ಹಾಸನ ನಗರದ ಗುಡ್ಡೇನಹಳ್ಳಿ ವಿದ್ಯಾರ್ಥಿನಿಲಯದಲ್ಲಿ ಸಮಾಜ ಕಲ್ಯಾಣ ಇಲಾಖೆ ದಲಿತ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ಡಾ. ಬಿ. ಆರ್‌ ಅಂಬೇಡ್ಕರ್ ಅವರ ೧೩೫ನೇ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ರಕ್ತದಾನ ಮಾಡುವ ಮೂಲಕ ಬಾಬಾ ಸಾಹೇಬರ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದರು. ದೇವೇಗೌಡ, ಯೋಗರಾಜ್, ಶಿವಾನಂದ ಬೀರದರ್ ಮತ್ತು ವಿದ್ಯಾರ್ಥಿಗಳಾದ ಪ್ರದೀಪ್, ಸಂಜಯ್ ಬೌದ್ಧ, ಯಶ್ವಂತ್, ಪ್ರಜ್ವಲ್, ದೊಡ್ಮನಿ ಆಕಾಶ್, ದೀಕ್ಷಿತ್ ಇನ್ನಿತರರಿದ್ದರು.

ಹಾಸನ: ನಗರದ ಗುಡ್ಡೇನಹಳ್ಳಿ ವಿದ್ಯಾರ್ಥಿನಿಲಯದಲ್ಲಿ ಸಮಾಜ ಕಲ್ಯಾಣ ಇಲಾಖೆ ದಲಿತ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ಡಾ. ಬಿ. ಆರ್‌ ಅಂಬೇಡ್ಕರ್ ಅವರ ೧೩೫ನೇ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ರಕ್ತದಾನ ಮಾಡುವ ಮೂಲಕ ಬಾಬಾ ಸಾಹೇಬರ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮಕ್ಕೆ ಮಾವಳ್ಳಿ ಶಂಕರ್ ಮತ್ತು ಡಾ. ಸುರೇಶ್ ಗೌತಮ್, ಈರೇಶ್ ಹಿರೇಹಳ್ಳಿ ಅವರು ಭಾಗವಹಿಸಿ ವಿದ್ಯಾರ್ಥಿಗಳೊಂದಿಗೆ ಬಾಬಾ ಸಾಹೇಬರ ಚಿಂತನೆ ಕುರಿತು ಸಂವಾದ ನಡೆಸಿದರು. ಇಲಾಖೆಯ ಉಪ ನಿರ್ದೇಶಕರು ದೂದ್‌ಪೀರ್, ಸಹಾಯಕ ನಿರ್ದೇಶಕ ಮನುಕುಮಾರ್‌, ನಿಲಯಪಾಲಕ ಆನಂದ್ ಪ್ರಕಾಶ್, ವಿವಿಧ ವಿದ್ಯಾರ್ಥಿನಿಲಯಗಳ ನಿಲಯಪಾಲಕ ವೆಂಕಟೇಶ್, ದೇವೇಗೌಡ, ಯೋಗರಾಜ್, ಶಿವಾನಂದ ಬೀರದರ್ ಮತ್ತು ವಿದ್ಯಾರ್ಥಿಗಳಾದ ಪ್ರದೀಪ್, ಸಂಜಯ್ ಬೌದ್ಧ, ಯಶ್ವಂತ್, ಪ್ರಜ್ವಲ್, ದೊಡ್ಮನಿ ಆಕಾಶ್, ದೀಕ್ಷಿತ್, ಹಾಗು ಇನ್ನಿತರರಿದ್ದರು