ಅಂಬೇಡ್ಕರ್ ಫೋಟೋ ವಿರೂಪ: ಕಠಿಣ ಶಿಕ್ಷೆ ನೀಡಿ

| Published : Oct 26 2025, 02:00 AM IST

ಅಂಬೇಡ್ಕರ್ ಫೋಟೋ ವಿರೂಪ: ಕಠಿಣ ಶಿಕ್ಷೆ ನೀಡಿ
Share this Article
  • FB
  • TW
  • Linkdin
  • Email

ಸಾರಾಂಶ

ಅಂಬೇಡ್ಕರ್ ಭಾವಚಿತ್ರ ಹಾಗೂ ಬುದ್ಧರ ಪುತ್ಥಳಿಯನ್ನು ವಿರೂಪಗೊಳಿಸಿರುವ ತಾಲೂಕಿನ ಜ್ಯೋತಿಗೌಡನಪುರ ಗ್ರಾಮಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್‌ಕುಮಾರ್, ನಗರಸಭಾ ಅಧ್ಯಕ್ಷ ಸುರೇಶ್ ಹಾಗೂ ಮುಖಂಡರು ಭೇಟಿ ಪರಿಶೀಲಿಸಿ, ಗ್ರಾಮದ ರಸ್ತೆಯಲ್ಲಿ ಶಾಮಿಯಾನ ಹಾಕಿ ಗ್ರಾಮಸ್ಥರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಘಟನೆ ಕುರಿತು ಮಾಹಿತಿ ಪಡೆದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಅಂಬೇಡ್ಕರ್ ಭಾವಚಿತ್ರ ಹಾಗೂ ಬುದ್ಧರ ಪುತ್ಥಳಿಯನ್ನು ವಿರೂಪಗೊಳಿಸಿರುವ ತಾಲೂಕಿನ ಜ್ಯೋತಿಗೌಡನಪುರ ಗ್ರಾಮಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್‌ಕುಮಾರ್, ನಗರಸಭಾ ಅಧ್ಯಕ್ಷ ಸುರೇಶ್ ಹಾಗೂ ಮುಖಂಡರು ಭೇಟಿ ಪರಿಶೀಲಿಸಿ, ಗ್ರಾಮದ ರಸ್ತೆಯಲ್ಲಿ ಶಾಮಿಯಾನ ಹಾಕಿ ಗ್ರಾಮಸ್ಥರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಘಟನೆ ಕುರಿತು ಮಾಹಿತಿ ಪಡೆದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್‌ಕುಮಾರ್ ಮಾತನಾಡಿ, ಅಂಬೇಡ್ಕರ್ ಭಾವಚಿತ್ರ ಹಾಗೂ ಬುದ್ಧರ ಪುತ್ಥಳಿಯನ್ನು ವಿರೂಪಗೊಳಿಸಿರುವುದು ಖಂಡನೀಯ. ಬುದ್ಧ, ಅಂಬೇಡ್ಕರ್ ಅವರು ದೇವರ ಸಮಾನರು. ಅವರನ್ನು ವಿದೇಶಗಳಲ್ಲಿ ದೇವರಾಗಿ ಆರಾಧಿಸಲಾಗುತ್ತದೆ. ಅಂತಹ ಮಹಾನ್‌ ಪುರುಷರ ಪುತ್ಥಳಿ, ಭಾವಚಿತ್ರವನ್ನು ಕಿಡಿಗೇಡಿಗಳು ವಿರೂಪಗೊಳಿಸಿರುವುದನ್ನು ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವ ಕೆಲಸವಾಗಿದೆ. ಅಪರಾಧಿಗಳಿಗೆ ದೊಡ್ಡಮಟ್ಟದ ಶಿಕ್ಷೆಗೆ ಒಳಪಡಿಸಬೇಕು ಎಂದರು.

ಯಾರೂ ಕಿಡಿಗೇಡಿಗಳು ಅಂಬೇಡ್ಕರ್‌ ಭಾವಚಿತ್ರ, ಬುದ್ಧರ ಪುತ್ಥಳಿಯನ್ನು ವಿರೂಪಗೊಳಿಸಿದ ಮಾತ್ರಕ್ಕೆ ಅಂಬೇಡ್ಕರ್, ಬುದ್ಧರ ಗೌರವ, ಕೀರ್ತಿ ಕಡಿಮೆ ಆಗಲ್ಲ. ಅಂಬೇಡ್ಕ‌ರ್ ಬರೆದಿರುವ ಸಂವಿಧಾನ ಶಾಶ್ವತವಾಗಿದೆ. ಸಂವಿಧಾನದಡಿಯಲ್ಲಿ ನಾವೆಲ್ಲರೂ ಜೀವನ ಮಾಡಬೇಕಾಗಿದೆ. ಆರೋಪಿಗಳನ್ನು ಬಂಧಿಸುವ ತನಕ ಗ್ರಾಮಸ್ಥರೊಂದಿಗೆ ಇರುವುದಾಗಿ ತಿಳಿಸಿದರು. ನಗರಸಭಾ ಅಧ್ಯಕ್ಷ ಸುರೇಶ್ ಮಾತನಾಡಿ, ಅಂಬೇಡ್ಕರ್ ಭಾವಚಿತ್ರ ಹಾಗೂ ಬುದ್ಧರ ಪುತ್ಥಳಿಯನ್ನು ವಿರೂಪಗೊಳಿಸಿರುವ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಜ್ಯೋತಿಗೌಡಪುರದಲ್ಲಿ ಎಲ್ಲರೂ ಸಾಮರಸ್ಯದಿಂದ ಜೀವನ ಮಾಡುತ್ತಿದ್ದಾರೆ. ಗ್ರಾಮದಲ್ಲಿ ಅಶಾಂತಿ ಸೃಷ್ಟಿ ಮಾಡುವ ದುರುದ್ದೇಶದಿಂದ ಯಾರು ಕಿಡಿಗೇಡಿಗಳು ಇಂತಹ ಹೇಯಕೃತ ಮಾಡಿರುವುದ ತೀವ್ರ ಖಂಡನೀಯ ಎಂದರು.

ನಿಜಗುಣರಾಜು ಮಾತನಾಡಿ, ಅಂಬೇಡ್ಕರ್ ಬರೆದ ಸಂವಿಧಾನವನ್ನು ಎಲ್ಲರೂ ಆರಾಧಿಸುತ್ತಾರೆ. ಅಂಬೇಡ್ಕ‌ರ್ ಅವರಿಗೆ ಅವಮಾನ ಮಾಡಿರುವುದು ಒಂದು ಹೇಯಕೃತ್ಯವಾಗಿದೆ. ಸಾಮರಸ್ಯದ ಪಿತಾಮಹ, ಎಲ್ಲರೂ ಪೂಜಿಸುವಂತಹ ಗೌತಮ ಬುದ್ಧನ ವಾಣಿಗಳೆಂದರೆ ಮನಜು ಜೀವನದ ಆದರ್ಶ. ಅಂತಹ ಮಹಾನ್ ನಾಯಕರಿಗೆ ಅವಮಾನ ಮಾಡಿರುವ ಆರೋಪಿಗಳಿಗೆ ಸರಿಯಾಗಿ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೃಷಬೇಂದ್ರಪ್ಪ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆ‌ರ್.ಅಂಬೇಡ್ಕರ್ ಭಾವಚಿತ್ರ ಹಾಗೂ ಬುದ್ಧರ ಪುತ್ಥಳಿಯನ್ನು ವಿರೂಪಗೊಳಿಸಿರುವುದು ಅತ್ಯಂತ ಖಂಡನೀಯ. ಇಂತಹ ಹೇಯಕೃತ್ಯ ಎಸಗುವ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲು ಕೇಂದ್ರ, ರಾಜ್ಯ ಸರ್ಕಾರ ವಿಶೇಷ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮೂಡ್ನಾಕೂಡುಪ್ರಕಾಶ್, ಹೊನ್ನೂರು ಮಹದೇವಸ್ವಾಮಿ, ನಗರಸಭಾ ಅಧ್ಯಕ್ಷರಾದ ಸುರೇಶ್, ಜಿಲ್ಲಾ ಉಪಾಧ್ಯಕ್ಷರಾದ ಶಿವವಿರಾಟ್, ನಟರಾಜು, ನಗರಸಭಾ ಸದಸ್ಯರಾದ ಚಂದ್ರಶೇಖರ್, ಚಾಮರಾಜನಗರ ಗ್ರಾಮಾಂತರ ಮಂಡಲ ಅಧ್ಯಕ್ಷ ಕಾಡಳ್ಳಿ ಕುಮಾರ್,ಯುವ ಮೋರ್ಚಾದ ಸೂರ್ಯಕುಮಾರ್, ಮುಖಂಡ ಹೂoಗನೂರು ಮಹದೇವಸ್ವಾಮಿ, ವೇಣುಗೋಪಾಲ್, ಶೇಷಪ್ಪ ಪಾಸ್ವಾನ್, ನಿಂಗನಾಯಕ, ಗಂಗಾಧರ್ , ಚಿಕ್ಕಣ್ಣ, ಶಿವಮಲ್ಲು, ಬಸವಣ್ಣನಾಯಕ, ಇತರರು ಭಾಗವಹಿಸಿದ್ದರು.