ಅಂಬೇಡ್ಕರ್‌ ಪ್ರತಿಮೆ, ಹೈಟೆಕ್ ಗ್ರಂಥಾಲಯ ನಿರ್ಮಾಣ

| Published : Apr 15 2024, 01:22 AM IST

ಅಂಬೇಡ್ಕರ್‌ ಪ್ರತಿಮೆ, ಹೈಟೆಕ್ ಗ್ರಂಥಾಲಯ ನಿರ್ಮಾಣ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕೋಡಿ: ವರಾಳೆ ಮನೆಯಲ್ಲಿ ಡಾ.ಅಂಬೇಡ್ಕರ್ ತಂಗಿದ್ದ ಸಂದರ್ಭದಲ್ಲಿ ಸಮೀಪದ ಸ್ತವನಿಧಿ ಗ್ರಾಮಕ್ಕೆ ಕುದುರೆ ಸವಾರಿ ಮೂಲಕ ತೆರಳುತ್ತಿದ್ದರು. ಆ ಸ್ಥಳದಲ್ಲಿ ಯುವವರ್ಗ ಸೇರಿದಂತೆ ಎಲ್ಲರ ಜ್ಞಾನ ವೃದ್ಧಿಯಾಗಲೆಂದು ಅಲ್ಲಿ ಹೈಟೆಕ್ ಗ್ರಂಥಾಲಯ ನಿರ್ಮಿಸಲಾಗುವುದು. ಕುದುರೆ ಮೇಲಿನ ಅಂಬೇಡ್ಕರ್‌ ಭಾವಚಿತ್ರ ಸಿಕ್ಕಿದ್ದು ಅಂತಹದ್ದೆ ಒಂದು ಪ್ರತಿಮೆ ಅಲ್ಲಿ ನಿರ್ಮಿಸಲಾಗುವುದು ಎಂದು ಶಾಸಕಿ ಶಶಿಕಲಾ ಜೊಲ್ಲೆ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ವರಾಳೆ ಮನೆಯಲ್ಲಿ ಡಾ.ಅಂಬೇಡ್ಕರ್ ತಂಗಿದ್ದ ಸಂದರ್ಭದಲ್ಲಿ ಸಮೀಪದ ಸ್ತವನಿಧಿ ಗ್ರಾಮಕ್ಕೆ ಕುದುರೆ ಸವಾರಿ ಮೂಲಕ ತೆರಳುತ್ತಿದ್ದರು. ಆ ಸ್ಥಳದಲ್ಲಿ ಯುವವರ್ಗ ಸೇರಿದಂತೆ ಎಲ್ಲರ ಜ್ಞಾನ ವೃದ್ಧಿಯಾಗಲೆಂದು ಅಲ್ಲಿ ಹೈಟೆಕ್ ಗ್ರಂಥಾಲಯ ನಿರ್ಮಿಸಲಾಗುವುದು. ಕುದುರೆ ಮೇಲಿನ ಅಂಬೇಡ್ಕರ್‌ ಭಾವಚಿತ್ರ ಸಿಕ್ಕಿದ್ದು ಅಂತಹದ್ದೆ ಒಂದು ಪ್ರತಿಮೆ ಅಲ್ಲಿ ನಿರ್ಮಿಸಲಾಗುವುದು ಎಂದು ಶಾಸಕಿ ಶಶಿಕಲಾ ಜೊಲ್ಲೆ ಭರವಸೆ ನೀಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ನಿಪ್ಪಾಣಿ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ಅಂಬೇಡ್ಕರ್‌ ಭಾವಚಿತ್ರಕ್ಕೆ ಪೂಜೆ, ಗೌರವ ನಮನಗಳನ್ನು ಸಲ್ಲಿಸಿ ಮಾತನಾಡಿದ ಅವರು, ಚಿಕ್ಕೋಡಿಯ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರಿಂದ ಆ ನ್ಯಾಯಾಲಯಕ್ಕೆ ₹38 ಕೋಟಿ ಅನುದಾನ ಅನುಮೋದನೆಗೊಳಿಸಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಬರುವ ದಿನಗಳಲ್ಲಿ ಅದು ಉದ್ಘಾಟನೆಗೊಳ್ಳಲಿದೆ ಎಂದರು.

ಲೋಕಸಭೆ ಚುನಾವಣೆಯಲ್ಲಿ ಡಾ.ಬಾಬಾಸಾಹೇಬ್‌ ಅಂಬೇಡ್ಕರ್ ಅವರು ಕಾಂಗ್ರೆಸ್ ಹುನ್ನಾರದಿಂದಾಗಿ ಸೋಲನುಭವಿಸಿದರು. ಅವರು ಚುನಾಯಿತರಾಗುತ್ತಿದ್ದಲ್ಲಿ ದೇಶ ಅಭಿವೃದ್ಧಿಯ ವೇಗ ಆಗಲೇ ಬೆಳೆಯುತ್ತಿತ್ತು. ಕಾಂಗ್ರೆಸ್ ಪಕ್ಷವು ಅನೇಕ ದಶಕಗಳವರೆಗೆ ಆಡಳಿತ ನಡೆಯಿಸಿತರಾದರೂ ಅವರಿಗೆ ಯಾವುದೇ ಗೌರವ ಸಲ್ಲಿಸದೇ ಸ್ಥಾನಮಾನ ನೀಡದೆ ವಂಚಿಸಿತು. ಆದರೆ, ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟದ ಸರ್ಕಾರವು ಅವರನ್ನು ಮರಣೋತ್ತರ ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡಿ ಅವರ ಕಾರ್ಯಕ್ಕೆ ಗೌರವಿಸಿತು ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಪಕ್ಷ ಆಡಳಿತಕ್ಕೆ ಬಂದ ನಂತರ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ನಾನಾವಿಧಗಳಲ್ಲಿ ಗೌರವ ಸಲ್ಲಿಸಿತು. ಕೋಟ್ಯಂತರ ರುಪಾಯಿಗಳ ಅನುದಾನದಲ್ಲಿ ಅವರ ಜನ್ಮಸ್ಥಳವನ್ನು ಅಭಿವೃದ್ಧಿಪಡಿಸಿ ಅಲ್ಲಿ ಸ್ಮಾರಕ ಸ್ಥಾಪಿಸಲಾಯಿತು. ಲಂಡನ್‌ನಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವಾಗ ಡಾ.ಅಂಬೇಡ್ಕರ್ ಅವರು ವಾಸಿಸುತ್ತಿರುವ ಸ್ಥಳವನ್ನು ಭಾರತ ಸರ್ಕಾರ ಖರೀದಿಸಿ ಅದನ್ನು ಪ್ರಧಾನಿ ಮೋದಿಯವರು ಶಿಕ್ಷಣಭೂಮಿಯಾಗಿ ಪರಿವರ್ತಿಸಿದರು. ಅಲ್ಲದೆ ಬೌದ್ಧಧರ್ಮವನ್ನು ದೀಕ್ಷೆ ಪಡೆದ ನಾಗಪುರದ ಸ್ಥಳವನ್ನು ಜೀರ್ಣೋದ್ಧಾರಗೊಳಿಸಿ ದೀಕ್ಷಾ ಸ್ಥಳ ಎಂದು ಹೆಸರಿಸಿ ಅಭಿವೃದ್ಧಿಪಡಿಸಿದರು. ದೆಹಲಿಯಲ್ಲಿಯ ಅವರ ಮಹಾನಿರ್ವಾಣ ಸ್ಥಳವನ್ನು ಕೋಟ್ಯಂತರ ರುಪಾಯಿಗಳ ಅನುದಾನದಲ್ಲಿ ಸ್ಮಾರಕವನ್ನಾಗಿ ಪರಿವರ್ತಿಸಿದರು ಎಂದರು.

ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಯೋಗಿತಾ ಘೋರ್ಪಡೆ, ನಗರಸಭೆ ಸದಸ್ಯ ಜಯವಂತ ಭಾಟಲೆ, ರಾಜು ಗುಂದೇಶಾ, ಸುನೀಲ ಪಾಟೀಲ, ಸದ್ದಾಂ ನಗಾರಜಿ, ನೀತಾ ಬಾಗಡೆ, ಪ್ರಭಾವತಿ ಸೂರ್ಯವಂಶಿ, ಕಾವೇರಿ ಮಿರ್ಜೆ, ಸೋನಲ್ ಕೋಠಾಡಿಯಾ, ದೀಪಕ ಮಾನೆ, ಅವಿನಾಶ ಮಾನೆ, ಗಣು ಗೋಸಾವಿ, ಪ್ರೇಮ ಪೋಳ, ದತ್ತಾ ಜೋತ್ರೆ ಉಪಸ್ಥಿತರಿದ್ದರು.ಕೋಟ್‌......ಎಲ್ಲ ದೇಶಗಳ ಸಂವಿಧಾನಗಳ ಅಧ್ಯಯನ ನಡೆಸಿ ಡಾ.ಅಂಬೇಡ್ಕರ್ ಅವರು ರಚಿಸಿದ ನಮ್ಮ ದೇಶದ ಸಂವಿಧಾನ ಇಡಿ ವಿಶ್ವಕ್ಕೆ ಮಾದರಿಯಾಗಿದೆ. ಅಂಬೇಡ್ಕರ್ ಬರೆದ ಸಂವಿಧಾನ ಪರಿಣಾಮ ನನ್ನಂತಹ ಓರ್ವ ಸಾಮಾನ್ಯ ಗೃಹಿಣಿ ಶಾಸಕಿಯಾಗಿ, ಸಚಿವೆಯಾಗಿ ಸಮಾಜದ ಸೇವೆ ಮಾಡುವ ಅವಕಾಶ ಸಿಕ್ಕಿತು. ದ್ರೌಪದಿ ಮುರ್ಮು ಅವರಿಗೆ ರಾಷ್ಟ್ರಪತಿಯಾಗುವ ಅವಕಾಶ ಸಿಕ್ಕಿದೆ.-ಶಶಿಕಲಾ ಜೊಲ್ಲೆ, ಶಾಸಕಿ