಡೆ ಹಾಜರಿದ್ದರು.