ಸಾರಾಂಶ
ಗಜೇಂದ್ರಗಡ: ವಿವಿಧ ಸಂಸ್ಕೃತಿ, ಧರ್ಮದವರು ನೆಲೆಸಿರುವ ಭಾರತ ದೇಶಕ್ಕೆ ಸಮರ್ಥವಾದ ಸಂವಿಧಾನ ನೀಡಿದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ವಿಶ್ವದ ಸಾರ್ವಕಾಲಿಕ ಶ್ರೇಷ್ಠ ನಾಯಕ ಎಂದು ಅಂಬೇಡ್ಕರ ಸೇವಾ ಸಮಿತಿ ಅಧ್ಯಕ್ಷ ಬಸವರಾಜ ಬಂಕದ ಹೇಳಿದರು.
ಸ್ಥಳೀಯ ಅಂಬೇಡ್ಕರ ವೃತ್ತದಲ್ಲಿ ಅಂಬೇಡ್ಕರ ಸೇವಾ ಸಮಿತಿಯಿಂದ ಭಾನುವಾರ ನಡೆದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ೧೩೩ ಜಯಂತಿ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅಂಬೇಡ್ಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.ವಿಶ್ವದ ರಾಯಬಾರಿ ಸ್ಥಾನ ಪಡೆದಿರುವ ಭಾರತ ದೇಶದಲ್ಲಿ ಎಲ್ಲರಿಗೂ ಸಮಾನ ಅವಕಾಶ ಹಾಗೂ ಸಮಾನರು ಎನ್ನುವ ಸಂವಿಧಾನ ರೂಪಿಸಿದ ಅಂಬೇಡ್ಕರ ಕೊಡುಗೆ ಅನನ್ಯವಾದದ್ದು. ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢಗೊಳಿಸಲು ಸಂವಿಧಾನ ಸಹಕಾರಿ. ಹೀಗಾಗಿ ಸಂವಿಧಾನದ ಆಶಯದಂತೆ ಒಂದಾಗಿ ದೇಶ ಕಟ್ಟುವ ಕೆಲಸಕ್ಕೆ ನಾವೆಲ್ಲರೂ ಅಣಿಯಾಗೋಣ ಎಂದ ಅವರು, ಕಳೆದ ವರ್ಷ ವಿಧಾನಸಭಾ ಚುನಾವಣೆ ಹಾಗೂ ಈಗ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸರಳವಾಗಿ ಅಂಬೇಡ್ಕರ ಜಯಂತಿ ಆಚರಿಸಲಾಗಿದ್ದು, ಮುಂದಿನ ವರ್ಷ ಸಮಿತಿಯಿಂದ ಸಾಮೂಹಿಕ ವಿವಾಹ ಆಯೋಜಿಸಲಾಗುವುದು ಎಂದರು.
ಸಾಹಿತಿ ಎಫ್.ಎಸ್. ಕರಿದುಗರನವರ, ಉಮೇಶ ರಾಠೋಡ ಮಾತನಾಡಿ, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಂವಿಧಾನ ದೊಡ್ಡ ಶಕ್ತಿಯಾಗಿದ್ದು ಸಂವಿಧಾನ ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.ಈ ವೇಳೆ ಶಿಕ್ಷಕ ವೃತ್ತಿಯಿಂದ ನಿವೃತ್ತರಾದ ತಾರಾಸಿಂಗ್ ರಾಠೋಡ ಹಾಗೂ ಅನುಸೂಯಾ ಬಿಸನಳ್ಳಿ ಅವರನ್ನು ಸನ್ಮಾನಿಸಲಾಯಿತು.
ಮುಖಂಡರಾದ ಚಂದ್ರು ಚಳಗೇರಿ, ಶರಣಪ್ಪ ರೇವಡಿ, ಡಾ.ಅಶೋಕ ಹೊಸಮನಿ, ಸುರೇಶ ಚಲವಾದಿ, ಸುರೇಶ ಚವಡಿ, ಪೀರು ರಾಠೋಡ, ಶಿವು ಚಲವಾದಿ ಸೇರಿ ಇತರರು ಇದ್ದರು.ಬಿಜೆಪಿ ಕಾರ್ಯಾಲಯದಲ್ಲಿ ಆಚರಣೆ:
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ೧೩೩ ಜಯಂತಿ ನಿಮಿತ್ತ ಅಂಬೇಡ್ಕರ ಭಾವಚಿತ್ರಕ್ಕೆ ಮಾಚಿ ಸಚಿವ ಕಳಕಪ್ಪ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಈ ವೇಳೆ ಮುತ್ತಣ್ಣ ಕಡಗದ, ಸಿದ್ದಣ್ಣ ಬಳಿಗೇರ, ದತ್ತು ಬಾಕಳೆ, ಬಸವರಾಜ ಬಂಕದ, ಉಮೇಶ ಚನ್ನುಪಾಟೀಲ, ಉಮೇಶ ಮಲ್ಲಾಪೂರ, ಮಲ್ಲು ಕುರಿ ಇದ್ದರು.ಸಿದ್ದರಾಮೇಶ್ವರ ಕಟ್ಟಡ ನಿರ್ಮಾಣ ಹಾಗೂ ಇತರ ಕಾರ್ಮಿಕರ ಸಂಘದಲ್ಲಿ;
ಪಟ್ಟಣದ ಪುರಸಭೆ ಎದುರಿನ ಸಿದ್ದರಾಮೇಶ್ವರ ಕಟ್ಟಡ ನಿರ್ಮಾಣ ಹಾಗೂ ಇತರೆ ಕಾರ್ಮಿಕರ ಸಂಘದ ಕಾರ್ಯಾಲಯದಲ್ಲಿ ಬೋವಿ ಸಮಾಜದಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ೧೩೩ ಜಯಂತಿ ಕಾರ್ಯಕ್ರಮ ನಡೆಯಿತು.ಸಮಾಜದ ಅಧ್ಯಕ್ಷ ಮುದಿಯಪ್ಪ ಮುಧೋಳ,ಗಿಡ್ಡಪ್ಪ ಪೂಜಾರ, ಬಸವರಾಜ ಬಂಕದ, ಯಲ್ಲಪ್ಪ ಬಂಕದ, ಷಣ್ಮುಖಪ್ಪ ಚಿಲ್‌ಝರಿ, ಹನಮಂತ ಗೌಡ್ರ, ಪ್ರಕಾಶ ರಾಠೋಡ, ತಿರುಪತಿ ಕಲ್ಲೊಡ್ಡರ, ಫಕೀರಪ್ಪ ನಿಡಗುಂದಿ ಸೇರಿದಂತೆ ಇತರರು ಇದ್ದರು.ತಹಸೀಲ್ದಾರ್ ಕಚೇರಿ:
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಭಾರತರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರ ೧೩ನೇ ಜಯಂತಿ ನಿಮಿತ್ತ ಅಂಬೇಡ್ಕರ ಭಾವಚಿತ್ರಕ್ಕೆ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಬವಸರಾಜ ಬಂಕದ, ಉಮೇಶ ರಾಠೋಡ, ಎಫ್.ಎಸ್. ಕರಿದುರಗಣ್ಣವರ, ಯಲಪ್ಪ ಬಂಕದ, ಗಿರೀಶ ರಾಠೋಡ, ಅಂದಪ್ಪ ರಾಠೋಡ ಇದ್ದರು.ಪಟ್ಟಣದ ಪುರಸಭೆ, ಪೊಲೀಸ್ ಠಾಣೆ, ತಾಪಂ ಕಾರ್ಯಾಲಯ, ಎಸ್.ಎಂ. ಭೂಮರಡ್ಡಿ ಪ್ರಥಮ ದರ್ಜೆ ಕಾಲೇಜು, ಕೆ.ಎಸ್.ಎಸ್ ಕಾಲೇಜು ಸೇರಿದಂತೆ ವಿವಿಧ ಕಚೇರಿ, ಶಾಲಾ ಕಾಲೇಜುಗಳಲ್ಲಿ ಮಹಾನಾಯಕ ಅಂಬೇಡ್ಕರ ಜಯಂತಿಯನ್ನು ಅಧಿಕಾರಿಗಳು ವಿವಿಧ ದಲಿತಪರ ಸಂಘಟನೆಗಳಿಂದ ಸರಳವಾಗಿ ಆಚರಿಸಲಾಯಿತು.