ಸಾರಾಂಶ
ಅಂಬೇಡ್ಕರ್ ದೇಶಕ್ಕೆ ಸಮರ್ಥ ಸಂವಿಧಾನ ನೀಡಿದ್ದಾರೆ. ಅಂಬೇಡ್ಕರ್ ದೇಶದ ಆಸ್ತಿ. ಅವರ ಬದುಕು, ತತ್ವ, ಚಿಂತನೆಗಳು ಪ್ರತಿಯೊಬ್ಬರಿಗೂ ಮಾದರಿಯಾಗಿವೆ. ಅವರಂತಹ ಮಹಾಪುರುಷರ ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಪ್ರಭಾಕರಗೌಡ ಎಚ್. ಹೇಳಿದರು.
ಹಿರೇಕೆರೂರು: ಅಂಬೇಡ್ಕರ್ ದೇಶಕ್ಕೆ ಸಮರ್ಥ ಸಂವಿಧಾನ ನೀಡಿದ್ದಾರೆ. ಅಂಬೇಡ್ಕರ್ ದೇಶದ ಆಸ್ತಿ. ಅವರ ಬದುಕು, ತತ್ವ, ಚಿಂತನೆಗಳು ಪ್ರತಿಯೊಬ್ಬರಿಗೂ ಮಾದರಿಯಾಗಿವೆ. ಅವರಂತಹ ಮಹಾಪುರುಷರ ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಪ್ರಭಾಕರಗೌಡ ಎಚ್. ಹೇಳಿದರು.
ಹಿರೇಕೆರೂರ ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ತಾಲೂಕು ಆಡಳಿತ ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ದಲಿತಪರ ಸಂಘಟನೆಗಳ ಆಶ್ರಯದಲ್ಲಿ ಭಾನುವಾರ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ೧೩೩ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿದರು.ಈ ವೇಳೆ ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಹಬೂಬಸಾಬ್ ನದಾಫ್, ಪಪಂ ಮುಖ್ಯಾಧಿಕಾರಿ ಕೋಡಿ ಭೀಮರಾಯ್, ಕ್ಷೇತ್ರ ಶಿಕ್ಷಾಣಾಧಿಕಾರಿ ಎನ್. ಶ್ರೀಧರ, ಮುಖಂಡರಾದ ದುರುಗೇಶ ತಿರಕ್ಕಪ್ಪನವರ, ಮಹದೇವಪ್ಪ ಮಾಳಮ್ಮನವರ, ಲಕ್ಷ್ಮೀಕಾಂತ ಬೊಮ್ಮಣ್ಣವರ, ಕಿರಣ ಲಮಾಣಿ, ಕುಮಾರ ಗುಂಡಗಟ್ಟಿ, ನಾಗರಾಜ ನಡವಿನಮನಿ, ಬಾಲಸಂದ್ರು ಬಾಲಬಸಣ್ಣವರ, ಬಸವರಾಜ ಪೂಜಾರ, ರುದ್ರಗೌಡ ದೊಡ್ಡಮಲ್ಲಪ್ಪನವರ, ಹನುಮಂತಪ್ಪ ಹರಿಜನ, ರಾಜು ಮಾದರ ಸೇರಿದಂತೆ ದಲಿತ ಮುಖಂಡರು ಮತ್ತು ಕಚೇರಿ ಸಿಬ್ಬಂದಿ ಇದ್ದರು.