ಸಾರಾಂಶ
ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮುಖಂಡ ಆಲೂರು ಮಲ್ಲು ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜು.೨೧ರಂದು ನಡೆಯುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಮಹಾಸಭಾದ ಹಿತದೃಷ್ಟಿಯಿಂದ ಚುನಾವಣಾ ಕಣದಿಂದ ನಿವೃತ್ತಿ ಘೋಷಣೆ ಮಾಡಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮೂಡ್ಲುಪುರ ನಂದೀಶ್‌ಗೆ ಬೆಂಬಲ ಸೂಚಿಸಿರುವುದಾಗಿ ಮುಖಂಡ ಆಲೂರು ಮಲ್ಲು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ವೀರಶೈವ ಮಹಾಸಭಾದ ಚುನಾವಣೆಯಲ್ಲಿ ಸಕ್ರೀಯವಾಗಿ ಭಾಗವಹಿಸಲಿದ್ದು, ನನ್ನ ಬೆಂಬಲಿಗರು, ಹಿತೈಷಿಗಳಿಗೆ ಮೂಡ್ಲುಪುರ ನಂದೀಶ್‌ಗೆ ಬೆಂಬಲ ನೀಡುವಂತೆ ಮನವಿ ಮಾಡಲಾಗುವುದು ಎಂದರು. ಹಾಲಿ ಅಧ್ಯಕ್ಷರಾಗಿರುವ ಮೂಡ್ಲುಪುರ ನಂದೀಶ್ ಉತ್ತಮ ಕಾರ್ಯ ಮಾಡಿದ್ದಾರೆ. ಬಸವ ಭವನ, ಬಸವಣ್ಣನ ಪುತ್ಥಳಿ ನಿರ್ಮಾಣ ಮಾಡಲು ಈ ಬಾರಿಯು ಅವಕಾಶ ಮಾಡಿಕೊಡುವಂತೆ ನಂದೀಶ್ ಮನವಿ ಮಾಡಿದ ಹಿನ್ನಲೆಯಲ್ಲಿ ನಾನು ಹಿಂದೆ ಸರಿದು ನಂದೀಶ್‌ಗೆ ಬೆಂಬಲ ನೀಡುತ್ತೇನೆ ಎಂದರು.ಮೂಡ್ಲುಪುರ ನಂದೀಶ್ ಮಾತನಾಡಿ, ನನ್ನ ಅವಧಿಯಲ್ಲಿ ಜನಾಂಗದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದೇನೆ. ಕೊರೋನಾ ಸಂದರ್ಭದಲ್ಲಿ ಮಹಾಸಭಾದ ತಂಡದಿಂದ ೪೦೦-೫೦೦ ಶವಗಳನ್ನು ಜೀವದ ಹಂಗು ತೊರೆದು ಅಂತ್ಯಸಂಸ್ಕಾರ ಮಾಡಿದ್ದೇನೆ. ಸಮುದಾಯದ ಕೆಲಸಗಳಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಕಳೆದ ಬಾರಿ ಅತ್ಯಧಿಕ ಮತದಿಂದ ಗೆಲ್ಲಿಸಿದ್ದೀರಿ. ಈ ಬಾರಿಯೂ ನನ್ನನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಸವ ಕೇಂದ್ರದ ಗೌರವ ಅಧ್ಯಕ್ಷರಾದ ಕೊಡಸೋಗೆ ಶಿವಬಸಪ್ಪ, ಹನೂರು ರಾಜಶೇಖರ ಮೂರ್ತಿ, ಗೌಡಿಕೆ ರೇವಣ್ಣ, ಗುರುಮಲ್ಲಪ್ಪ, ಭೃಂಗೀಶ್‌ಕಟ್ಟೆ ಇದ್ದರು.