ಸಾರ್ವಜನಿಕ ಸೇವೆಗೆ ಸದಾ ಸಿದ್ಧ: ಶಾಸಕ ರಾಜಾ ವೇಣುಗೋಪಾಲ

| Published : Dec 04 2024, 12:32 AM IST

ಸಾರ್ವಜನಿಕ ಸೇವೆಗೆ ಸದಾ ಸಿದ್ಧ: ಶಾಸಕ ರಾಜಾ ವೇಣುಗೋಪಾಲ
Share this Article
  • FB
  • TW
  • Linkdin
  • Email

ಸಾರಾಂಶ

Always ready for public service: MLA Raja Venugopal

-ವಾಲ್ಮೀಕಿ ಭವನ ಕಟ್ಟಡ ಲೋಕಾರ್ಪಣೆ, ಸಿಸಿ ರಸ್ತೆ ಕಾಮಗಾರಿಗೆ ಶಾಸಕ ವೇಣುಗೋಪಾಲ ಭೂಮಿ ಪೂಜೆ

---

ಕನ್ನಡಪ್ರಭ ವಾರ್ತೆ ಹುಣಸಗಿ

ರಾಜಾ ವೇಣುಗೋಪಾಲ ನಾಯಕ ಅವರು ಶಾಸಕರಾಗಿ ಆಯ್ಕೆಯಾದ ಹಿನ್ನೆಲೆ ಕಾರ್ಯಕರ್ತರ ಹಾಗೂ ಗ್ರಾಮಸ್ಥರ ಹರಕೆಯಂತೆ, ತಾಲೂಕಿನ ದೇವರಗಡ್ಡಿ ಗ್ರಾಮದ ಆರಾಧ್ಯದೈವ ಗಡ್ಡಿ ಗದ್ದೆಮ್ಮ ದೇವಿಯ ಸನ್ನಿಧಾನದಲ್ಲಿ ಗದ್ದೆಮ್ಮ ದೇವಿಗೆ ಉಡಿ ತುಂಬುವ ಕಾರ್ಯಕ್ರಮ, ಶಾಸಕರ ತುಲಾಭಾರ ನೆರವೇರಿಸಿ ನಾಣ್ಯ, ದವಸಧಾನ್ಯಗಳ ದೇವಿಗೆ ಸಮರ್ಪಿಸಿದರು.

ನಂತರ ಜಂಗಿನಗಡ್ಡಿ ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳಿಂದ ಶಾಸಕರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಿ ಅಭಿನಂದನೆ ಸಲ್ಲಿಸಿದರು.

ಶಾಸಕ ರಾಜಾ ವೇಣುಗೋಪಾಲ ನಾಯಕ ಅವರು, ಗ್ರಾಮದಲ್ಲಿ ವಾಲ್ಮೀಕಿ ಭವನದ ಕಟ್ಟಡ ಲೋಕಾರ್ಪಣೆ ಹಾಗೂ ಸಿಸಿ ರಸ್ತೆಯ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಗಡ್ಡಿ ಗದ್ದೇಮ್ಮ ದೇವಿಯ ಆಶೀರ್ವಾದ ಸದಾ ನಮ್ಮ ಮೇಲೆ ಹೀಗೆ ಇರಲಿ. ಗ್ರಾಮದವರು ನನ್ನ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ನಾನು ಯಾವತ್ತು ನಿಮ್ಮ ಮನೆಯ ಮಗನಾಗಿ ನಿಮ್ಮ ಹಾಗೂ ಜನರ ಸೇವೆಗೆ ಸದಾ ಸಿದ್ಧನಾಗಿರುತ್ತೇನೆ ಎಂದರು.

ರಾಜಾ ಸಂತೋಷ್ ನಾಯಕ, ರಾಜಾ ಕುಮಾರ ನಾಯಕ, ರಾಜಾ ವಿಜಯಕುಮಾರ ನಾಯಕ, ರಾಜಾ ಸುಶಾಂತ ನಾಯಕ, ವೆಂಕೋಬ ಸಾಹುಕಾರ, ಮಲ್ಲಣ್ಣ ಸಾಹುಕಾರ, ರಾಜಶೇಖರ ಪಾಟೀಲ್, ನಿಂಗರಾಜ ಬಾಚಿಮಟ್ಟಿ, ರವಿ ಸಾಹುಕಾರ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ದೇವರಗಡ್ಡಿ ಗ್ರಾಮದ ಹಿರಿಯ ಮುಖಂಡರು ಇತರರಿದ್ದರು.

-

3ವೈಡಿಆರ್16: ಹುಣಸಗಿ ತಾಲೂಕಿನ ದೇವರಗಡ್ಡಿ ಆರಾಧ್ಯದೈವ ಗಡ್ಡಿ ಗದ್ದೇಮ್ಮ ದೇವಿ ಸನ್ನಿಧಾನದಲ್ಲಿ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರ ತುಲಾಭಾರ ನೆರವೇರಿಸಿ ನಾಣ್ಯ, ದವಸ-ಧಾನ್ಯ ದೇವಿಗೆ ಸಮರ್ಪಿಸಲಾಯಿತು.

---000---