ಅಮರಗಿರಿ ರಂಗನಾಥ ಸ್ವಾಮಿ ಬ್ರಹ್ಮ ರಥೋತ್ಸವ ಸಂಪನ್ನ

| Published : Apr 09 2025, 12:33 AM IST

ಸಾರಾಂಶ

ಶ್ರೀ ರಾಮನವಮಿಯಂದು ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಅಮರಗಿರಿ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ ಅಂಗವಾಗಿ ಬೆಳಗ್ಗೆಯಿಂದಲೇ ಗುಡ್ಡದ ರಂಗನಾಥ ಸ್ವಾಮಿ ದೇವಾಲಯ ಹಾಗೂ ಚಿಕ್ಕೋನಹಳ್ಳಿ ಗ್ರಾಮದ ಅಮರಗಿರಿ ರಂಗನಾಥ ಸ್ವಾಮಿ ದೇವಾಲಯದಲ್ಲಿ ಅಭಿಷೇಕ ವಿಶೇಷ ಪೂಜೆ ಹೂವಿನ ಅಲಂಕಾರ ಸೇರಿದಂತೆ ಗ್ರಾಮದ ರಾಜ ಬೀದಿಗಳಲ್ಲಿ ದೇವರ ಉತ್ಸವ ನಡೆಯಿತು. ಸುತ್ತಮುತ್ತಲ ಗ್ರಾಮಗಳಾದ ದೇವಲಾಪುರ ಹುಲ್ಲೇನಹಳ್ಳಿ, ನರೇನಹಳ್ಳಿ, ಚಿಕ್ಕೇನಹಳ್ಳಿ, ರಾಂಪುರ ಮತ್ತು ಚಿಕ್ಕೋನಹಳ್ಳಿ ಗೇಟ್ ಸೇರಿದಂತೆ ಸುತ್ತಮುತ್ತಲ ಅನೇಕ ಗ್ರಾಮಗಳಿಂದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಕನ್ನಡಪ್ರಭವಾರ್ತೆ ಬಾಗೂರು

ಹೋಬಳಿಯ ಚಿಕ್ಕೋನಹಳ್ಳಿ ಗ್ರಾಮದ ಶ್ರೀ ಅಮರಗಿರಿ ರಂಗನಾಥ ಸ್ವಾಮಿಯವರ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಭಾನುವಾರ ನೆರವೇರಿತು.

ಶ್ರೀ ರಾಮನವಮಿಯಂದು ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಅಮರಗಿರಿ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ ಅಂಗವಾಗಿ ಬೆಳಗ್ಗೆಯಿಂದಲೇ ಗುಡ್ಡದ ರಂಗನಾಥ ಸ್ವಾಮಿ ದೇವಾಲಯ ಹಾಗೂ ಚಿಕ್ಕೋನಹಳ್ಳಿ ಗ್ರಾಮದ ಅಮರಗಿರಿ ರಂಗನಾಥ ಸ್ವಾಮಿ ದೇವಾಲಯದಲ್ಲಿ ಅಭಿಷೇಕ ವಿಶೇಷ ಪೂಜೆ ಹೂವಿನ ಅಲಂಕಾರ ಸೇರಿದಂತೆ ಗ್ರಾಮದ ರಾಜ ಬೀದಿಗಳಲ್ಲಿ ದೇವರ ಉತ್ಸವ ನಡೆಯಿತು. ಸುತ್ತಮುತ್ತಲ ಗ್ರಾಮಗಳಾದ ದೇವಲಾಪುರ ಹುಲ್ಲೇನಹಳ್ಳಿ, ನರೇನಹಳ್ಳಿ, ಚಿಕ್ಕೇನಹಳ್ಳಿ, ರಾಂಪುರ ಮತ್ತು ಚಿಕ್ಕೋನಹಳ್ಳಿ ಗೇಟ್ ಸೇರಿದಂತೆ ಸುತ್ತಮುತ್ತಲ ಅನೇಕ ಗ್ರಾಮಗಳಿಂದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಶ್ರೀರಂಗನಾಥ ಸ್ವಾಮಿಯವರ ಉತ್ಸವದೊಂದಿಗೆ ರಥದ ಸುತ್ತ ಪ್ರದಕ್ಷಣೆ ನಡೆಸಿ ನಂತರ ದೇವರನ್ನು ರಥದಲ್ಲಿ ಪ್ರತಿಷ್ಠಾಪಿಸಿ ವಿವಿಧ ಪೂಜೆಗಳು ನೆರವೇರಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ಹಣ್ಣುದವನ ಅರ್ಪಿಸುವ ಮೂಲಕ ಭಕ್ತಿ ಸಮರ್ಪಿಸಿದರು.ರಥೋತ್ಸವದ ಪ್ರಯುಕ್ತ ಅಖಿಲ ಭಾರತ ವೀರಶೈವ ಲಿಂಗಾಯತ ಜಿಲ್ಲಾ ಮಹಾಸಭಾ ಅಧ್ಯಕ್ಷ ನವಿಲೆ ಪರಮೇಶ್ ಭಕ್ತರಿಗೆ ಅನ್ನದಾಸೋಹ ಏರ್ಪಡಿಸಿದ್ದರು.

ರಥೋತ್ಸವದಲ್ಲಿ ನುಗ್ಗೇಹಳ್ಳಿ ಪುರವರ್ಗ ಹಿರೇಮಠದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಕತ್ರಿಘಟ್ಟ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದ ಚಂದ್ರಶೇಖರ ಗುರೂಜಿ, ಶಾಸಕ ಬಾಲಕೃಷ್ಣ ರವರು ಹಾಗೂ ವಿಧಾನಪರಿಷತ್ ಮಾಜಿ ಎಂಎಲ್‌ಸಿ ಗೋಪಾಲಸ್ವಾಮಿ ದಂಪತಿ ಮತ್ತು ತಾಲೂಕು ದಂಡಾಧಿಕಾರಿ ನವೀನ್ ಕುಮಾರ್, ಮುಜರಾಯಿ ತಹಸೀಲ್ದಾರ್ ಲತಾ ಪಾಲ್ಗೊಂಡು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ರಥೋತ್ಸವದಲ್ಲಿ ತಾಲೂಕು ಅರ್ಚಕರ ಸಂಘದ ಅಧ್ಯಕ್ಷ ಶ್ರೀಧರ್ ಮೂರ್ತಿ, ದೇವಾಲಯ ಕಾರ್ಯಕಾರಿ ಸಮಿತಿ ಅಧ್ಯಕ್ಷೆ ಶ್ರೀಮತಿ ರೂಪ ಸುರೇಶ್, ನಿರ್ದೇಶಕರುಗಳಾದ ಸಿಎಂ ರವೀಶ್, ವೆಂಕಟೇಶ್, ಸುಕನ್ಯ ಸ್ವಾಮಿ ವಿವೇಕಾನಂದ, ಸೋಮಶೇಖರ್, ಜಯಣ್ಣ, ಶಿವೇಗೌಡ, ಪ್ರಧಾನ ಅರ್ಚಕ ಶ್ರೀಕಾಂತ್, ಆಗಮಿಕರಾದ ಕಾರೇಹಳ್ಳಿ ಕಿರಣ್ ಕುಮಾರ್, ಅರ್ಚಕರಾದ ಪಾರ್ಥಸಾರಥಿ, ಸಂಪತ್ ಕುಮಾರ್, ಸನ್ನತ್ ಕುಮಾರ್, ರಂಗನಾಥ್, ವಿಜಯಕುಮಾರ್, ಯೋಗಾನಂದ್, ಸೇರಿದಂತೆ ಚಿಕ್ಕೋನಹಳ್ಳಿ ಗ್ರಾಮಸ್ಥರು ಪಾಲ್ಗೊಂಡಿದ್ದರು.