ಹಾಲು ಒಕ್ಕೂಟದ ಶ್ರೇಯೋಭಿವೃದ್ದಿಗೆ ಸದಾ ಬದ್ಧ: ರನ್ನಕುಮಾರ್

| Published : Sep 23 2024, 01:25 AM IST

ಹಾಲು ಒಕ್ಕೂಟದ ಶ್ರೇಯೋಭಿವೃದ್ದಿಗೆ ಸದಾ ಬದ್ಧ: ರನ್ನಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಬೀರೂರು, ಕಳೆದ 10ವರ್ಷಗಳ ಹಿಂದೆ ಆರಂಭವಾದ ಈ ಹಾಲು ಉತ್ಪಾದಕರ ಮಹಿಳಾ ಸಂಘ ಹುಲ್ಲೇಹಳ್ಳಿಯಲ್ಲಿಂದು 4. 35 ಲಕ್ಷ ಲಾಭಾಂಶದತ್ತ ಮುನ್ನುಗ್ಗಿ ಪ್ರಗತಿ ಸಾಧಿಸಿರುವುದು ಹೆಮ್ಮೆಯ ಸಂಗತಿ ಎಂದು ಹಾಸನ ಹಾಲು ಒಕ್ಕೂಟ ನಿಯಮಿತದ ಪ್ರಧಾನ ವ್ಯವಸ್ಥಾಪಕ ರನ್ನಕುಮಾರ್ ಹೇಳಿದರು.

- ಹುಲ್ಲೇಹಳ್ಳಿ ಗ್ರಾಮದಲ್ಲಿ ನಡೆದ ಮಹಿಳಾ ಸರ್ವ ಸದಸ್ಯರ ವಾರ್ಷಿಕ ಸಭೆ 4.35 ಲಕ್ಷ ಲಾಭ

ಕನ್ನಡಪ್ರಭ ವಾರ್ತೆ, ಬೀರೂರು

ಕಳೆದ 10ವರ್ಷಗಳ ಹಿಂದೆ ಆರಂಭವಾದ ಈ ಹಾಲು ಉತ್ಪಾದಕರ ಮಹಿಳಾ ಸಂಘ ಹುಲ್ಲೇಹಳ್ಳಿಯಲ್ಲಿಂದು 4. 35 ಲಕ್ಷ ಲಾಭಾಂಶದತ್ತ ಮುನ್ನುಗ್ಗಿ ಪ್ರಗತಿ ಸಾಧಿಸಿರುವುದು ಹೆಮ್ಮೆಯ ಸಂಗತಿ ಎಂದು ಹಾಸನ ಹಾಲು ಒಕ್ಕೂಟ ನಿಯಮಿತದ ಪ್ರಧಾನ ವ್ಯವಸ್ಥಾಪಕ ರನ್ನಕುಮಾರ್ ಹೇಳಿದರು.ಹುಲ್ಲೇಹಳ್ಳಿ ಗ್ರಾಮದಲ್ಲಿ ನಡೆದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ರೈತರು ಹೈನುಗಾರಿಕೆಯಿಂದ ತಮ್ಮ ಜೀವನ ಕಟ್ಟಿಕೊಂಡಿದ್ದು ಸರ್ಕಾರ ಉತ್ತೇಜನ ಮತ್ತು ಸಹಕಾರ ನೀಡುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ರೂಪಿಸಿದೆ. ಅವುಗಳ ಪ್ರಯೋಜನ ಪಡೆಯುವಲ್ಲಿ ಯಶಸ್ವಿಯಾಗುವಿರಿ ಎನ್ನುವ ನಂಬಿಕೆ ಇದೆ. ಸರ್ಕಾರ ನಿಮ್ಮ ನೆರವಿಗೆ ಸದಾ ಬದ್ಧವಾಗಿದ್ದು, ಹಾಸನ ಹಾಲು ಒಕ್ಕೂಟ ನಿಮಗೆ ಬೆಂಬಲವಾಗಿದ್ದು ಏನೇ ಸಂಶಯವಿದ್ದರು ಈ ಸಭೆಯಲ್ಲಿ ಬಗಹೆಹರಿಸಲು ಖುದ್ದು ನಾನೇ ಬಂದಿದ್ದೇನೆ ಎಂದು ತಿಳಿಸಿದರು.

ಈ ಹಂತದಲ್ಲಿ ಮಾತನಾಡಿದ ಕೆಲ ಯುವಕರು ನಮಗೆ ಸಭೆ ಬಗ್ಗೆ ಮಾಹಿತಿ ಇಲ್ಲ. ಇಷ್ಟು ವರ್ಷದ ಲೆಕ್ಕ ಪತ್ರ ಮಂಡನೆಯಾಗಿಲ್ಲ. ಎಂದಾಗ ಕಳೆದ 9ವರ್ಷಗಳ ಲೆಕ್ಕ ಪತ್ರ ಮಂಡನೆ ಯಾಗಿದೆ. ಈ ವರ್ಷ ಆಡಿಟ್ ಬರುವುದಿಲ್ಲ, ಎಲ್ಲವೂ ಸಂಪೂರ್ಣ ಪಾರದರ್ಶಕವಾಗಿದೆ. ನಿಮ್ಮ ವೈಯುಕ್ತಿಕ ವಿಚಾರಗಳ ನಡುವೆ ನಾವು ಹಾಲು ಉತ್ಪಾದಕರ ರೈತರ ಡೈರಿ ಮುಚ್ಚಲು ಸಾಧ್ಯವಿಲ್ಲ. ಮೊದಲು ಈ ಸಭೆಯಲ್ಲಿ ರೈತ ಮಹಿಳೆಯರು ಮಾತ್ರ ಪಾಲ್ಗೊಳ್ಳ ಬೇಕು. ನೀವು ಸಂಘದ ವಿಚಾರ ತಿಳಿದು ಕೊಳ್ಳಲಿ ಎನ್ನುವ ನಿಟ್ಟಿನಲ್ಲಿ ಸದಸ್ಯರನ್ನು ಹೊರತುಪಡಿಸಿ ನಿಮಗೂ ಸಹ ಡೈರಿ ನಿರ್ವಹಣೆ ಬಗ್ಗೆ ಮಾಹಿತಿ ನೀಡುತ್ತಿದ್ದೇನೆ ಎಂದರು.ಸಂಘದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಆಡಿಟ್ ಆದ ನಂತರ ಇದು ಯಾವುದು ಸಹ ನಡೆಯುವುದಿಲ್ಲ. ನಿಮಗೆ ನಿಮ್ಮ ಡೈರಿ ಉನ್ನತಿ ಬಗ್ಗೆ ಅರಿವಿದ್ದರೆ ಇನ್ನು ಕೆಲವು ದಿನಗಳಲ್ಲಿ ಬರುವ ಚುನಾವಣೆಯಲ್ಲಿ ಷೇರುದಾರರನ್ನು ಒಗ್ಗೂಡಿಸಿ ನಿಮ್ಮ ನಿರ್ದೇಶಕರು, ಅಧ್ಯಕ್ಷರ ನೀವೆ ಆಯ್ಕೆ ಮಾಡಿ ಹಾಲು ಉತ್ಪಾದಕರ ಸಂಘದ ಶ್ರೇಯೋಭಿವೃದ್ಧಿ ಹಾಗೂ ಸ್ವಂತ ಕಟ್ಟಡ ಸ್ಥಾಪನೆಗೆ ಶ್ರಮಿಸಿದರೆ ನಾವು ಸಹ ನಮ್ಮ ಮಂಡಳಿ ಯಿಂದ ಸಹಾಯಧನ ನೀಡುವ ಭರವಸೆ ನೀಡಿದರು.ಸರಿಯಾದ ಸಮಯಕ್ಕೆ ಹಾಲು ಒಕ್ಕೂಟದಿಂದ ಹಣ ಜಮೆಯಾಗುತ್ತಿಲ್ಲ. ಉತ್ತಮ ಹಾಲು ನೀಡುವುದು ಹೇಗೆ?. ನಮ್ಮ ಹಸು ಗಳಿಗೆ ಉತ್ತಮ ಆಹಾರ ಸಿಗುತ್ತಿಲ್ಲ ಎಂಬ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಅವರು, ಹಾಸನ ಹಾಲು ಒಕ್ಕೂಟಕ್ಕೆ 3 ಜಿಲ್ಲೆಗಳಿಂದ ಪ್ರತಿ ದಿನ 12.5ಲಕ್ಷ ಲೀ. ಸಂಗ್ರಹ ವಾಗುತ್ತದೆ. ಇದರಲ್ಲಿ ಕೇವಲ 2 ಲಕ್ಷ ಲೀ. ಮಾತ್ರ ಮಾರಾಟವಾಗಿ ಉಳಿದಂತೆ 10ಲಕ್ಷ ಲೀ.ನ್ನು ಹಾಲಿನ ಪುಡಿ ಸೇರಿದಂತೆ ಮತ್ತಿತರ ಉತ್ಪಾದನೆಗೆ ಕಳುಹಿಸುವುದರಿಂದ ಹಣ ಜಮೆಯಾಗುವುದು ತಡವಾಗುತ್ತದೆ. ಇದಕ್ಕೆ ರೈತರು ಸಹಕರಿಸಬೇಕು ಎಂದರು.ರೈತರು ಉತ್ತಮ ಡಿಗ್ರಿ ಬರುವ ಹಾಲನ್ನೆ ಮಂಡಳಿಗೆ ಹಾಕಿದರೇ ಒಳಿತು. ನಿಮ್ಮ ಸಂಘವನ್ನು ನೀವು ಪ್ರೋತ್ಸಾಹಿಸಿದರೆ ನಿಮಗೆ ಮುಂದಿನ ದಿನ ಗಳಲ್ಲಿ ಲಾಭ ಬರುತ್ತದೆ. ಸರ್ಕಾರ ಎಲ್ಲಾ ವ್ಯವಹಾರವನ್ನು ಆನ್ ಲೈನ್ ಮಾಡಿರುವುದರಿಂದ ನೀವು ಸಹ ಅದಕ್ಕೆ ಹೊಂದಿಹೊಳ್ಳಬೇಕು. ಜೊತೆಗೆ ನಿಮ್ಮ ಊರಿನಲ್ಲಿ ನೆಟ್ ವರ್ಕ ಸಮಸ್ಯೆ ಇರುವುದರಿಂದ ತಾಳ್ಮೆಯಿಂದ ಸಹಕರಿಸಿದರೆ ಒಳಿತು ಎಂದರು.ಸಹಾಯಕ ವ್ಯವಸ್ಥಾಪಕಿ ಅಕ್ಕನಾಗಮ್ಮ, ಗ್ರಾಪಂ ಉಪಾಧ್ಯಕ್ಷ ಹುಲ್ಲೆಹಳ್ಳಿ ಲಕ್ಷ್ಮಣ್, ನಾಗರಾಜ್, ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ .ಅನಿತಾ.ಪಿ, ಕಾರ್ಯದರ್ಶಿ ಶಾಂತಮ್ಮ, ಪಾರ್ವತಮ್ಮ, ಶಾರದಮ್ಮ, ನೇತ್ರಾವತಿ, ಲಕ್ಷ್ಮಮ್ಮನರಸಿಂಹಪ್ಪ, ಚಂದ್ರಮ್ಮ, ಲಕ್ಷ್ಮಮ್ಮ ಸೇರಿದಂತೆ ಗ್ರಾಮಸ್ಥರು ಇದ್ದರು.22 ಬೀರೂರು 1 ಹುಲ್ಲೆಹಳ್ಳಿ ಗ್ರಾಮದ ನಡೆದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ಹಾಸನ ಹಾಲು ಒಕ್ಕೂಟದ ಪ್ರಧಾನ ವ್ಯವಸ್ಥಾಪಕ ರನ್ನಕುಮಾರ್ ಉದ್ಘಾಟಿಸಿದರು. ಸಹಾಯಕ ವ್ಯವಸ್ಥಾಪಕಿ ಅಕ್ಕನಾಗಮ್ಮ, ಗ್ರಾಪಂ ಉಪಾಧ್ಯಕ್ಷ ಹುಲ್ಲೆಹಳ್ಳಿ ಲಕ್ಷ್ಮಣ್, ನಾಗರಾಜ್, ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಅನಿತಾ.ಪಿ, ಕಾರ್ಯದರ್ಶಿ ಶಾಂತಮ್ಮ ಇದ್ದರು.