ಅಂಬೇಡ್ಕರ್‌ ಸಮಾಜಮುಖಿ ಚಿಂತನೆಗಳು ಇಂದಿಗೂ ದಾರಿದೀಪ: ಡಾ. ಅಜಯಸಿಂಗ್

| Published : Apr 15 2024, 01:21 AM IST

ಅಂಬೇಡ್ಕರ್‌ ಸಮಾಜಮುಖಿ ಚಿಂತನೆಗಳು ಇಂದಿಗೂ ದಾರಿದೀಪ: ಡಾ. ಅಜಯಸಿಂಗ್
Share this Article
  • FB
  • TW
  • Linkdin
  • Email

ಸಾರಾಂಶ

ಸಂವಿಧಾನ ಶಿಲ್ಪಿ, ಮಹಾಮಾನವತಾವಾದಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಜೀವನದುದ್ದಕ್ಕೂ ಸಾಮಾಜಿಕ ಸಮಾನತೆಗೆ ಹೋರಾಟ ನಡೆಸಿದ್ದ ಅವರ ಸಮಾಜಮುಖಿ ಚಿಂತನೆಗಳು ಇಂದಿಗೂ ದಾರಿದೀಪಗಳಾಗಿವೆ.

ಕನ್ನಡಪ್ರಭ ವಾರ್ತೆ ಜೇವರ್ಗಿ

ಸಂವಿಧಾನ ಶಿಲ್ಪಿ, ಮಹಾಮಾನವತಾವಾದಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಜೀವನದುದ್ದಕ್ಕೂ ಸಾಮಾಜಿಕ ಸಮಾನತೆಗೆ ಹೋರಾಟ ನಡೆಸಿದ್ದ ಅವರ ಸಮಾಜಮುಖಿ ಚಿಂತನೆಗಳು ಇಂದಿಗೂ ದಾರಿದೀಪಗಳಾಗಿವೆ ಎಂದು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಡಾ. ಅಜಯಸಿಂಗ್ ಹೇಳಿದರು.

ಅವರು ಪಟ್ಟಣದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಡಾ,ಬಾಬಾಸಾಹೇಬ ಅಂಬೇಡ್ಕರ ಅವರು ಸಂವಿಧಾನ ರಚಿಸಿ ಈ ದೇಶದ ಪ್ರತಿಯೊಬ್ಬ ನಾಗರಿಕನಿಗೆ ಒಂದೆ ಕಾನೂನು ಮಾಡಿದರು. ಇಂಥ ಮಹಾನ ನಾಯಕರ ಸಮಾಜಮುಖಿ ಚಿಂತನೆಗಳು ಇಂದಿಗೂ ದಾರಿದೀಪಗಳಾಗಿವೆ. ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಅಂಬೆವಾಡಿಯಲ್ಲಿ ರಾಮಜಿ ಸಕ್ಪಾಲ್ ಹಾಗೂ ಭೀಮಬಾಯಿ ದಂಪತಿಗಳ 14 ನೇ ಮಗನಾಗಿ 1891ರ ಏ.14 ರಂದು ಜನಿಸಿದರು. ಓದುವದರಲ್ಲಿ ಅಪಾರ ಆಸಕ್ತಿ, ಚುರುಕುತನ ದಿಂದ ಅಧ್ಯಾಪಕರ ಮೆಚ್ಚುಗೆಗೆ ಪಾತ್ರರಾಗಿದ್ದರು ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ ಮಲ್ಲಣ್ಣ ಯಲಗೋಡ, ತಾಲೂಕು ಆರೋಗ್ಯಾಧಿಕಾರಿ ಡಾ.ಸಿದ್ದು ಪಾಟೀಲ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಹಳ್ಳೆಪ್ಪಾಚಾರ್ಯ ಜೋಶಿ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ, ಲೋಕೋಪಯೋಗಿ ಎಇಇ ತಜಮುಲ್ ಹುಸೇನ್, ತಾಪಂ ಅಧಿಕಾರಿ ರೇವಣಸಿದ್ದಪ್ಪ, ಸಮಾಜ ಕಲ್ಯಾಣ ಇಲಾಖೆ ಮೋನ್ನಮ್ಮ ಸುತ್ತಾರ, ಎಪಿಎಂಸಿ ಕಾರ್ಯದರ್ಶಿ ಸುಮಂಗಲಾ ಹೂಗಾರ, ಪಶು ಅಧಿಕಾರಿ ಡಾ.ಶೋಭಾ ಸಜ್ಜನ್, ಗ್ರೇಡ್-2 ತಹಸೀಲ್ದಾರ ಪ್ರಸನ್ನ ಮೊಘೇಕರ, ಬಸವಕೇಂದ್ರ ಅಧ್ಯಕ್ಷ ಶರಣಬಸವ ಕಲ್ಲಾ, ಮುಖಂಡರಾದ ರಾಜಶೇಖರ ಸೀರಿ, ಮಲ್ಲಣ್ಣ ಕೊಡಚಿ, ಭೀಮರಾಯ ನಗನೂರ, ಶಾಂತಪ್ಪ ಕೂಡಲಗಿ, ಶ್ರೀಹರಿ ಕರಕಿಹಳ್ಳಿ, ದೌಲಪ್ಪ ಮದನ್, ರವಿ ಕುರಳಗೇರಾ, ಮಲ್ಲಿಕಾರ್ಜುನ ಕೆಲ್ಲೂರ, ಶ್ರೀಮಂತ ಧನ್ನಕರ್, ಸಂಗಮೇಶ ಕೋಂಬಿನ್, ಮಹೇಶ ಕೊಕಿಲೆ, ಚಂದ್ರಶೇಖರ ನೇರಡಗಿ, ರಾಜಶೇಖರ ಮುತ್ತಕೋಡ, ರವಿ ಕೋಳಕೂರ, ಶಿವು ಕಲ್ಲಾ, ರಫೀಕ್ ಮಡಕಿ, ಅಜ್ಜು ಲಕ್ಪತಿ, ಮರೆಪ್ಪ ಸರಡಗಿ ಸೇರಿದಂತೆ ನೂರಾರು ಜನ ಡಾ.ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.