ಸಾರಾಂಶ
ಕನ್ನಡಪ್ರಭ ವಾರ್ತೆ ಬನ್ನೂರು
ಡಾ.ಬಿ.ಅಂಬೇಡ್ಕರ್ ಅವರ ಅವಿರತ ಪರಿಶ್ರಮ ಮತ್ತು ಹೋರಾಟದ ಫಲವಾಗಿ ಇಂದು ನಾವು ಮಾನವರಂತೆ ಸಾಮಾಜಿಕ, ಅರ್ಥಿಕ, ರಾಜಕೀಯ ಹಕ್ಕು ಅಧಿಕಾರ, ಅವಕಾಶವನ್ನು ಪಡೆದು ಭಯಮುಕ್ತ ವಾತವರಣದಲ್ಲಿ ಬದುಕು ನಡೆಸುತ್ತಿದ್ದೇವೆ ಎಂದು ಉರಿಲಿಂಗಿ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ ಅಭಿಪ್ರಾಯಪಟ್ಟರು.ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಪ. ಜಾತಿ ನೌಕರರ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭದಲ್ಲಿ ನಿವೃತ್ತಿ ಹೊಂದಿದ ಸಮಾಜದ ನೌಕರರನ್ನು ಮತ್ತು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ನಂತರ ಅವರು ಮಾತನಾಡಿದರು.
ನಮ್ಮ ಸಮಾಜದಲ್ಲಿ ಇಂತಹ ಗೌರವ ಸೂಚಕ ಕೆಲಸವನ್ನು ಮಾಡುವ ಮೂಲಕ ಮಕ್ಕಳ ಪ್ರತಿಭೆಗೆ ಉತ್ತೇಜನ ನೀಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.ನಳಂದ ಬೌದ್ದ ವಿಹಾರ ಬೋಧಿದತ್ತ ಬಂತೇಜಿ, ನಿವೃತ್ತ ಮುಖ್ಯ ಎಂಜಿನಿಯರ್ ಬಿ.ಜಿ. ದಯಾನಂದಾಮೂರ್ತಿ, ಐಓಬಿ ಬಿ.ಡಿ. ಶಿವಕುಮಾರ್, ಮಾಸ್ಟರ್ ರಂಗರಾಜು, ಚಿಂತರಕರು ಮತ್ತು ವಿಚಾರವಾದಿ ಡಾ. ವಿಠ್ಠಲ್ ವಗ್ಗನ್, ಮಾಜಿ ಮೇಯರ್ಪುರುಷೋತ್ತಮ್, ಕೀಲು ಮತ್ತು ಮೂಳೆ ಶಸ್ತ್ರ ಚಿಕಿತ್ಸಕ ಡಾ.ಡಿ. ಜಗನ್ನಾಥ್, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಕೈಗಾರಿಕಾ ಉತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಡಿ. ಪದ್ಮನಾಭ್, ಪ್ರಾಧ್ಯಾಪಕ ಡಾ.ಬಿ.ಕೆ. ಜ್ಞಾನಪ್ರಕಾಶ್, ಪುರಸಭಾ ಸದಸ್ಯೆ ಲೋಕಾಂಬಿಕ, ಪುರಸಭಾ ಸದಸ್ಯ ಶಿವಣ್ಣ, ಯಜಮಾನರಾದ ಬಿ.ಡಿ. ಜಯಮುತ್ತು, ರಂಗಸ್ವಾಮಿ ಗೀತಾಗಾಯನ ತಂಡದ ಡಾ. ಲೋಕೇಶ್, ಡಾ. ನಿಂಗರಾಜು ಇದ್ದರು.