ಸಾರಾಂಶ
ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ
ಭಾರತೀಯ ವಯಸ್ಕ ಮತದಾನದ ಹಕ್ಕನ್ನು ಕೊಡಿ ಎಂದು ಅಂಬೇಡ್ಕರ್ ಅವರು 1906ರಲ್ಲಿ ಸೈಮನ್ ಆಯೋಗಕ್ಕೆ ಮನವಿ ಸಲ್ಲಿಸಿದ್ದರು ಎಂದು ಸಂವಿಧಾನ ಸನ್ಮಾನ ಅಭಿಯಾನದ ಸಂಯೋಜಕಿ ಪ್ರಫುಲ್ಲಾ ಮಲ್ಲಾಡಿ ಹೇಳಿದರು.ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸಂವಿಧಾನ ದಿನ ಅಂಗವಾಗಿ ಸರಗೂರು ಮತ್ತು ಎಚ್.ಡಿ. ಕೋಟೆ ಬಿಜೆಪಿ ಮಂಡಲದ ವತಿಯಿಂದ ಆಯೋಜಿಸಿದ್ದ ಸಂವಿಧಾನ ಸನ್ಮಾನ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂಬೇಡ್ಕರ್ ಸಲ್ಲಿಸಿದ ಮನವಿಯನ್ನು ಅಂದು ತಿರಸ್ಕರಿಸಲಾಗಿತ್ತು, ನಂತರದ ದಿನಗಳಲ್ಲಿ ಈ ಕಾನೂನು ಜಾರಿಗೆ ಬಂತು ಎಂದು ತಿಳಿಸಿದರು. ಪ್ರಜಾಪ್ರಭುತ್ವದ ಮಹತ್ವವನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೆನಪಿಗಾಗಿ, ಸಂವಿಧಾನ ದಿನವನ್ನು 2015ರಿಂದ ನಂತರದ ದಿನಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.ಸಂವಿಧಾನ ಭಾರತ ಒಪ್ಪಿಕೊಂಡ 16 ತಿಂಗಳಲ್ಲೇ ಜವಹರಲಾಲ್ ನೆಹರು ಅವರು ತಿದ್ದುಪಡಿ ಮಾಡಲಾಯಿತು, ನಂತರದ ದಿನಗಳಲ್ಲಿ ಇಂದಿರಾ ಗಾಂಧಿಯವರು ಸಹ ತಿದ್ದುಪಡಿ ಮಾಡಿದ್ದಾರೆ, ಆದರೆ ಈಗ ಬಿಜೆಪಿ ತಿದ್ದುಪಡಿ ಮಾಡುತ್ತದೆ, ಬದಲಿಸುತ್ತದೆ ಎಂದು ಕಾಂಗ್ರೆಸ್ ದೂರುತ್ತಿದೆ ಎಂದರು.
ಮಾಜಿ ಸಚಿವ ಎನ್. ಮಹೇಶ್ ಮಾತನಾಡಿ, ಸಂವಿಧಾನವನ್ನು ತಿದ್ದುಪಡಿ ಮಾಡಿರುವುದು ಮೀಸಲಾತಿ ಉಳಿಸಲಿಕ್ಕೆ, ಮಹಿಳೆಯರಿಗೆ ಸಮಾನತೆ ಕೊಡಲಿಕ್ಕೆ, ಕೆಳ ಜಾತಿಯವರಿಗೆ ಸಮಾನತರ ನೀಡುವ ಉದ್ದೇಶದಿಂದ ಬದಲಾವಣೆ ಮಾಡಲಾಗಿದೆಯೇ ಹೊರತು, ಸ್ವ ಇಚ್ಛೆಗಾಗಿ ಬದಲಾಯಿಸಿಲ್ಲ, ಬಿಜೆಪಿ ಸರ್ಕಾರವು ಸಹ ಕೆಲವು ತಿದ್ದುಪಡಿಯನ್ನು ಮಾಡಿದ್ದು, ಇದು ಸಹ ಮೀಸಲಾತಿ ಉಳಿಸಲಿಕ್ಕೆ, ಮಹಿಳೆಯರ ಸಮಾನತೆಗಾಗಿಯೋ ಆಗಿದೆ ಎಂದರು.ಕಾಂಪೋಸ್ಟ್ ನಿಗಮದ ಮಾಜಿ ಅಧ್ಯಕ್ಷ ಮಹದೇವಯ್ಯ, ಬಿಜೆಪಿಯ ಎಚ್.ಡಿ. ಕೋಟೆ ತಾಲೂಕು ಅಧ್ಯಕ್ಷ ಶಂಭೇಗೌಡ, ಸರಗೂರು ತಾಲೂಕು ಅಧ್ಯಕ್ಷ ಗುರುಸ್ವಾಮಿ, ನಾಗರಾಜು ಮಲ್ಲಾಡಿ, ಶಿವಕುಮಾರ್, ಅನಿಲ್ ಕುಮಾರ್, ವೆಂಕಟಸ್ವಾಮಿ, ರಾಧಿಕಾ ಶ್ರೀನಾಥ್, ಪ್ರಧಾನ ಕಾರ್ಯದರ್ಶಿ ಗುರುಸ್ವಾಮಿ, ಭೀಮನಹಳ್ಳಿ ಸೋಮೆಶ್, ಸಂಚಾಲಕ ಮಹದೇವಯ್ಯ , ತಾಲೂಕು ಬಿಜೆಪಿ ಮಹಿಳಾ ಅಧ್ಯಕ್ಷ ಗಿರಿಜಾ ದೊರೆಸ್ವಾಮಿ, ರಾಜು, ಶಿವಕುಮಾರ್, ಮಾದಾಪುರ ನಂದೀಶ್, ವೆಂಕಟೇಶ್, ಎಚ್.ಸಿ. ಲಕ್ಷ್ಮಣ್, ವೆಂಕಟಸ್ವಾಮಿ, ನಂದೀಶ್, ಚಂದ್ರಮೌಳಿ, ಪ. ಜಾತಿ ಸರಗೂರು ತಾಲೂಕು ಅಧ್ಯಕ್ಷ ಸ್ವಾಮಿ, ಗಣಪತಿ, ನಟರಾಜ್, ಸಮಾಚಾರ್, ಅಲ್ಪಸಂಖ್ಯಾತರ ಅಧ್ಯಕ್ಷ ಅಕ್ರಮ್ ಪಾಷ, ರುದ್ರಪ್ಪ, ಕಾರ್ಯಕರ್ತರು ಭಾಗವಹಿಸಿದ್ದರು.