ಅಂಬೇಡ್ಕರ್‌, ಸರ್ದಾರ್‌ರನ್ನು ಗೌರವಿಸಬೇಕು: ಶಾಸಕ ಕೆ.ಎಂ.ಶಿವಲಿಂಗೇಗೌಡ

| Published : Jan 27 2024, 01:17 AM IST

ಅಂಬೇಡ್ಕರ್‌, ಸರ್ದಾರ್‌ರನ್ನು ಗೌರವಿಸಬೇಕು: ಶಾಸಕ ಕೆ.ಎಂ.ಶಿವಲಿಂಗೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಎಲ್ಲ ಧರ್ಮ, ಎಲ್ಲ ಜಾತಿ-ಜನಾಂಗಳಿಗೆ, ಇಡೀ ವಿಶ್ವವೇ ಒಪ್ಪುವ ಸಂವಿಧಾನವನ್ನು ರಚನೆ ಮಾಡಿದ ಡಾ.ಅಂಬೇಡ್ಕರ್ ಅವರನ್ನು ಸ್ಮರಿಸಿಕೊಳ್ಳುತ್ತ ಹರಿದು-ಹಂಚಿ ಹೊಗಿದ್ದ ಭಾರತ ದೇಶವನ್ನು ಮತ್ತೆ ಒಗ್ಗೂಡಿಸಲು ಹೋರಾಟ ಮಾಡಿದ ಸರ್ಧಾರ್ ವಲ್ಲಾಬಾಯಿ ಪಟೇಲ್ ಅವರನ್ನು ನೆನಪಿಸಿಕೊಳ್ಳೋಣ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ತಿಳಿಸಿದು. ಅರಸೀಕೆರೆಯ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

75ನೇ ಗಣರಾಜ್ಯೋತ್ಸವ ಸಮಾರಂಭ । ಸಂವಿಧಾನ ಉಳಿಸುವ ಕೆಲಸವಾಗಬೇಕುಕನ್ನಡಪ್ರಭ ವಾರ್ತೆ ಅರಸೀಕೆರೆ

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಎಲ್ಲ ಧರ್ಮ, ಎಲ್ಲ ಜಾತಿ-ಜನಾಂಗಳಿಗೆ, ಇಡೀ ವಿಶ್ವವೇ ಒಪ್ಪುವ ಸಂವಿಧಾನವನ್ನು ರಚನೆ ಮಾಡಿದ ಡಾ.ಅಂಬೇಡ್ಕರ್ ಅವರನ್ನು ಸ್ಮರಿಸಿಕೊಳ್ಳುತ್ತ ಹರಿದು-ಹಂಚಿ ಹೊಗಿದ್ದ ಭಾರತ ದೇಶವನ್ನು ಮತ್ತೆ ಒಗ್ಗೂಡಿಸಲು ಹೋರಾಟ ಮಾಡಿದ ಸರ್ಧಾರ್ ವಲ್ಲಾಬಾಯಿ ಪಟೇಲ್ ಅವರನ್ನು ನೆನಪಿಸಿಕೊಳ್ಳೋಣ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ತಿಳಿಸಿದು.

ನಗರದ ಜೇನುಕಲ್ ಕ್ರೀಡಾಂಗಣದಲ್ಲಿ ತಾ.ಆಡಳಿತ ಏರ್ಪಡಿಸಲಾಗಿದ್ದ 75 ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜ.26 ಸಂವಿದಾನ ಸಮರ್ಪಣಾ ದಿನ ಆಗಿದ್ದು ಈ ಸಂವಿದಾನದಲ್ಲಿ ದೇಶವನ್ನು ಆಳುವ ನಾಯಕನನ್ನು ಪ್ರಜೆಗಳೇ ಆಯ್ಕೆ ಮಾಡುತ್ತಾರೆ. ಪ್ರಜೆಗಳೇ ಸಾರ್ವಭೌಮರಾಗಿದ್ದಾರೆ. ನಾವೆಲ್ಲರೂ ಒಂದು ಎಂಬ ಭಾವನೆ ಸಂವಿದಾನದ ನೀತಿಯಾಗಿದೆ ಇಂತಹ ಸಂವಿಧಾನವನ್ನು ಉಳಿಸುವ ಕರ್ತವ್ಯ ನಮ್ಮದಾಗಿದೆ ಎಂದರು.

ದೇಶಕ್ಕಾಗಿ ನಿಸ್ವಾರ್ಥದಿಂದ ಶ್ರಮಿಸಿದ ಗಾಂಧೀಜಿ, ಅಂಬೇಡ್ಕರ್ ರಂತಹ ಮಹಾಪುರುಷರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ. ರೈತ ದೇಶದ ಬೆನ್ನಲುಬು ಆಗಿದ್ದು ರೈತ ಸಮುದಾಯದ ಸರ್ವತೋಮುಖ ಬೆಳವಣಿಗೆಗೆ ಆಡಳಿತ ವರ್ಗ ಶ್ರಮಿಸಬೇಕು ಎಂದರು.

ಬ್ರಿಟಿಷರ ದಬ್ಬಾಳಿಕೆಗೆ ಒಳಪಟ್ಟು ಅಶಾಂತಿಯ ಗೂಡಾಗಿದ್ದ ಭಾರತ ದೇಶವನ್ನು ಭಾಷಾವಾರು ಪ್ರಾಂತ್ಯಗಳನ್ನಾಗಿ ವಿಗಂಡಿಸಿ ಒಗ್ಗಟ್ಟಿನ ಭಾರತವನ್ನು ನಿರ್ಮಾಣ ಮಾಡಲು ಹೋರಾಟ ಮಾಡಿದ ಸರ್ಧಾರ್ ವಲ್ಲಬಾಯಿ ಪಟೇಲ್‌ರವರ ಇತಿಹಾಸ ನೆನಪಿಸಿಕೊಂಡು ಈ ದಿನವನ್ನು ಅದ್ಧೂರಿಯಾಗಿ ಆಚರಣೆ ಮಾಡೋಣ ಎಂದರು.

ತಹಸೀಲ್ದಾರ್ ಸಂತೋಷಕುಮಾರ್‌ ದ್ವಜರೋಹಣ ನೆರವೇರಿಸಿ ಮಾತನಾಡಿ, ಸ್ವತಂತ್ರ ಭಾರತವು ಒಕ್ಕೂಟದ ವ್ಯವಸ್ಥೆಯಲ್ಲಿ ಸರ್ವಕಾಲಕ್ಕೂ ಅನ್ವಯವಾಗುವಂತೆ ಸಂವಿಧಾನವನ್ನು ರಚಿಸಿಕೊಂಡಿತಲ್ಲದೆ ಅದನ್ನ ಅಧಿಕೃತವಾಗಿ ಅಂಗೀಕರಿಸಿ ಜಾರಿಗೆ ಬಂದ ದಿನವನ್ನು ನಾವು ಗಣರಾಜ್ಯೋತ್ಸವ ಎಂದು ಆಚರಿಸುತ್ತ ಬಂದಿದ್ದು ದೇಶದ ಪ್ರತಿಯೊಬ್ಬ ಪ್ರಜೆಗೂ ಸಮ ಬಾಳು ಹಾಗೂ ಸಮಪಾಲು ಎಂಬ ಸಾಮಾಜಿಕ ನ್ಯಾಯ ನಮ್ಮ ಸಂವಿಧಾನ ಮೂಲ ಆಶಯವಾಗಿದೆ. ಇಂತಹ ಸಂವಿಧಾನವನ್ನು ನಮಗೆ ರಚಿಸಿಕೊಟ್ಟ ಮಹನೀಯರಿಗೆ ನಾವು ಗೌರವ ಸಲ್ಲಿಸೋಣ ಎಂದರು.

ಈ ಸಂದರ್ಭದಲ್ಲಿ ಗಣರಾಜ್ಯ ದಿನಾಚರಣೆಯ ಅಂಗವಾಗಿ ಭಾರತ ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್, ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಪೊಲೀಸ್ ಇಲಾಖೆ ಕೈಗೊಂಡಿದ್ದ ಪಥಸಂಚಲನ ಪ್ರೇಕ್ಷಕರ ಗಮನ ಸೆಳೆಯಿತು. ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರ ಮೆಚ್ಚುಗೆಗೆ ಪಡೆದವು.

ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನಾಗರಾಜು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೋಹನ್‌ ಕುಮಾರ್‌, ನಗರಸಭೆ ಪೌರಯುಕ್ತ ಕೃಷ್ಣಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪರಶಿವ ಮೂರ್ತಿ, ಕಸಾಪ ಅಧ್ಯಕ್ಷ ಚಂದ್ರಶೇಖರ್, ಡಿವೈಎಸ್‌ಪಿ, ಸಬ್‌ ಇನ್‌ಸ್ಪೆಕ್ಟರ್‌ ಚಂದ್ರಶೇಖರ್, ವೃತ್ತ ನೀರಿಕ್ಷಕ ಗಂಗಾಧರ್, ಇನ್ಸ್‌ಪೆಕ್ಟರ್ ಲತಾ, ತಾಲೂಕು ಆಡಳಿತ ಸಿಬ್ಬಂದಿ ವರ್ಗ, ವಿವಿಧ ಇಲಾಖೆ ಅಧಿಕಾರಿಗಳು ,ಶಾಲಾ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಜೇನುಕಲ್ ಕ್ರೀಡಾಂಗಣದಲ್ಲಿ ನಡೆದ 75ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಶಾಸಕ ಶಿವಲಿಂಗೇಗೌಡ ಮಾತನಾಡಿದರು.