ಸಿಡಿಲಿಗೆ ಆಕಳು ಸಾವು, ಬಿರುಗಾಳಿಗೆ ಬಾಳೆ ನಾಶ

| Published : Apr 15 2024, 01:18 AM IST

ಸಿಡಿಲಿಗೆ ಆಕಳು ಸಾವು, ಬಿರುಗಾಳಿಗೆ ಬಾಳೆ ನಾಶ
Share this Article
  • FB
  • TW
  • Linkdin
  • Email

ಸಾರಾಂಶ

ಗುಳೇದಗುಡ್ಡ: ಸಮೀಪದ ಹಂಸನೂರ ಗ್ರಾಮದಲ್ಲಿ ಶುಕ್ರವಾರ ಗುಡುಗು ಸಿಡಿಲು ಸಮೇತ ಸುರಿದ ಮಳೆಯಿಂದಾಗಿ ಮನೆಯ ಪಕ್ಕದಲ್ಲಿ ಕಟ್ಟಿದ್ದ ಆಕಳು ಸಿಡಿಲು ಬಡಿದು ಮೃತಪಟ್ಟಿದೆ. ಗ್ರಾಮದ ಮೂರ್ತೆಪ್ಪ ಅಮೃತಪ್ಪ ವಾಲಿಕಾರ ಎಂಬುವವರಿಗೆ ಈ ಆಕಳು ಸೇರಿದೆ. ತಮ್ಮ ಮನೆಯ ಪಕ್ಕದ ಶೆಡ್‌ನಲ್ಲಿ ಆಕಳು ಕಟ್ಟಿದ್ದರು. ಸಿಡಿಲಿನ ಹೊಡೆತಕ್ಕೆ ಆಕಳು ಮೃತಪಟ್ಟಿದೆ. ಸ್ಥಳಕ್ಕೆ ಗ್ರಾಮ ಆಡಳಿತ ಅಧಿಕಾರಿ ಎಂ.ಎಸ್.ಗುಡಿಸಾಗರ, ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಪಿ.ವಿ.ಜಾಧವ ಭೇಟಿ ನೀಡಿ ಪರಿಶೀಲಿಸಿದ್ದು, ಮಾಹಿತಿ ಪಡೆದರು.

ಗುಳೇದಗುಡ್ಡ: ಸಮೀಪದ ಹಂಸನೂರ ಗ್ರಾಮದಲ್ಲಿ ಶುಕ್ರವಾರ ಗುಡುಗು ಸಿಡಿಲು ಸಮೇತ ಸುರಿದ ಮಳೆಯಿಂದಾಗಿ ಮನೆಯ ಪಕ್ಕದಲ್ಲಿ ಕಟ್ಟಿದ್ದ ಆಕಳು ಸಿಡಿಲು ಬಡಿದು ಮೃತಪಟ್ಟಿದೆ. ಗ್ರಾಮದ ಮೂರ್ತೆಪ್ಪ ಅಮೃತಪ್ಪ ವಾಲಿಕಾರ ಎಂಬುವವರಿಗೆ ಈ ಆಕಳು ಸೇರಿದೆ. ತಮ್ಮ ಮನೆಯ ಪಕ್ಕದ ಶೆಡ್‌ನಲ್ಲಿ ಆಕಳು ಕಟ್ಟಿದ್ದರು. ಸಿಡಿಲಿನ ಹೊಡೆತಕ್ಕೆ ಆಕಳು ಮೃತಪಟ್ಟಿದೆ. ಸ್ಥಳಕ್ಕೆ ಗ್ರಾಮ ಆಡಳಿತ ಅಧಿಕಾರಿ ಎಂ.ಎಸ್.ಗುಡಿಸಾಗರ, ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಪಿ.ವಿ.ಜಾಧವ ಭೇಟಿ ನೀಡಿ ಪರಿಶೀಲಿಸಿದ್ದು, ಮಾಹಿತಿ ಪಡೆದರು. ಕೊಂಕಣಕೊಪ್ಪ ಗ್ರಾಮದಲ್ಲಿಯೂ ಶುಕ್ರವಾರ ಭಾರಿ ಬಿರುಗಾಳಿ ಮಳೆಗೆ ರೈತ ಹನಮಂತ ಯರಗೊಪ್ಪ ಎಂಬುವರ 1.20 ಎಕರೆ ಜಮೀನಿನಲ್ಲಿ ಬೆಳೆದ ಬಾಳೆ ಬೆಳೆ ಸಂಪೂರ್ಣ ನೆಲಕಚ್ಚಿದೆ. ಇದರಿಂದ ರೈತ ಹನಮಂತ ಯರಗೊಪ್ಪ ಆರ್ಥಿಕ ಸಂಕಷ್ಟಕ್ಕೆ ಒಳಗಾಗುವಂತಾಗಿದೆ. ಸ್ಥಳಕ್ಕೆ ಗ್ರಾಮ ಆಡಳಿತ ಅಧಿಕಾರಿ ಎಂ.ಎಸ್.ಗುಡಿಸಾಗರ ಹಾನಿಯಾದ ಬೆಳೆಯ ಬಗ್ಗೆ ಮಾಹಿತಿ ಪಡೆದರು.