ಸಾರಾಂಶ
ದಲಿತರ ಹಕ್ಕು, ಸ್ವಾಭಿಮಾನಕ್ಕೆ ದನಿಯಾದವರು, ದಲಿತರ ರಾಜ ಕಾರಣಕ್ಕೆ ಶ್ರೀನಿವಾಸ್ ಪ್ರಸಾದ್ ಅವರು ದಾರಿದೀಪ, ದಲಿತರು ಇಂದು ಒಳಗಾಗಿರುವ ರಾಜಕೀಯ ಭಿನ್ನದಾರಿಗೆ ಉತ್ತರವಾಗಿ ಶ್ರೀನಿವಾಸಸಾದ್ ರಾಜಕಾರಣವಿದೆ
- ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಮಹದೇವಯ್ಯ
ಫೋಟೋ- 11ಎಂವೈಎಸ್ 59-------ಕನ್ನಡಪ್ರಭ ವಾರ್ತೆ ಮೈಸೂರುದಲಿತ ಸಮುದಾಯದ ಹಕ್ಕು ಮತ್ತು ಸ್ವಾಭಿಮಾನಕ್ಕೆ ಧಕ್ಕೆಯಾದರೆ ಸಿಡಿದೇಳುತ್ತಿದ್ದ ಏಕೈಕ ರಾಜಕಾರಣಿ ವಿ. ಶ್ರೀನಿವಾಸ ಪ್ರಸಾದ್ ಅವರು ಎಂದು ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಮಹದೇವಯ್ಯ ಹೇಳಿದರು.ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಸ್ವಾಭಿಮಾನಿ ಚಕ್ರವರ್ತಿ ದಿವಂಗತ ವಿ. ಶ್ರೀನಿವಾಸಪ್ರಸಾದ್ ಅವರ ಪುಣ್ಯಾನುಮೋದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಬಸವಲಿಂಗಪ್ಪ ಅವರ ನಂತರ ವಿ. ಶ್ರೀನಿವಾಸ ಪ್ರಸಾದ್ ಅವರು ದಲಿತರ ಹಕ್ಕು, ಸ್ವಾಭಿಮಾನಕ್ಕೆ ದನಿಯಾದವರು, ದಲಿತರ ರಾಜ ಕಾರಣಕ್ಕೆ ಶ್ರೀನಿವಾಸ್ ಪ್ರಸಾದ್ ಅವರು ದಾರಿದೀಪ, ದಲಿತರು ಇಂದು ಒಳಗಾಗಿರುವ ರಾಜಕೀಯ ಭಿನ್ನದಾರಿಗೆ ಉತ್ತರವಾಗಿ ಶ್ರೀನಿವಾಸಸಾದ್ ರಾಜಕಾರಣವಿದೆ ಎಂದರು.ಬೋದಿರತ್ನ ಬಂತೇಜಿ ಮಾತನಾಡಿ, ವಿ. ಶ್ರೀನಿವಾಸ ಪ್ರಸಾದ್ ಅವರು ಒಬ್ಬ ವ್ಯಕ್ತಿಯಾಗಿರಲಿಲ್ಲ. ಒಂದು ಶಕ್ತಿಯಾಗಿದ್ದರು. ಕಳೆದ 50 ವರ್ಷಗಳ ಸುದೀರ್ಘ ರಾಜಕಾರಣದಲ್ಲಿ ಆರು ಬಾರಿ ಸಂಸದರಾಗಿ, ಕೇಂದ್ರ ಹಾಗೂ ರಾಜ್ಯದಲ್ಲಿ ಸಚಿವರಾಗಿ ರಾಜ್ಯಕ್ಕೆ ಹಲವಾರು ಕೊಡುಗೆಗಳನ್ನು ನೀಡಿ ಶೋಷಿತ ಹಾಗೂ ದಲಿತರ ಧ್ವನಿಯಾಗಿದ್ದರು. ಅವರ ಸ್ವಾಭಿಮಾನಕ್ಕೆ ಧಕ್ಕೆ ಅದಾಗಲೆಲ್ಲ ಪಕ್ಷ ಬಿಟ್ಟು ಬೇರೆ ಪಕ್ಷ ಅಥವಾ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತಿದ್ದರು. ಅವರ ಸುದೀರ್ಘ ರಾಜಕಾರಣದಲ್ಲಿ ಶುದ್ಧ ಹಸ್ತರಾಗಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಆಡಳಿತ ನಡೆಸಿದಂತಹ ಮಹಾನ್ ವ್ಯಕ್ತಿಯಾಗಿದ್ದರು ಎಂದು ತಿಳಿಸಿದರು.ವಕೀಲ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ಎಸ್.ಎನ್. ಸಿದ್ದಾರ್ಥ, ಡಾ. ರೇವಣ್ಣ, ತಾಪಂ ಮಾಜಿ ಸದಸ್ಯರಾದ ಎಂ. ರಮೇಶ್, ಎಂ.ಎಸ್. ಬಸವರಾಜು, ರಾಮಲಿಂಗಯ್ಯ, ಬಸವರಾಜು, ಬಸವರಾಜು, ವೀರೇಶ್, ಎಸ್ಸಿ,ಎಸ್ಟಿ ಹೋರಾಟ ಸಮಿತಿ ಸದಸ್ಯ ಮಹದೇವಸ್ವಾಮಿ, ಕು.ಶಿ. ಬೃಂಗೇಶ್, ಶಿವಕುಮಾರ್, ವಿಚಾರವಾದಿ ಕೆ.ಎನ್. ಪ್ರಭುಸ್ವಾಮಿ, ಸಿದ್ದರಾಜು, ಶಶಿಕಾಂತ್, ಪರಶಿವಮೂರ್ತಿ, ನಿಂಗರಾಜು, ಶಿವಕುಮಾರ್, ಕುಮಾರಸ್ವಾಮಿ, ಪುರಸಭಾ ಸದಸ್ಯ ಪ್ರಕಾಶ್, ತಾಪಂ ಮಾಜಿ ಉಪಾಧ್ಯಕ್ಷ ಮರಯ್ಯ ಇದ್ದರು.