ಸಾರಾಂಶ
ಡಾ. ಅಂಬೇಡ್ಕರ್ ಅವರ ಬದುಕು, ಸಾಧನೆ ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕು. ಶೈಕ್ಷಣಿಕ ಸಾಧನೆಯ ಮೂಲಕ ಉನ್ನತ ಸ್ಥಾನಮಾನಗಳನ್ನು ಹೊಂದಲು ಸಂವಿಧಾನದ ಮೂಲಕ ಎಲ್ಲಾ ಅವಕಾಶಗಳನ್ನು ಡಾ. ಅಂಬೇಡ್ಕರ್ ಕಲ್ಪಿಸಿಕೊಟ್ಟಿದ್ದಾರೆ ಎಂದು ಕಲಬುರಗಿಯ ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತತೆ)ದ ಇತಿಹಾಸ ಸಹ ಪ್ರಾಧ್ಯಾಪಕ ಡಾ. ವಿಜಯಕುಮಾರ ಸಾಲಿಮನಿ ಹೇಳಿದರು.
ಕನ್ನಡಪ್ರಭ ವಾರ್ತೆ ಶಹಾಪುರ
ಡಾ. ಅಂಬೇಡ್ಕರ್ ಅವರ ಬದುಕು, ಸಾಧನೆ ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕು. ಶೈಕ್ಷಣಿಕ ಸಾಧನೆಯ ಮೂಲಕ ಉನ್ನತ ಸ್ಥಾನಮಾನಗಳನ್ನು ಹೊಂದಲು ಸಂವಿಧಾನದ ಮೂಲಕ ಎಲ್ಲಾ ಅವಕಾಶಗಳನ್ನು ಡಾ. ಅಂಬೇಡ್ಕರ್ ಕಲ್ಪಿಸಿಕೊಟ್ಟಿದ್ದಾರೆ ಎಂದು ಕಲಬುರಗಿಯ ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತತೆ)ದ ಇತಿಹಾಸ ಸಹ ಪ್ರಾಧ್ಯಾಪಕ ಡಾ. ವಿಜಯಕುಮಾರ ಸಾಲಿಮನಿ ಹೇಳಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ 2023-24ನೇ ಸಾಲಿನ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಸಮಾರೋಪ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ವ್ಯರ್ಥ ಕಾಲಹರಣ ಮಾಡದೆ ಆಳವಾದ ಅಧ್ಯಯನದಲ್ಲಿ ತೊಡಗಿಸಿಕೊಂಡ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಲಬುರಗಿಯ ಸರ್ಕಾರಿ ಮಹಾವಿದ್ಯಾಲಯದ ಪರೀಕ್ಷಾ ನಿಯಂತ್ರಕರಾದ ಡಾ. ಟಿ.ವಿ. ಅಡಿವೇಶ ಮಾತನಾಡಿ, ಕಠಿಣ ಪರಿಶ್ರಮ, ನಿರಂತರ ಪ್ರಯತ್ನ, ಶ್ರದ್ಧೆಯ ಓದು ಹಾಗೂ ಸಾಧನೆಯ ಛಲದಿಂದ ವಿದ್ಯಾರ್ಥಿಗಳು ಉನ್ನತ್ತವಾದುದ್ದನ್ನು ಸಾಧಿಸಲು ಸಾಧ್ಯವಾಗುತ್ತದೆ. ವಿದ್ಯೆಯೊಂದಿಗೆ ವಿನಯ, ಸೌಜನ್ಯತೆ, ಗುರು-ಹಿರಿಯರಿಗೆ ಗೌರವ ಮುಂತಾದ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನೌಕರ ಸಂಘದ ಜಿಲ್ಲಾಧ್ಯಕ್ಷ ಶ್ರೀಶೈಲ್ ಹೊಸಮನಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಸಂಗಪ್ಪ ಎಸ್. ರಾಂಪುರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕೃತಿಕ ಸಂಚಾಲಕ ಡಾ. ಹಯ್ಯಾಳಪ್ಪ ಸುರಪುರಕರ್, ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್.ಎಸ್.ಎಸ್. ಅಧಿಕಾರಿ ಡಾ. ಶಂಕ್ರಮ್ಮ ಪಾಟೀಲ್ ವಾರ್ಷಿಕ ವರದಿ ಮಂಡಿಸಿದರು. ನಿವೃತ್ತರಾದ ವಾಣಿಜ್ಯಶಾಸ್ತ್ರ ಉಪನ್ಯಾಸಕ ಭೀಮರಾಯ ಹೊಸಮನಿ ಅವರಿಗೆ ಕಾಲೇಜಿನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಮುಖಂಡರಾದ ಮಲ್ಲಿಕಾರ್ಜುನ ಪೂಜಾರಿ, ಹಿರಿಯ ಅಧ್ಯಾಪಕರಾದ ಪ್ರೊ. ಸಿದ್ಧಪ್ಪ ದಿಗ್ಗಿ, ಪ್ರೊ. ಯಂಕಯ್ಯ, ಪ್ರೊ. ಭೀಮಣ್ಣ ಮಾಲಿಪಾಟೀಲ್ ಮತ್ತು ವಿವಿಧ ಘಟಕಗಳ ಸಂಚಾಲಕರಾದ ಡಾ. ಬಸಂತ ಸಾಗರ, ಕಾಳಮ್ಮ ಎಚ್.ಎಸ್., ಡಾ. ಮಹಮ್ಮದ್ ಆರಿಫ್ ಇನಾಮದಾರ್, ಡಾ. ಮಹಾದೇವಪ್ಪ, ಡಾ. ಮಹಿಬೂಬಅಲಿ ಸೌದಾಗರ್, ಡಾ. ದಯಾನಂದ ಕಾಂಬ್ಳೆ, ಅಧಿಕ್ಷಕರಾದ ಬುರಾನುದ್ಧೀನ್ ಹಾಗೂ ಉಪನ್ಯಾಸಕರಾದ ಅರ್ಜುನ್ ಕನ್ಯಾಕೋಳುರ, ಶ್ರೀಶೈಲ, ಡಾ. ದೇವಪ್ಪ ಹೊಸ್ಮನಿ, ರಾಜಶೇಖರ ದಿಗ್ಗಿ, ಪರಮಜ್ಯೋತಿ, ರೇಣುಕಾಸ್ವಾಮಿ, ಮರೆಪ್ಪ ಜಾಲಿಮಂಚಿ, ಡಾ. ಶರಣಪ್ಪ ಸಂಘರ್ಷ, ಸಿಬ್ಬಂದಿ ಚಂದ್ರಕಲಾ, ಮಹಾಲಿಂಗ ಇತರರಿದ್ದರು. ವಿವಿಧ ಕ್ರೀಡಾ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.