ದೇಶವನ್ನು ದಾಸ್ಯ, ದಾರಿದ್ರ್ಯದಿಂದ ರಕ್ಷಿಸಿದ್ದು ಅಂಬೇಡ್ಕರ್

| Published : Apr 16 2024, 01:04 AM IST / Updated: Apr 16 2024, 01:05 AM IST

ಸಾರಾಂಶ

ದೇಶವನ್ನು ದಾಸ್ಯ ಮತ್ತು ದಾರಿದ್ರ್ಯದಿಂದ ವಿಮೋಚನೆ ಮಾಡಿದ್ದು ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಧನಂಜಯ ಹೊನ್ನಾಳಿಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ದೇಶವನ್ನು ದಾಸ್ಯ ಮತ್ತು ದಾರಿದ್ರ್ಯದಿಂದ ವಿಮೋಚನೆ ಮಾಡಿದ್ದು ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಧನಂಜಯ ಹೇಳಿದರು.

ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಆಂತರಿಕ ಗುಣಮಟ್ಟ ಭರವಸಾ ಕೋಶ, ಯುವ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಸಾಂಸ್ಕತಿಕ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗಾಂಧಿಯುಗಕ್ಕೆ ಸೇರಿದ ಡಾ. ಬಿ.ಆರ್. ಅಂಬೇಡ್ಕರ್ ಅವರು ಗಾಂಧೀಜಿ ಪ್ರಭಾವದ ಹೊರತಾಗಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಮಾನಸಿಕ ಸ್ವಾತಂತ್ರ್ಯ ನಿಜವಾದ ಸ್ವಾತಂತ್ರ್ಯ. ಯಾವ ವ್ಯಕ್ತಿಯ ಮನಸ್ಸು ಸ್ವತಂತ್ರವಾಗಿ ಇರುವುದಿಲ್ಲವೋ ಆ ವ್ಯಕ್ತಿ ಕೈಗಳಲ್ಲಿ ಸರಪಳಿಗಳು ಇಲ್ಲದಿದ್ದರೂ ಗುಲಾಮನಾಗಿ ಇರುವವನೇ ಹೊರತು, ಸ್ವತಂತ್ರ ಆಗಿರಲು ಸಾಧ್ಯವಿಲ್ಲವೆಂದು ಅಂಬೇಡ್ಕರ್ ಹೇಳಿದ್ದಾರೆಂದರು.

ಡಾ. ಬಿ.ಆರ್. ಅಂಬೇಡ್ಕರ್ ಜಾಗತಿಕ, ರಾಜಕೀಯ ಮತ್ತು ಸಾಮಾಜಿಕ ವಿಜ್ಞಾನಿಯಾಗಿ ಜಗತ್ತಿಗೆ ಶ್ರೇಷ್ಠ ಪರಂಪರೆ ಬಿಟ್ಟುಹೋಗಿದ್ದಾರೆ. ದೇಶದ ದಲಿತರ, ಶೋಷಿತರ, ಮಹಿಳೆಯರ, ರೈತರ, ಕಾರ್ಮಿಕರ, ವಿಮೋಚನೆಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ್ದಾರೆ. ಶಿಕ್ಷಣ, ಸಂಘಟನೆ, ಸ್ವಾಭಿಮಾನದ ಮೂಲಕ ಸಮಸಮಾಜ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದರು. ಅಸ್ಪೃಶ್ಯತೆ ನಿವಾರಣೆಯಾಗದ ಹೊರತು, ದೇಶದ ಸ್ವಾತಂತ್ರ್ಯ ಅರ್ಥಹೀನ ಎಂದರು.

ಪ್ರೊ. ದೇವರಾಜ ಸಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲ ಧನಂಜಯ ಅವರು ಅಂಬೇಡ್ಕರ್ ಅವರ ನೂತನ ಭಾವಚಿತ್ರ ಅನಾವರಣ ಮಾಡಿದರು.

ಕಾರ್ಯಕ್ರಮದಲ್ಲಿ, ಪ್ರೊ. ಗೀತಾ ಎಚ್.ವಿ., ಪ್ರೊ. ಹರಾಳು ಮಹಾಬಲೇಶ್ವರ, ಡಾ. ಮಂಜುನಾಥಗುರು ವಿ.ಜಿ., ಮತ್ತು ಬೋಧಕೇತರ ಸಿಬ್ಬಂದಿ ಶ್ರೀ ಹನುಮಂತಪ್ಪ ಡಿ., ಶ್ರೀ ಜಗದೀಶಪ್ಪ, ಕೀರ್ತನ ಎನ್.ಎಸ್., ಪ್ರ.ದ.ಸ., ಸೀಮಾಬಾನು ಎಸ್. ಪ್ರ.ದ.ಸ. ಕಚೇರಿ ಸಹಾಯಕ ರಿಯಾಜ್ ವೈ.ಆರ್., ಅಣ್ಣಪ್ಪ ಹಾಜರಿದ್ದರು.

ಅಧ್ಯಾಪಕ ಕಾರ್ಯದರ್ಶಿ, ಮೇದಿನಿ ಮತ್ತು ಮದನ್ ಪ್ರಾರ್ಥಿಸಿದರು. ಯುವ ರೆಡ್ ಕ್ರಾಸ್ ಘಟಕ ಸಂಚಾಲಕ ಮತ್ತು ಗ್ರಂಥಪಾಲಕ ಪ್ರೊ. ನಾಗರಾಜ ನಾಯ್ಕ ಎಂ. ಎಲ್ಲರನ್ನು ಸ್ವಾಗತಿಸಿದರು. ಡಾ. ಹರೀಶ ಪಿ.ಎಸ್. ಕಾರ್ಯಕ್ರಮ ನಡೆಸಿಕೊಟ್ಟರು. ಪ್ರೊ. ಬೆಳ್ಳುಳ್ಳಿ ಕೊಟ್ರೇಶ ವಂದಿಸಿದರು.

- - - -15ಎಚ್.ಎಲ್.ಐ2:

ಹೊನ್ನಾಳಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ.ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ನಡೆಯಿತು.