ಪು-3ಕ್ಕೆ...ಸಿಡಿಲು ಬಡಿದು ಮೃತಪಟ್ಟ ಮಹಿಳೆ ಮನೆಗೆ ಶಾಸಕರ ಭೇಟಿ, ಸಾಂತ್ವನ

| Published : Apr 15 2024, 01:21 AM IST

ಸಾರಾಂಶ

ತಾಂಬಾ: ಈಚೆಗೆ ಸಿಡಿಲು ಬಡಿದು ಮೃತಪಟ್ಟ ಗ್ರಾಮದ ಭಾರತಿ ಹಣಮಂತ ಕೆಂಗನಾಳ ಅವರ ಮನೆಗೆ ಭಾನುವಾರ ಶಾಸಕ ಅಶೋಕ ಮನಗೂಳಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಕನ್ನಡಪ್ರಭ ವಾರ್ತೆ ತಾಂಬಾಈಚೆಗೆ ಸಿಡಿಲು ಬಡಿದು ಮೃತಪಟ್ಟ ಗ್ರಾಮದ ಭಾರತಿ ಹಣಮಂತ ಕೆಂಗನಾಳ ಅವರ ಮನೆಗೆ ಭಾನುವಾರ ಶಾಸಕ ಅಶೋಕ ಮನಗೂಳಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಇದೇ ಸಂದರ್ಭದಲ್ಲಿ ಮೃತರ ಕುಟುಂಬಕ್ಕೆ ಸರ್ಕಾರದಿಂದ ಮುಖ್ಯಮಂತ್ರಿ ಪರಿಹಾರ ನಿಧಿ ಮತ್ತು ಪ್ರಕೃತಿ ವಿಕೋಪ ನಿಧಿಯಡಿ ಪರಿಹಾರ ₹೫ ಲಕ್ಷ ಹಣವನ್ನು ತಕ್ಷಣ ನೀಡಲು ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರಿಗೆ ಹೇಳಿದರು. ಅವರು ಎರಡೇ ದಿನದಲ್ಲಿ ಪರಿಹಾರ ನಿಧಿ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಇಂಡಿ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ, ಗ್ರಾಪಂ ಅಧ್ಯಕ್ಷ ರಜಾಕ್ ಚಿಕ್ಕಗಸಿ, ಕಂದಾಯ ನಿರೀಕ್ಷಕ ಹುಸೇನಿ ಗುನ್ನಾಪೂರ, ಗ್ರಾಮ ಆಡಳಿತಧಿಕಾರಿ ಎಮ್.ಎಸ್. ಮಾರಲಾಬಾವಿ, ಮಾಜಿ ಗ್ರಾಪಂ ಅಧ್ಯಕ್ಷ ರಾಚಪ್ಪ ಗಳೇದ, ಗ್ರಾಪಂ ಸದಸ್ಯೆರಾದ ಅಪ್ಪಣ್ಣ ಕಲ್ಲೂರ, ಸಿದ್ದು ಹತ್ತಳ್ಳಿ, ಪರಸು ಬಿಸನಾಳ, ಮಹಮ್ಮದ ದಡೇದ, ರವಿ ನಡುಗಡ್ಡಿ, ಶಿವರಾಜ ಕೆಂಗನಾಳ, ಶ್ರೀಧರ ಅವಟಿ, ಮುನ್ನ ನಾಗಠಾಣ, ಜೈಬೀಮ ರೂಗಿ ಸೇರಿದಂತೆ ಇನ್ನು ಅನೇಕರು ಇದ್ದರು. ನಂತರ ತೆರಳಿ ನೂತನ ಬಸ್ ನಿಲ್ದಾಣದ ಜಾಗವನ್ನು ವೀಕ್ಷಿಸಿ ಕೆಲವೇ ದಿನಗಳಲ್ಲಿ ಈ ಗ್ರಾಮದ ಬಹುದಿನಗಳ ಬೇಡಿಕೆಯಾದ ಬಸ್ ನಿಲ್ದಾಣವನ್ನು ತಾಲೂಕು ಮಟ್ಟದಲ್ಲಿ ಇರುವ ಹಾಗೆ ನಿರ್ಮಾಣ ಮಾಡಲಾಗುವದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.