ಮುದಗಲ್‌ ವಿವಿಧೆಡೆ ಅಂಬೇಡ್ಕರ್ ಜಯಂತಿ ಸಂಭ್ರಮ

| Published : Apr 15 2024, 01:18 AM IST

ಮುದಗಲ್‌ ವಿವಿಧೆಡೆ ಅಂಬೇಡ್ಕರ್ ಜಯಂತಿ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಮುದಗಲ್ ಪುರಸಭೆ ಕಾರ್ಯಾಲಯದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಸಿಬ್ಬಂದಿ ಚನ್ನಮ್ಮ ದಳವಾಯಿ ಪೂಜೆ ಸಲ್ಲಿಸಿದರು. ಮುಖ್ಯಾಧಿಕಾರಿ ನಬಿ ಎಂ. ಕಂದಗಲ್ ಅವರು ಪುರ್ಷ್ಪಾಚಣೆ ಸಲ್ಲಿಸಿದರು.

ಮುದಗಲ್: ಐತಿಹಾಸಿಕ ಮುದಗಲ್ ಪಟ್ಟಣದ ಪುರಸಭೆ ಕಾರ್ಯಾಲಯ ಹಾಗೂ ನಾಡ ಕಾರ್ಯಾಲಯ, ಪೋಲಿಸ್ ಠಾಣೆ ಮತ್ತು ಶಾಲೆ ಕಾಲೇಜುಗಳಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 133ನೇ ಜಯಂತಿ ಆಚರಣೆ ಮಾಡಿದರು.

ಭಾನುವಾರ ಪುರಸಭೆ ಕಾರ್ಯಾಲಯದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಸಿಬ್ಬಂದಿ ಚನ್ನಮ್ಮ ದಳವಾಯಿ ಪೂಜೆ ಸಲ್ಲಿಸಿದರು. ಮುಖ್ಯಾಧಿಕಾರಿ ನಬಿ ಎಂ. ಕಂದಗಲ್ ಅವರು ಪುರ್ಷ್ಪಾಚಣೆ ಸಲ್ಲಿಸಿದರು. ನಾಡ ಕಾರ್ಯಾಲಯದಲ್ಲಿ ಕಂದಾಯ ನಿರೇಕ್ಷಕರು ಶಂಕರಪ್ಪ ಪಟ್ಟಣಶೆಟ್ಟಿ ಪೂಜೆ ಸಲ್ಲಿಸಿದರು.

ಪೋಲಿಸ್ ಠಾಣೆಯಲ್ಲಿ ಪಿಎಸ್ಐ ಸದ್ದಾಮ್ ಹುಸೇನ್ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು.

ಈ ಸಂದರ್ಭದಲ್ಲಿ ದಲಿತ ಮುಖಂಡರು ಶರಣಪ್ಪ ಕಟ್ಟಿಮನಿ, ಬಸವರಾಜ ಬಂಕದಮನಿ ವೆಂಕಟೇಶ ಹಿರೇಮನಿ, ಕೃಷ್ಣ ಛಲುವಾದಿ, ಲಖನ್''''''''ಟಿಪ್ಪುಸುಲ್ತಾನ್, ಕ್ರೈಂ ಪಿಎಸ್ಐ ಮಲ್ಲಪ್ಪ, ಪೊಲೀಸ್ ಸಿಬ್ಬಂದಿ ಅಮರೇಶ್, ನಾಡ ಕಾರ್ಯಾಲಯ ಸಿಬ್ಬಂದಿ ಮುನ್ನಿರ್ ಧಳಪತಿ, ದೀಪಾ, ಪುರಸಭೆ ಸಿಬ್ಬಂದಿ ಝಕೀಯಾ, ಮಹಾಲಿಂಗರಾಯ, ಜಿಲಾನಿ ಪಾಷ, ಬಸವರಾಜ ಕೊಟ್ಟೂರು, ಪವನ್ ಕುಮಾರ ಶಾಮೀದ್ ಇಪ್ತಾಖಾರ್, ರವಿ, ಪೌರಕಾರ್ಮಿಕರು ಸೇರಿದಂತೆ ಮುಂತಾದವರು ಇದ್ದರು.